ಸೀರಿಯಲ್ ಲೋಕದಲ್ಲಿ ಮೋಡಿ ಮಾಡಿದ ಧಾರಾವಾಹಿ 'ಜೊತೆ ಜೊತೆಯಲಿ' | ಟಿಆರ್‌ಪಿಯಲ್ಲಿ ಮೊದಲ ಸ್ಥಾನ | ಭರ್ಜರಿ ಸಕ್ಸಸ್‌ನೊಮದಿಗೆ ಮುನ್ನುಗ್ಗುತ್ತಿರುವ ಈ ಧಾರಾವಾಹಿಯಲ್ಲಿ ಆಗಲಿದೆ ಪ್ರಮುಖ ಬದಲಾವಣೆ
ರೋಮಾಂಚನ ಹುಟ್ಟಿಸುವ ಲವ್ ಸ್ಟೋರಿ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ 'ಜೊತೆ ಜೊತೆಯಲಿ' ಯಶಸ್ವಿಯಾಗಿದೆ. ಆರ್ಯವರ್ಧನ್- ಅನು ಜೋಡಿ ಮೋಡಿ ಮಾಡಿದೆ. ಕಿರುತೆರೆ ಇಂಡಸ್ಟ್ರಿಯಲ್ಲೇ ಸೆನ್ಸೇಷನ್ ಹುಟ್ಟು ಹಾಕಿದ ಸೀರಿಯಲ್ 'ಜೊತೆ ಜೊತೆಯಲಿ'.
ಟಿಆರ್‌ಪಿ ವಿಷಯದಲ್ಲಿ ಕೂಡಾ ಇದು ನಂಬರ್ 1 ಸ್ಥಾನದಲ್ಲಿದೆ. ಇದರಲ್ಲೂ ದಾಖಲೆ ಬರೆದಿದೆ. ಸೀರಿಯಲ್ ಲೋಕದಲ್ಲಿ ಇದುವರೆಗೂ ಕಂಡಿರದಷ್ಟು ಟಿಆರ್‌ಪಿ ಪಡೆದಿದೆ.
ಕಾರು ಬಿಟ್ಟು ಮೆಟ್ರೋ ಏರಿದ ಆರ್ಯವರ್ಧನ್; ಪ್ರಯಾಣಿಕರಿಗೆ ಫುಲ್ ಸರ್ಪ್ರೈಸ್!
ಧಾರಾವಾಹಿ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಅನು- ಆರ್ಯವರ್ಧನ್ ಮದುವೆ ಬಗ್ಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಮನಸ್ಸಾಗಿದೆ. ಅದು ಇಬ್ಬರಿಗೂ ಗೊತ್ತಿದೆ. ಹೇಗೆ ಹೇಳಿಕೊಳ್ಳುತ್ತಾರೆ ಎಂಬುದೇ ಮುಂದಿರುವ ಕುತೂಹಲ.
ದಿನೇ ದಿನೇ ಕುತೂಹಲ ಮೂಡಿಸುತ್ತಿರುವ, ವೀಕ್ಷಕರ ಮನಗೆದ್ದಿರುವ ಈ ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆ ತರುವ ಸಾಧ್ಯತೆಯಿದೆ ಎನ್ನಲಾಗಿದೆ.
ಆರ್ಯವರ್ಧನ್ ಲುಕ್‌ಗೆ ಹುಡ್ಗೀರು ಈ ನಮೂನಿ ಬೀಳೋದ್ಯಾಕೆ? ಏನಿಟ್ಟವ್ರೆ ಗಡ್ಡದಲ್ಲಿ?
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30 ರ ವರೆಗೆ ಪ್ರಸಾರವಾಗುತ್ತದೆ. ರಾತ್ರಿ 8.30 ಆಗುವುದನ್ನೇ ಕಾದು ಕುಳಿತಿರುವ ಪ್ರೇಕ್ಷಕ ವರ್ಗವೇ ಇದೆ. ಈ ಧಾರಾವಾಹಿಯನ್ನು ಅರ್ಧಗಂಟೆ ಬದಲು ಒಂದು ಗಂಟೆ ಪ್ರಸಾರ ಮಾಡಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗಿಲ್ಲ. ಇನ್ನೂ ಮುಂದುವರೆದು ಶನಿವಾರ ಹಾಗೂ ಭಾನುವಾರವೂ ಪ್ರಸಾರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇವರೆಡೂ ಕೂಡಾ ಕಷ್ಟ. ಶನಿವಾರ, ಭಾನುವಾರ ರಿಯಾಲಿಟಿ ಶೋ ಇರುವ ಕಾರಣ ಧಾರಾವಾಹಿಯನ್ನು ಪ್ರಸಾರ ಮಾಡುವುದು ಕಷ್ಟ. ಅರ್ಧಗಂಟೆಯಿಂದ ಒಂದು ಗಂಟೆ ಮಾಡುವುದು ಕೂಡಾ ಕಷ್ಟಸಾಧ್ಯವೇ. ಒಂದು ವೇಳೆ ವೀಕ್ಷಕರ ಒತ್ತಾಯದ ಮೇರೆಗೆ ಒಂದು ಗಂಟೆ ಮಾಡಿದ್ರೆ ಅದು ಸೀರಿಯಲ್ ಇತಿಹಾಸದಲ್ಲೇ ಮೊದಲಾಗುತ್ತದೆ. ವದಲಾವಣೆ ಬಗ್ಗೆ ವಾಹಿನಿಯಾಗಲಿ, ಸೀರಿಯಲ್ ತಂಡವಾಗಲಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ!
ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: