
ಬಿಗ್ಬಾಸ್ ಇದಾಗಲೇ ಹಲವಾರು ಭಾಷೆಗಳಲ್ಲಿ ಹವಾ ಸೃಷ್ಟಿಸುತ್ತಿದೆ. ಇದಾಗಲೇ ಹಲವಾರು ಕಂತುಗಳು ಮುಗಿದಿವೆ. ಹಿಂದಿಯ ಬಿಗ್ಬಾಸ್ 18 ಸೀಸನ್ಗಳನ್ನು ಮುಗಿಸಿ ಟಾಪ್ನಲ್ಲಿದ್ದರೆ, ಇದೇ ರೀತಿ ಹಲವಾರು ಭಾಷೆಗಳಲ್ಲಿ ಬಿಗ್ಬಾಸ್ ಟಾಪ್1 ಸ್ಥಾನದಲ್ಲಿಯೇ ಮುಂದುವರೆದಿದೆ. ಬಿಗ್ಬಾಸ್ ಬಗ್ಗೆ ಸಾಕಷ್ಟು ಆರೋಪಗಳಿದ್ದರೂ ಟಿಆರ್ಪಿಯಲ್ಲಿ ಇದೇ ಮುಂದು. ಜನರನ್ನು ಬೈದುಕೊಳ್ಳುತ್ತಲೇ ಪ್ರತಿನಿತ್ಯ ಇದನ್ನು ನೋಡುವ ಕಾರಣ, ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದೆ. ಎಲ್ಲವೂ ಮೊದಲೇ ಹೇಳಿಕೊಟ್ಟು ಮಾಡಿಸುವುದು, ಇಲ್ಲಿರುವ ಸ್ಪರ್ಧಿಗಳು ಬಿಗ್ಬಾಸ್ ಕೈಗೊಂಬೆಗಳು ಅಷ್ಟೇ... ಆದರೆ ನೋಡುಗರಿಗೆ ಎಲ್ಲವೂ ಅಚಾನಕ್ ಆಗಿ ಆಗಿದ್ದು ಎನ್ನಿಸುತ್ತದೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಾಗಲೇ ಬೇರೆ ಬೇರೆ ಭಾಷೆಗಳ ಬಿಗ್ಬಾಸ್ಗೆ ಹೋಗಿ ಬಂದವರೂ ಇಲ್ಲಿರುವುದೆಲ್ಲವೂ ಸ್ಕ್ರಿಪ್ಟೆಡ್, ಜನರನ್ನು ಮರಳು ಮಾಡುವ ತಂತ್ರವಷ್ಟೇ. ಇದನ್ನು ಅರಿಯದ ಪ್ರೇಕ್ಷಕರು ತಮ್ಮ-ತಮ್ಮ ನಡುವೆ ಸುಖಾ ಸುಮ್ಮನೆ ಕಿತ್ತಾಡಿಕೊಳ್ತಾರೆ ಅಷ್ಟೇ ಎಂದು ಹೇಳಿದ್ದು ಇದೆ. ಅದೇನೇ ಇದ್ದರೂ, ಈ ರಿಯಾಲಿಟಿ ಷೋ ಸಕತ್ ಸದ್ದು ಮಾಡುತ್ತಿದೆ.
ಇಲ್ಲಿರುವ ಸ್ಪರ್ಧಿಗಳ ಡೈಲಾಗ್, ಕಿರುಚಾಟ, ರೊಮಾನ್ಸ್ ಅಷ್ಟೇ ಏಕೆ... ಬಿಗ್ಬಾಸ್ನಲ್ಲಿ ಇವರು ಮಾಡುವ ಶುಚಿ ಕಾರ್ಯಗಳು, ಪಾತ್ರೆ ತೊಳೆಯುವುದು, ಮನೆ ಕ್ಲೀನ್ ಮಾಡುವ ಟಾಸ್ಕ್ ಎಲ್ಲವೂ ನಕಲಿ ಎನ್ನುವ ದೊಡ್ಡ ಆರೋಪವೂ ಇದೆ. ಹೀಗೆ ಬಿಗ್ಬಾಸ್ ಮನೆಯಲ್ಲಿ ನಡೆಯುವ ನಕಲಿಗಳ ಬಗ್ಗೆ ಸಿನೆ ಚಾರ್ಮ್ ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಲಾಗಿದೆ. ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿಯ ಬಿಗ್ಬಾಸ್ ಕುರಿತು ಇದರಲ್ಲಿ ಉಲ್ಲೇಖಿಸಲಾಗಿದೆ. ಐದು ಪ್ರಮುಖ ಸುಳ್ಳುಗಳು ಅಂದರೆ ವೀಕ್ಷಕರನ್ನು ಮೋಸ ಮಾಡುವ ತಂತ್ರಗಳ ಕುರಿತು ಈ ವಿಡಿಯೋದಲ್ಲಿ ವಿವರಿಸಲಾಗಿದೆ.
ಬಿಗ್ಬಾಸ್ ಕರೆಸಿಕೊಳ್ಳಲ್ಲ ಅಂತ ಗೊತ್ತಾದ್ಮೇಲೆ ಲಾಯರ್ ಜಗದೀಶ್ಗೆ ಮನೆಯಲ್ಲಿ ಈ ಸ್ಥಿತಿನಾ? ಅಯ್ಯೋ ಎಂದ ಫ್ಯಾನ್ಸ್
ಈ ವಿಡಿಯೋದಲ್ಲಿ ಹೇಳಿರುವಂತೆ, ಮೊದಲನೆಯದ್ದು, ಬಿಗ್ಬಾಸ್ ಸ್ಪರ್ಧಿಗಳಿಗೆ ಮದ್ಯ ಸೇವನೆ ಮಾಡಬೇಕು ಎನ್ನುವ ಆಸೆ ಉಂಟಾದರೆ ಅವರಿಗೆ ನೇರವಾಗಿ ಮದ್ಯದ ಬಾಟಲಿ ನೀಡುವುದಿಲ್ಲ, ಬದಲಿಗೆ ಕೋಲ್ಡ್ ಡ್ರಿಂಕ್ಸ್ ಬಾಟಲಿಯಲ್ಲಿ ಅದನ್ನು ಸೇರಿಸಿ ನೀಡುತ್ತಾರೆ. 2ನೇ ಯದ್ದು ಬಿಗ್ಬಾಸ್ನಲ್ಲಿ ಯಾವುದೇ ಧಾರ್ಮಿಕ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ. 3ನೇ ಯದ್ದು, ಬಿಗ್ಬಾಸ್ನಲ್ಲಿ ಸ್ಪರ್ಧಿಗಳಿಗೆ ಹಗಲಿನಲ್ಲಿ ಮಲಗಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಸ್ಪರ್ಧಿಗಳು ಟೇಬಲ್, ಖುರ್ಚಿ ಕೆಳಗೆ ಮಲಗಿ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಬಿಗ್ಬಾಸ್ನಲ್ಲಿ ಸ್ಚಚ್ಛಗೊಳಿಸುವ ಕಾರ್ಯ ಅಂದ್ರೆ ಕಸ ಗುಡಿಸುವುದು, ನೆಲ ಒರೆಸುವುದು, ಪಾತ್ರೆ-ಬಟ್ಟೆ ತೊಳೆಯುವುದು ಇತ್ಯಾದಿ... ಇವೆಲ್ಲಾ ಮಾಡುವುದು ಸ್ಪರ್ಧಿಗಳಲ್ಲ, ಬದಲಿಗೆ ಕೆಲಸದವರು ಮಾಡುತ್ತಾರೆ. ಇದೇನೂ ನೇರ ಪ್ರಸಾರವಲ್ಲ, ಕೊನೆಯಲ್ಲಿ ಕೆಲಸದವರು ಮಾಡುವ ಕಾರ್ಯವನ್ನು ಎಡಿಟಿಂಗ್ನಲ್ಲಿ ಬದಲಿಸಿ ಅದನ್ನು ಸ್ಪರ್ಧಿಗಳೇ ಮಾಡಿದಂತೆ ತೋರಿಸುತ್ತಾರೆ. ಇದು ಎಷ್ಟು ನೈಜವಾಗಿ ಇರುತ್ತದೆ ಎಂದರೆ, ಸತ್ಯ ಹೇಳಿದರೂ ಯಾವ ವೀಕ್ಷಕರೂ ನಂಬುವುದಿಲ್ಲ ಎಂದು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಇನ್ನು 5ನೇಯದ್ದು ಎಂದರೆ ಈ ಷೋನಲ್ಲಿ ಷೋ ನಡೆಸಿಕೊಡುವವರ ಬಗ್ಗೆ (ಈ ವಿಡಿಯೋ ಹಿಂದಿ ಬಿಗ್ಬಾಸ್ದು ಆಗಿರುವ ಕಾರಣ, ಇಲ್ಲಿ ಸಲ್ಮಾನ್ ಖಾನ್ ಬಗ್ಗೆ ಉಲ್ಲೇಖಿಸಲಾಗಿದೆ) ಸ್ಪರ್ಧಿಗಳು ಆಡುವ ಮಾತುಗಳು ನೇರವಾಗಿ ವೀಕ್ಷಕರಿಗೆ ತೋರಿಸುವುದಿಲ್ಲ. ಬದಲಿಗೆ ಇದನ್ನು ಮೊದಲು ಷೋ ನಡೆಸುವವರಿಗೆ ತೋರಿಸಲಾಗುತ್ತದೆ. ಅವರು ಓಕೆ ಎಂದರೆ ಅದನ್ನು ವೀಕ್ಷಕರಿಗೆ ತೋರಿಸಲಾಗುತ್ತದೆ, ಇಲ್ಲದೇ ಹೋದರೆ ಅದನ್ನು ಅಲ್ಲಿಯೇ ಕಟ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇದರ ಸತ್ಯಾಸತ್ಯತೆಯನ್ನು ಬಿಗ್ಬಾಸ್ ಸ್ಪರ್ಧಿಗಳೇ ಹೇಳಬೇಕಿದೆ.
ನಟರ ಜಾಹೀರಾತುಗಳ ಮೋಡಿಗೆ ಒಳಗಾಗಿ ಅದನ್ನೇ ಬಳಸ್ತೀರಾ? ಈ ವಿಡಿಯೋದಲ್ಲಿದೆ ನೋಡಿ ಭಯಾನಕ ಅಸಲಿಯತ್ತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.