
ಮದುವೆ ಆಗದವರಿಗೆ ಮದುವೆಯ ಚಿಂತೆ, ಮದ್ವೆ ಆದವರಿಗೆ ನೂರೆಂಟು ಚಿಂತೆ ಎನ್ನುವ ಹಾಸ್ಯಭರಿತ ಮಾತೊಂದಿದೆ. ಇದು ಹಲವರಿಗೆ ನಿಜ ಕೂಡ ಎನಿಸುವುದು ಉಂಟು. ಮದುವೆಯಾಗದೇ ಇದ್ದರೆ ಮದ್ವೆ ಯಾವಾಗ ಯಾವಾಗ ಎಂದು ಹಿಂಸೆಯಾಗುಷ್ಟು ಜನರು ಕೇಳುತ್ತಲೇ ಇರುತ್ತಾರೆ. ಇನ್ನು ಮದುವೆಯಾದ ಮೇಲೆ ಜನರು ಕೇಳದೇ ಹೋದರೂ ತಾನಾಗಿಯೇ ಬರುವ ಜವಾಬ್ದಾರಿಗಳಿಂದ ಯಾಕಾದರೂ ಮದ್ವೆಯಾದೇನೋ ಎನ್ನುವ ದೊಡ್ಡ ವರ್ಗವೇ ಇದೆ. ಇದು ಹೆಣ್ಣು-ಗಂಡು ಇಬ್ಬರಿಗೂ ಅನ್ವಯ ಆಗುತ್ತದೆ. ಬಹುತೇಕ ವಿವಾಹಿತರು ಒಂದಲ್ಲ ಒಮ್ಮೆ ಈ ಡೈಲಾಗ್ ಹೇಳಿಯೇ ಇರುತ್ತಾರೆ ಎನ್ನುವುದೂ ನಿಜ. ಇದೇ ಕಾರಣ ಸೇರಿದಂತೆ ನಾನಾ ಕಾರಣಗಳಿಂದ ಇಂದು ಕೆಲವು ಯುವತಿ-ಯುವಕರು ಮದುವೆಯೇ ಬೇಡ ಎಂದು ಹಿಂದೇಟು ಹಾಕುತ್ತಿದ್ದಾರೆ. ಮದುವೆಯಾದರೆ ಅದು ಬಂಧನವಾಗಿದ್ದು, ತಮ್ಮ ಕರೀಯರ್ಗೆ ತೊಂದರೆ ಎನ್ನುವ ಕಾರಣಕ್ಕೋ, ಯಾವುದಾದರೂ ಕೆಟ್ಟ ಘಟನೆಗಳನ್ನು ಖುದ್ದು ನೋಡಿರುವುದಕ್ಕೋ, ಮದುವೆಯಾದವರು ಅನುಭವಿಸುವ ಹಿಂಸೆಗಳು ಅನುಭವಕ್ಕೆ ಬಂದೋ ಒಟ್ಟಿನಲ್ಲಿ ಮದುವೆಯಾಗದೇ ಇರುವುದಕ್ಕೆ ಹಲವು ಕಾರಣಗಳನ್ನು ಇಂದು ನೀಡುವವರೂ ಅನೇಕ ಮಂದಿ ಇದ್ದಾರೆ. ಅಂಥವರಲ್ಲಿ ಒಬ್ಬರು ಆ್ಯಂಕರ್ ಅನುಶ್ರೀ.
ಆ್ಯಂಕರ್ ಅನುಶ್ರೀ ಎಂದಾಕ್ಷಣ, ಅವರ ಲಕ್ಷಾಂತರ ಅಭಿಮಾನಿಗಳು ಸದಾ ಕೇಳುವ ಪ್ರಶ್ನೆ ಒಂದೇ ಮೇಡಂ... ಮದ್ವೆ ಯಾವಾಗ ಎನ್ನುವುದು. ಇದಕ್ಕೆ ಉತ್ತರ ಕೊಟ್ಟೂ ಕೊಟ್ಟೂ ಅನುಶ್ರೀಯವರು ಸೋತು ಹೋಗಿದ್ದಾರೆ. ಒಂದೇ ಪ್ರಶ್ನೆಯನ್ನು ಎಷ್ಟೂ ಅಂತ ಕೇಳ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದೂ ಇದೆ. ನಾನು ಮದ್ವೆಯಾಗದೇ ಇರುವುದಿಲ್ಲ, ಆಗೇ ಆಗ್ತೀನಿ. ನಿಮಗೆ ಹೇಳಿಯೇ ಆಗ್ತೀನಿ. ಅಲ್ಲಿಯವರೆಗೆ ಮದ್ವೆ ವಿಷಯ ಕೆದಕದೇ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಅನುಶ್ರೀ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದೂ ಆಗಿದೆ. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ ತರ್ಲೆ ಫ್ಯಾನ್ಸ್ ಇದೇ ಪ್ರಶ್ನೆ ಕೇಳುತ್ತಾರೆ. 36 ವರ್ಷವಾದರೂ ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ. ಈಗಲೂ ಅದನ್ನೇ ಕೇಳುತ್ತಿದ್ದಾರೆ. ನಾನೂ ಮದ್ವೆಯಾಗುತ್ತೇನೆ. ಆದ್ರೆ ಕೇಳಿದ್ದನ್ನೇ ಎಷ್ಟೂ ಅಂತ ಕೇಳ್ತೀರಾ ಎಂದು ಪದೇ ಪದೇ ಅನುಶ್ರೀ ಕೇಳಿದರೂ ಅಭಿಮಾನಿಗಳಿಗೆ ಇವರನ್ನು ಮದುವೆ ಮಾಡಿಸಿದ ಹೊರತೂ ಸಮಾಧಾನ ಇಲ್ಲ ಎನ್ನಿಸುತ್ತದೆ.
