Family Gangsters: ರಿಯಲ್​ ಹೆಂಡ್ತಿ ಎದುರೇ ರೀಲ್​ ಹೆಂಡ್ತಿ ಭಾಗ್ಯಳ ಹೆಗಲ ಮೇಲೆ ಕೈ- ತಾಂಡವ್ ಪೇಚಾಟ!

By Suvarna News  |  First Published Sep 19, 2023, 1:47 PM IST

ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಫ್ಯಾಮಿಲಿ ಗ್ಯಾಂಗ್​ಸ್ಟರ್ಸ್​ಗೆ ಬಂದಿದ್ದ ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್​ ಹಾಗೂ ಅವರ ನಿಜ ಜೀವನದ ಪತ್ನಿಯ ಜೊತೆಗಿನ  ರೋಚಕ ಪ್ರಸಂಗ ಇಲ್ಲಿದೆ.
 


ಸದ್ಯ ತಾಂಡವ್​ ಎಂದರೆ ಧಾರಾವಾಹಿ ಪ್ರಿಯರ ಕಣ್ಣಮುಂದೆ ಬರುವುದು ಕಲರ್ಸ್​ ಕನ್ನಡ ಸೀರಿಯಲ್​ನಲ್ಲಿ ಬರುವ ಭಾಗ್ಯಲಕ್ಷ್ಮಿ ಧಾರಾವಾಹಿ. ಸದಾ ಮುಖವನ್ನು  ಗಂಟಿಕ್ಕಿಕೊಳ್ಳುವ, ಪತ್ನಿ ಭಾಗ್ಯಳನ್ನು  ಹೀಯಾಳಿಸುವ ತಾಂಡವ್​  ಕಣ್ಣಮುಂದೆ ಬರುತ್ತಾನೆ. ಇಷ್ಟವಿಲ್ಲದೇ ಭಾಗ್ಯಳ ಜೊತೆಗಿನ ಮದುವೆ, ಆಕೆ ಹೆಚ್ಚು ಓದಿಲ್ಲ ಎನ್ನುವ ಸಿಡಿಮಿಡಿ, ಇನ್ನೋರ್ವ ಹೆಣ್ಣಿನ ಜೊತೆ ಸಂಬಂಧ, ಭಾಗ್ಯಳನ್ನು ಕಾಲ ಕಸಕ್ಕಿಂತ ಕೀಳಾಗಿ ನೋಡಿಕೊಳ್ಳುವ ಗಂಡನಾಗಿರುವ ತಾಂಡವ್​ನನ್ನು ಕಂಡರೆ ಜನರಿಗೆ ಇನ್ನಿಲ್ಲದ ಕೋಪ. ಇಷ್ಟು ಕೋಪ ಬರುವಂತೆ ವಿಲನ್​ ರೀತಿ ನಡೆದುಕೊಂಡಿರುವ ತಾಂಡವ್​ನ ರಿಯಲ್​ ಹೆಸರು ಸುದರ್ಶನ್‌ ರಂಗಪ್ರಸಾದ್‌. ಹೊರಗಡೆ ಹೋದರೂ ತಾಂಡವ್​ ಎಂದೇ ಸುದರ್ಶನ್​ ಅವರನ್ನು ಕರೆಯುವಷ್ಟು ಇವರು ಜನಪ್ರಿಯರು. ಆದರೆ ಈ ಧಾರಾವಾಹಿಯ ಸಿಡುಕು ಸ್ವಭಾವದಿಂದ ಹೊರಗೆ ಹೋದರೂ ಬೈಯುವವರೇ ಹೆಚ್ಚುಮಂದಿಯಂತೆ. ಆದರೆ ನಿಜ ಜೀವನದಲ್ಲಿ ಹೇಳಬೇಕಿಂದರೆ, ಇವರು  ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌. ಜನರನ್ನು ನಕ್ಕು ನಗಿಸುವಲ್ಲಿ ಪಂಟರು.

