ಟೆರೇಸ್​ ಮೇಲಿಂದ ಪಕ್ಕದ ಮನೆ ಅಂಕಲ್​ರನ್ನು ಮಾತನಾಡಿಸಿ ತಿರುಗಿದ್ರೆ ನಮ್ಮನೆ ಸೋಫಾದ ಮೇಲೆ ಕುಳಿತಿದ್ರು!

By Suchethana D  |  First Published Oct 13, 2024, 5:13 PM IST

ಭೂತ, ಪ್ರೇತ, ಆತ್ಮಗಳ ಇರುವಿಕೆಯ ಬಗ್ಗೆ ವಾದ, ಪ್ರತಿವಾದ, ವಿವಾದಗಳು ಇರುವ ನಡುವೆಯೇ ಫ್ಯಾಷನ್​ ಡಿಸೈನಲ್​ ಪಲ್ಲವಿ ಗೌಡ ಅವರ ಭಯಾನಕ ಕಥೆ ಕೇಳಿ.... 
 


ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. 

ಆದರೆ ಇದೀಗ ಫ್ಯಾಷನ್​ ಡಿಸೈನರ್​ ಪಲ್ಲವಿ ಗೌಡ ಅವರು ಯೂಟ್ಯೂಬರ್​ ರಾಜೇಶ್​ ಗೌಡ ಅವರ ಚಾಟ್​ ಷೋನಲ್ಲಿ ತಮಗಾಗಿರುವ ಭಯಾನಕ ಅನುಭವದ ಕುರಿತು ಹೇಳಿದ್ದಾರೆ. ತಾವು ಮನೆಯಲ್ಲಿ ಇದ್ದಾಗ ರಾತ್ರಿ ಯಾರೋ ಬಂದು ನನ್ನ ಕುತ್ತಿಗೆಯನ್ನು ಒತ್ತಿ ಹಿಡಿದ ಹಾಗಾಗುತ್ತಿತ್ತು, ಭಯದಿಂದ ಕಿರುಚಾಡುತ್ತಿದ್ದೆ. ಆದರೆ ನನ್ನ ಪತಿ ನನ್ನನ್ನು ಸಮಾಧಾನ ಮಾಡಿ ಏನೋ ಆ್ಯಸಿಡಿಸಿ ಇರಬೇಕು ಅಂತ ಹೇಳಿ ಸಮಾಧಾನ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಕೆಲವು ದಿನ ನಾನು ಮನೆಯಲ್ಲಿ ಇಲ್ಲದಾಗ ವಾಪಸ್​ ಬಂದು ನೋಡಿದರೆ ಮನೆಗೆ ಕಬ್ಬಿಣದ ಗೇಟನ್ನು ಮನೆಯವರು ಹಾಕಿಸಿದ್ದರು. ಪ್ರಶ್ನೆ ಮಾಡಿದಾಗ ಅವರು ರಾತ್ರಿ ಇದ್ದಕ್ಕಿದ್ದಂತೆಯೇ ಮೇನ್​ ಡೋರ್​ ಓಪನ್​ ಆಗುತ್ತಿತ್ತು, ಅದಕ್ಕೇ ಎಂದು ಹೇಳಿದರು. ಆದರೆ ನಾನು ಇಲ್ಲದ ಸಮಯದಲ್ಲಿ ಅವರಿಗೂ ಇಂಥ ಭಯಾನಕ ಅನುಭವ ಆಗಿತ್ತು. ನಾನು ಭಯ ಪಡುತ್ತೇನೆ ಎಂದು ಅವರು ಹೇಳಿರಲಿಲ್ಲ. ಕೆಲ ತಿಂಗಳ ಬಳಿಕ ತಮಗೆ ಆಗಿದ್ದ ಅನುಭವ ಹೇಳಿಕೊಂಡಿದ್ದರು ಎಂದಿದ್ದಾರೆ ಪಲ್ಲವಿ ಗೌಡ.

Tap to resize

Latest Videos

undefined

ಇಷ್ಟೇ ಅಲ್ಲದೇ, ಇನ್ನೊಂದು ಭಯಾನಕ ಘಟನೆಯನ್ನೂ ಅವರು ವಿವರಿಸಿದ್ದಾರೆ. ಮನೆಯ ಪಕ್ಕದಲ್ಲಿಯೇ ಒಬ್ಬರು ಅಂಕಲ್​ ಇದ್ದರು. ನನ್ನನ್ನು ಮಗಳಂತೆ ನೋಡುತ್ತಿದ್ದರು. ಅವರಿಗೆ ಊಟಕ್ಕೆ ಕರೆದಿದ್ದೆ. ಮನೆಯ ಟೆರೇಸ್​ ಮೇಲೆ ನಾನು ನಿಂತಾಗ ಅವರು ಅವರ ಮನೆಯ ಟೆರೇಸ್​ ಮೇಲೆ ಇದ್ದರು. ಹಾಯ್​ ಎಂದೆ. ಅವರೂ ಹಾಯ್​ ಎಂದು ಮಾತನಾಡಿಸಿದರು. ಊಟಕ್ಕೆ ಬರುವಂತೆ ಹೇಳಿದರು. ಆದರೆ ನಾನು ಹಿಂದಿರುಗಿ ನೋಡಿದಾಗ ಆ ಅಂಕಲ್​ ನನ್ನ ಮನೆಯವರ ಜೊತೆ ಸೋಫಾದ ಮೇಲೆ ಮಾತನಾಡುತ್ತಿದ್ದರು. ಗಾಬರಿ ಬಿದ್ದು ಹೋದೆ. ಪುನಃ ಅತ್ತ ಹಿಂದಿರುಗಿ ನೋಡಿದಾಗ ಆ ಆಕೃತಿ ಇರಲಿಲ್ಲ. ಇದರಿಂದ ತುಂಬಾ ಭಯ ಆಗೋಯ್ತು. ಕೊನೆಗೆ ಈ ಬಗ್ಗೆ ಜ್ಯೋತಿಷಿಗಳಲ್ಲಿ ಕೇಳಿಸಿದಾಗ, ಅದೇ ಮನೆಯಲ್ಲಿ ನಾವು ಬರುವ ಮುನ್ನ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು ಎಂಬ ಘಟನೆಯನ್ನು ರಿವೀಲ್​  ಮಾಡಿದ್ದಾರೆ.

ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?

ಅಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆ ಮನೆ ಕೆಡವಿ ಹೊಸ ಮನೆ ಕಟ್ಟಲಾಗಿತ್ತು. ಅದು ನಮಗೆ ಗೊತ್ತಿರಲಿಲ್ಲ. ಅದೇ ಆತ್ಮವಾಗಿ ಕಾಡುತ್ತಿತ್ತು ಎಂಬುದು ನನಗೆ ತಿಳಿಯಿತು ಎಂದಿದ್ದಾರೆ. ಇಂಥ ಕೆಲವು ಅನುಭವ ಆಗುತ್ತದೆ, ಇದು ಇಲ್ಯೂಷನ್​ ಆಗಿರಬಹುದಲ್ಲವೆ ಎಂಬ ರಾಜೇಶ್​ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಪಲ್ಲವಿ ಅವರು, ಏನೋ ಗೊತ್ತಿಲ್ಲ. ಇದ್ದರೂ ಇರಬಹುದು. ಆದರೆ ಇಲ್ಯೂಷನ್​ ಆಗುವುದು ನಮಗೆ ಭೂತ-ದೆವ್ವದ ಭಯ ಇದ್ದಾಗ, ಇಲ್ಲವೇ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಮೊದಲೇ ಗೊತ್ತಿದ್ದು, ಅದರ ಬಗ್ಗೆ ಭಯ ಕಾಡುತ್ತಿದ್ದರೆ ಆಗಬಹುದು. ಆದರೆ ನನಗೆ ಅದರ ಮೇಲೆ ನಂಬಿಕೆಯೂ ಇರಲಿಲ್ಲ, ಆತ್ಮಹತ್ಯೆ ವಿಷಯವೂ ಗೊತ್ತಿರಲಿಲ್ಲ. ಭೂತ-ಪ್ರೇತ, ಆತ್ಮಗಳ ಬಗ್ಗೆ ತಲೆ ಕೆಡಿಸಿಕೊಂಡವಳೂ ಅಲ್ಲ. ಆದರೂ ಇದು ಹೇಗೆ ಆಯಿತು ಎನ್ನುವುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಕೆಲ ದಿನಗಳ ಹಿಂದೆ, ಖ್ಯಾತ ರೇಡಿಯೋ ಜಾಕಿ, ನಟ ವಿಶ್ವಾಸ್​ ಕಾಮತ್​ ಅವರು ತಮಗಾಗಿರುವ ಭಯಾನಕ ಅನುಭವವನ್ನು ಯೂಟ್ಯೂಬರ್​ ರಾಜೇಶ್​ ಗೌಡ ಅವರ ಜೊತೆ ಶೇರ್​ ಮಾಡಿಕೊಂಡಿದ್ದರು. ಬೆಂಗಳೂರಿನ ಬನ್ನೇರಘಟ್ಟ ರಸ್ತೆಯಲ್ಲಿರುವ ಒಂದು ಮನೆಯಲ್ಲಿ ನಾವು ಬಾಡಿಗೆಗೆ ಇದ್ದಾಗ ತಮಗೆ ಆಗುತ್ತಿದ್ದ ಭಯಾನಕ ಅನುಭವಗಳ ಬಗ್ಗೆ ಅವರು ಹೇಳಿದ್ದರು.  ಇದ್ದಕ್ಕಿಂತೆಯೇ ಫ್ಯಾನ್​ ತಿರುಗುವುದು, ಮಗಳಿಗೆ ಇಟ್ಟಿದ್ದ ಗೊಂಬೆಯ ಮ್ಯೂಸಿಕ್​ ರಾತ್ರಿ ಆನ್​  ಆಗಿ ಚಲಿಸಿ ಬರುತ್ತಿದ್ದುದು... ಇತ್ಯಾದಿಗಳ ಬಗ್ಗೆ ಹೇಳಿದ್ದರು. (ಅದರ ಸಂದರ್ಶನ ಈ ಕೆಳಗಿನ ಲಿಂಕ್​ನಲ್ಲಿದೆ)

ನಡುರಾತ್ರಿ ಏಕಾಏಕಿ ಫ್ಯಾನ್ ತಿರುಗಿ, ಗೊಂಬೆ ಚಲಿಸಿದಾಗ... ಭಯಾನಕ ಅನುಭವ ತೆರೆದಿಟ್ಟ ನಟ ವಿಶ್ವಾಸ್​ ​

click me!