ನಾಗಲೋಕದಲ್ಲಿ ಆ್ಯಂಕರ್ ಅನುಶ್ರೀ: ಮಲಗಿದಾಗ ಮೆಲ್ಲಗೆ ಬಂದ ನಾಗರಾಜ... ಮದುವೆಗೆ ಹಾತೊರೆಯುತ್ತಿದ್ದಾನಂತೆ!
ಇದೀಗ ಕಾಮಿಡಿ ಕಿಲಾಡಿಗಳು ಷೋನಲ್ಲಿ ಇವರು ಜಡ್ಜ್ ಆಗಿದ್ದಾರೆ. ಅಲ್ಲಿ ಈಗ ದೆವ್ವಗಳ ಸೀನ್ಗಳು ನಡೆಯುತ್ತಿವೆ. ದೆವ್ವದ ಜೊತೆಗಿನ ಮದುವೆಯ ಬಗ್ಗೆ ಕಾಮಿಡಿ ಸ್ಪರ್ಧಿಗಳು ಜೋಕ್ ಮಾಡುತ್ತಿದ್ದಾರೆ. ಆಗ ಒಂದು ದೆವ್ವಕ್ಕೆ ಮದುವೆಯಾಗಲು ಕುಡುಕನೊಬ್ಬ ಹೋದಾಗ ಆ ದೆವ್ವ ಹಿಂದೇಟು ಹಾಕುತ್ತದೆ. ಅದಕ್ಕೆ ಆ ಸ್ಪರ್ಧಿ ಆ್ಯಂಕರ್ ಅನುಶ್ರೀ ಅವರ ಬಳಿ ನೋಡಿ ನೋಡಿ ಅನುಶ್ರೀ ಅಕ್ಕ, ಮದ್ವೆ ಎಂದರೆ ದೆವ್ವಗಳೂ ಹಿಂದೇಟು ಹಾಕುತ್ತಿವೆ ಎಂದಾಗ ಅನುಶ್ರೀಯವರ ಮುಖ ತೋರಿಸಲಾಗುತ್ತದೆ. ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ಥರಹೇವಾರಿ ಕಮೆಂಟ್ಗಳ ಸುರಿಮಳೆಯಾಗಿದೆ. ಮತ್ತು ಅನುಶ್ರೀಯವರಿಗೆ ಮದ್ವೆಯಾವಾಗ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಮುಂದಿಟ್ಟಿದ್ದಾರೆ.
ಅಷ್ಟಕ್ಕೂ, ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಆ್ಯಂಕರ್ ಅನುಶ್ರೀ ಎಂದರೆ ಅಲ್ಲಿ ನಗುವಿರಲೇ ಬೇಕು. ತಮ್ಮ ಹಾಸ್ಯದ ಧಾಟಿಯಿಂದ ಆ್ಯಂಕರಿಂಗ್ ಮಾಡುವಲ್ಲಿ ಅನುಶ್ರೀ ಸಕತ್ ಫೇಮಸ್. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ತೀರ್ಪುಗಾರರಾಗಿದ್ದಾರೆ. ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಕಿರುತೆರೆಯಲ್ಲಿ ಅನುಶ್ರೀ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಹಲವು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಖ್ಯಾತಿ ಅವರಿಗಿದೆ. ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಇದಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅಕುಲ್- ಅನುಶ್ರೀ ರೊಮಾನ್ಸ್: ವಿಡಿಯೋ ನೋಡಿ ಒನ್ಸ್ ಮೋರ್ ಒನ್ಸ್ ಮೋರ್ ಅಂತಿರೋ ಅಭಿಮಾನಿಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.