ಧಾರಾವಾಹಿಯಲ್ಲಿ ಇವರ ಪತ್ನಿಯ ಹೆಸರು ಭಾಗ್ಯ ಆಗಿದ್ದರೆ, ರಿಯಲ್​ ಲೈಫ್​ ಪತ್ನಿ ಹೆಸರು ಸಂಗೀತಾ ಭಟ್​. ಇವರು,  ಅವರು ಕೂಡ ನಟಿಯೇ.  ಇವರು ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ಎರಡನೇ ಸಲ , ದಯವಿಟ್ಟು ಗಮನಿಸಿ, ಕಿಸ್‌ಮತ್‌, ಆದ್ಯ, ರೂಪಾಂತರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.   ತಮಿಳು, ತೆಲುಗಿನಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಇನ್ನು ಸುದರ್ಶನ್​ ಅವರ ಬಗ್ಗೆ ಹೇಳುವುದಾದರೆ, ಇವರು ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್‌, ಒಂದು ತಂಡ ಕಟ್ಟಿಕೊಂಡು ವೀಕೆಂಡ್‌ಗಳಲ್ಲಿ ಸ್ಟಾಂಪ್‌ ಅಪ್‌ ಕಾಮಿಡಿ ಮೂಲಕ ಜನರನ್ನು ನಗಿಸುತ್ತಿದ್ದರು. ಆದರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ನಂತರ ಅದಕ್ಕೆ ಸಮಯ ಸಿಗದೇ ಧಾರಾವಾಹಿಯಲ್ಲಿಯೇ ಬಿಜಿಯಾಗಿದ್ದಾರೆ.  'ಭಾಗ್ಯಲಕ್ಷ್ಮಿ', ಸುದರ್ಶನ್‌ ಅವರ ಚೊಚ್ಚಲ ಧಾರಾವಾಹಿ ಆಗಿದ್ದು, ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸಿದ್ದಾರೆ. ನೆಗೆಟಿವ್‌ ಪಾತ್ರದ ಮೂಲಕ ಹೆಸರಾಗಿದ್ದಾರೆ. 

Tap to resize

Latest Videos

ಬಸ್​ ನಂಬರ್​ 123... ಡಬಲ್​ ಡೆಕ್ಕರ್​ನಲ್ಲಿ ಖ್ಯಾತ ಕಿರುತೆರೆ ನಟ ಕರಣ್ವೀರ್ ರೋಚಕ ಪ್ರೇಮ್​ ಕಹಾನಿ!
 
ಸುದರ್ಶನ್​ ಅವರು ಕಲರ್ಸ್​ ಕನ್ನಡದಲ್ಲಿ ಸೃಜನ್​ ಲೋಕೇಶ್​ ಅವರು ನಡೆಸಿಕೊಂಡುವ Family Gangsters ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದಾರೆ. ಈ ಷೋನಲ್ಲಿ ಭಾಗ್ಯ ಪಾತ್ರಧಾರಿ ಸುಷ್ಮಾ ಭಾಗವಹಿಸಿದ್ದಾರೆ. ಕೆಲ ವಾರಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದೀಗ ಗ್ರ್ಯಾಂಡ್​ ಫಿನಾಲೆ ತಲುಪಿದೆ. ಈ ಕಾರ್ಯಕ್ರಮದಲ್ಲಿ ತಾಂಡವ್​ ಪಾತ್ರಧಾರಿ ಸುದರ್ಶನ್​ ಅವರ ನಿಜವಾದ ಪತ್ನಿ ಸಂಗೀತಾ ಅವರನ್ನೂ ಕರೆಸಲಾಗಿತ್ತು. ಒಂದು ಕಡೆ ಧಾರಾವಾಹಿ ಪತ್ನಿ ಭಾಗ್ಯ ಹಾಗೂ ಇನ್ನೊಂದೆಡೆ ನಿಜವಾದ ಪತ್ನಿ ಸಂಗೀತಾ. ಇಬ್ಬರನ್ನೂ ಕರೆಸಿದ್ದ ನಟ ಸೃಜನ್ ಲೋಕೇಶ್​ ಅವರು ರಿಯಲ್​ ಪತ್ನಿಯ ಜೊತೆ ರೀಲ್​ ಪತ್ನಿಯಂತೆ ಹಾಗೂ ರೀಲ್​ ಪತ್ನಿಯ ಜೊತೆ ರಿಯಲ್​ ಪತ್ನಿಯಂತೆ ಆ್ಯಕ್ಟ್​ ಮಾಡಲು ಹೇಳಿದ್ದರು.

ಅದಕ್ಕೆ ಸುದರ್ಶನ್​ ಅವರು ಪೇಚಿಗೆ ಸಿಲುಕಿದರು. ಪರಸ್ಪರ ಬೇರೆ ಬೇರೆ ಡೈಲಾಗ್​ ಹೇಳುತ್ತಾ ನಕ್ಕು ನಗಿಸಿದರು. ಇದಕ್ಕೆ ಸುಷ್ಮಾ ಮತ್ತು ಸಂಗೀತಾ ಅವರೂ ಸಕತ್​ ಡೈಲಾಗ್​ ಹೇಳುವ ಮೂಲಕ ಎಲ್ಲರನ್ನೂ ರಂಜಿಸಿದರು. ಇದರ ವಿಡಿಯೋ ಈಗ ವೈರಲ್​ ಆಗುತ್ತಿದೆ. 

ಅಬ್ಬಾ! ಈ ಪಾಪ್​ ಡ್ಯಾನ್ಸರ್​ ನಿಜವಾಗ್ಲೂ ಹಿಟ್ಲರ್​ ಕಲ್ಯಾಣದ ಅಂತರನಾ ಎಂದು ಪ್ರಶ್ನಿಸ್ತಿದ್ದಾರೆ ಫ್ಯಾನ್ಸ್​

click me!