
ಬಿಗ್ ಬಾಸ್ (Bigg Boss) ಮನೆಗೆ ಅತಿಥಿಗಳು ಬಂದು ಒಂದು ವಾರವಾಗಿದೆ. ಹಳೆ – ಹೊಸ ಸ್ಪರ್ಧಿಗಳ ಮಧ್ಯೆ ಸಾಕಷ್ಟು ಗಲಾಟೆಯಾದ್ರೂ ಕೆಲ ಸ್ಪರ್ಧಿಗಳು ಉತ್ತಮ ಟೈಂ ಸ್ಪೆಂಡ್ ಮಾಡ್ತಿದ್ದಾರೆ. ಇದ್ರಲ್ಲಿ ಮೋಕ್ಷಿತಾ ಪೈ (Mokshitha Pai) ಕೂಡ ಒಬ್ಬರು. ಬಿಗ್ ಬಾಸ್ 11ರಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಮೋಕ್ಷಿತಾ ಒಂದು ವಾರದ ಮಟ್ಟಿಗೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವ ಮೋಕ್ಷಿತಾ, ಮಾಳು ಹಾಡನ್ನು ಹಾಡಿದ್ದಾರೆ. ಎಲ್ಲರೂ ಒಟ್ಟಿಗೆ ಕುಳಿತಿದ್ದಾಗ ಮಾಳು ಹಾಡಿಗೆ ಮೋಕ್ಷಿತಾ ಧ್ವನಿಯಾಗಿದ್ದಾರೆ. ಮಾಳು ಕೂಡ ಅಲ್ಲಲ್ಲಿ ಹಾಡನ್ನು ಹೇಳಿ ಸ್ಪರ್ಧಿಗಳನ್ನು ರಂಜಿಸಿದ್ದಾರೆ.
ಮೋಕ್ಷಿತಾ ಒಳ್ಳೆ ಹಾಡುಗಾರ್ತಿ. ಬಿಗ್ ಬಾಸ್ 11ರ ಮನೆಯಲ್ಲಿ ಮೋಕ್ಷಿತಾ ಕೆಲ ಸಾಂಗ್ ಫೇಮಸ್ ಆಗಿತ್ತು. ಎಲ್ಲ ಸ್ಪರ್ಧಿಗಳು ಮೋಕ್ಷಿತಾ ಹಾಡು ಕೇಳಿ ರಿಲ್ಯಾಕ್ಸ್ ಆಗ್ತಿದ್ದರು. ಈ ಬಾರಿ ಮಾಳು ಬಿಟ್ರೆ ಬೇರೆ ಯಾವುದೇ ಹಾಡುಗಾರರು ಬಿಗ್ ಬಾಸ್ ಮನೆಯಲ್ಲಿಲ್ಲ. ಹುಡುಗಿ ಧ್ವನಿಯನ್ನು ಮಿಸ್ ಮಾಡಿಕೊಳ್ತಿದ್ದ ಸ್ಪರ್ಧಿಗಳು ಹಾಗೂ ಫ್ಯಾನ್ಸ್ ಗೆ ಮೋಕ್ಷಿತಾ ಹಾಡು ಖುಷಿ ನೀಡಿದೆ. ಬಿಗ್ ಬಾಸ್ 11ರ ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಅವರನ್ನು ಜೋಡಿಯಾಗಿ ನೋಡಲು ಫ್ಯಾನ್ಸ್ ಆಸೆ ಪಟ್ಟಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೆಲೆ ಇಬ್ಬರೂ ಒಟ್ಟಿಗೆ ಪ್ರಾಜೆಕ್ಟ್ ಮಾಡಿಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿತ್ತು. ಈಗ ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಮತ್ತೆ ಬಿಗ್ ಬಾಸ್ ಮನೆಗೆ ಬರ್ತಿದ್ದಂತೆ ಮತ್ತೆ ಫ್ಯಾನ್ಸ್ ಆಸೆ ಚಿಗುರಿದೆ.
Bigg Boss ಮನೆಯಲ್ಲಿ ರಕ್ಷಿತಾ ಶೆಟ್ಟಿ ಒಂಥರಾ ಲಕ್ಕಿ; ನಾಲ್ಕರಲ್ಲಿ ಮೂರು ಸತ್ಯ ಆಯ್ತು! ಇದು ಕಾಕತಾಳೀಯನಾ?
ಮೋಕ್ಷಿತಾ ಹಾಡು ಹೇಳೋದನ್ನು ತ್ರಿವಿಕ್ರಮ್ (Trivikram) ನಿಂತು ಕೇಳಿದ್ದಾರೆ. ಜೊತೆಗೆ ತಮ್ಮ ಧ್ವನಿಗೂಡಿಸುವ ಪ್ರಯತ್ನ ಮಾಡಿದ್ದಾರೆ. ಇದು ಫ್ಯಾನ್ಸ್ ಕಣ್ಣಿಗೆ ಬಿದ್ದಿದೆ. ಮೋಕ್ಷಿತಾರನ್ನು ವಿಕ್ಕಿ ಕೂಲ್ ಆಗಿ ನೋಡ್ತಿದ್ದಾರೆ, ಇಬ್ಬರನ್ನು ಒಟ್ಟಿಗೆ ನೋಡೋದು ಖುಷಿ ನೀಡ್ತಿದೆ. ಆದ್ರೆ ಇದು ಮೋಕ್ಷಿತಾಗೆ ಇಷ್ಟವಾಗಲ್ಲ ಅಂತ ನಮಗೆ ಗೊತ್ತು ಆದ್ರೂ ಇಬ್ಬರನ್ನು ಒಟ್ಟಿಗೆ ನೋಡುವ ಆಸೆ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಅನೇಕರು ತ್ರಿಮೋಕ್ಷಿ ಅಂತ ಅವರನ್ನು ಕರೆದಿದ್ದಾರೆ. ಇಷ್ಟು ದಿನ ಮೋಕ್ಷಿತಾ ವೈಸ್ ಮಿಸ್ ಮಾಡ್ಕೊಳ್ತಾ ಇದ್ವಿ, ಈಗ ಕೇಳಿ ಖುಷಿಯಾಯ್ತು ಅಂತ ಅನೇಕರು ಕಮೆಂಟ್ ಮಾಡಿದ್ದಾರೆ.
ಮಿಂಚು ಪಾತ್ರಧಾರಿ ರಿಯಲ್ ತಂದೆಯೇ Amruthadhaare Serial ಸೂತ್ರಧಾರಿ ಎನ್ನೋದು ಅನೇಕರಿಗೆ ಗೊತ್ತಿಲ್ಲ
ಬಿಗ್ ಬಾಸ್ 11ರ ಶೋನಲ್ಲಿ ಪ್ರತಿ ಬಾರಿ ನಾಮಿನೇಟ್ ಆದ್ರೂ ಕೊನೆಯ ನಾಲ್ಕು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಮೋಕ್ಷಿತಾ, ಬಿಗ್ ಫೈಟ್ ನೀಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಮೋಕ್ಷಿತಾ ಪ್ರಸಿದ್ಧಿ ಹೆಚ್ಚಾಗಿದೆ. ನಿಂತಿದ್ದ ಸಿನಿಮಾ ಶುರುವಾಗಿದ್ದು, ಮತ್ತೆರಡು ಸಿನಿಮಾಕ್ಕೆ ಮೋಕ್ಷಿತಾ ಸಹಿ ಮಾಡಿದ್ದಾರೆ. ಇದೆಲ್ಲ ಬಿಗ್ ಬಾಸ್ ನಿಂದಾಗಿದ್ದು ಎಂಬುದನ್ನು ಒಪ್ಪಿಕೊಂಡಿರುವ ಮೋಕ್ಷಿತಾ, ಹಿಂದಿನ ವರ್ಷ, ತ್ರಿವಿಕ್ರಮ್, ಮೋಕ್ಷಿತಾಗೆ ಜೋಕರ್ ಎಂದಿದ್ದಕ್ಕೂ ಈಗ ಉತ್ತರ ನೀಡಿದ್ದಾರೆ. ಅಶ್ವಿನಿ ಗೌಡರಿಂದ ಕಾಲು ಒತ್ತಿಸಿಕೊಂಡಿದ್ದ ಮೋಕ್ಷಿತಾ ಪೈ, ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಗೆಸ್ಟ್ ಆಗಿ ಬಂದವರು ಈಗಿನ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಹೀಗೆ ನಡೆದುಕೊಳ್ಳೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.