ಫೋಟೋ ತೆಗೆದು ಸಿಕ್ಕಿಬಿದ್ದ ಬಿಗ್​ಬಾಸ್​ ವಿನ್ನರ್​! ಹಾವಿನ ವಿಷ, ರೌಡಿಸಂ ಬಳಿಕ ಇದೇನಿದು ಮತ್ತೆ ಗಲಾಟೆ?

By Suchethana D  |  First Published Jul 26, 2024, 4:45 PM IST

ಹಾವಿನ ವಿಷ ಸಂಗ್ರಹ, ಹೋಟೆಲ್​ನಲ್ಲಿ ರೌಡಿಸಂ, ಹಣದ ಅಕ್ರಮ ವರ್ಗಾವಣೆ ಬಳಿಕ ಬಿಗ್​ಬಾಸ್​ ವಿನ್ನರ್​ ಎಲ್ವಿಶ್​ ಯಾದವ್​ ಮತ್ತೊಂದು ವಿವಾದ: ಏನಿದು ಪ್ರಕರಣ?
 


ಕಾಂಟ್ರವರ್ಸಿಯಿಂದ ಕುಖ್ಯಾತಿ ಗಳಿಸುವ ಮೂಲಕವೇ ಬಿಗ್​ಬಾಸ್​ಗೆ ಎಂಟ್ರಿಪಡೆದು, ಕೊನೆಗೆ ಬಿಗ್​ಬಾಸ್​ ಟ್ರೋಫಿಯನ್ನೂ ಪಡೆದಿದ್ದ 26 ವರ್ಷದ ಯುವಕ, ಯೂಟ್ಯೂಬರ್​ ಎಲ್ವಿಶ್​ ಯಾದವ್​ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಇನ್ನಿಲ್ಲದ ವಿವಾದಗಳಲ್ಲಿ ಸಿಲುಕುತ್ತಿದ್ದಾರೆ. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡುತ್ತಿದ್ದ ಆರೋಪದಲ್ಲಿ ಹಲ್​ಚಲ್​ ಸೃಷ್ಟಿಸಿ ಅರೆಸ್ಟ್​ ಆಗಿದ್ದ ಯೂಟ್ಯೂಬರ್​ ಎಲ್ವಿಶ್ ಯಾದವ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಾಕಷ್ಟು ವಿವಾದ ಸೃಷ್ಟಿಸಿರುವ ಕಾರಣದಿಂದಲೇ ಎಲ್ವಿಶ್​ ಅವರಿಗೆ ಹಿಂದಿನ ‘ಬಿಗ್ ಬಾಸ್  ಒಟಿಟಿ ಸೀಸನ್ 2ನಲ್ಲಿ ಎಂಟ್ರಿ ಸಿಕ್ಕಿತ್ತು. ಬಿಗ್​ಬಾಸ್​ನಲ್ಲಿ ವಿನ್​ ಆದ ಮೇಲೆ ರೆಸ್ಟೋರೆಂಟ್‌ ಒಂದರಲ್ಲಿ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗಾ ವಿನಾಕಾರಣ ಥಳಿಸಿ ಸಿಕ್ಕಿಬಿದ್ದಿದ್ದರು. 

ಇದಾದ ಬಳಿಕ ಹಣದ ಅಕ್ರಮ  ವರ್ಗಾವಣೆ ಕೇಸ್​ ಅನ್ನು ಜಾರಿ ನಿರ್ದೇಶನಾಲಯ ದಾಖಲು ಮಾಡಿದೆ. ಇವೆಲ್ಲವುಗಳ ನಡುವೆ ಎಲ್ವಿಶ್ ಯಾದವ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇನೆಂದರೆ, ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣದೊಳಗೆ ಫೋಟೋಗಳನ್ನು ಕ್ಲಿಕ್ ಮಾಡಿದ ಆರೋಪದ ಮೇಲೆ ಇವರ  ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ವಾರಣಾಸಿಯ ಸೆಷನ್ಸ್ ನ್ಯಾಯಾಲಯದ ವಕೀಲ ಪ್ರತೀಕ್ ಕುಮಾರ್ ಸಿಂಗ್ ಅವರು ಈ ದೂರನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

Tap to resize

Latest Videos

ಸುಶಾಂತ್​ ಸಿಂಗ್ ಮ್ಯಾನೇಜರ್​ ದಿಶಾ ನಿಗೂಢ ಸಾವಿಗೆ ಮರುಜೀವ! ರಾಜಕೀಯದಲ್ಲಿ ಅಲ್ಲೋಲ- ಕಲ್ಲೋಲ

ಕಾಶಿ ವಿಶ್ವನಾಥ ಸೇರಿದಂತೆ ಹಲವು ದೇಗುಲಗಳ ಒಳಗೆ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ನಿಷಿದ್ಧ. ಆದರೆ ಎಲ್ವಿಶ್ ಯಾದವ್ ದೇವಾಲಯದ ಸಂಕೀರ್ಣದೊಳಗೆ ಚಿತ್ರಗಳನ್ನು ತೆಗೆದಿದ್ದಾರೆ. ಹೀಗೆ ಮಾಡಲು ಬಿಟ್ಟ  ಅಧಿಕಾರಿಗಳ ವಿರುದ್ಧ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗೆ ಪಕ್ಷಪಾತ ಮಾಡಿರುವುದು ಎಷ್ಟು ಸರಿ ಎಂದೂ ಹೇಳಲಾಗಿದೆ.  ಅಷ್ಟಕ್ಕೂ,  ಎಲ್ವಿಶ್ ಯಾದವ್ ಬಳಿ 20 ಎಂಎಲ್ ಹಾವಿನ ವಿಷದ ಜೊತೆಗೆ 9 ಹಾವುಗಳನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಬಳಿ ಐದು ನಾಗರಹಾವು, ತಲಾ ಒಂದು ಹೆಬ್ಬಾವು, ಎರಡು ತಲೆಯ ಹಾವು ಹಾಗೂ ಕೇರೆ ಹಾವು ಇತ್ತು. ಇದೀಗ ಇನ್ನೊಂದು ವಿವಾದ ಸೃಷ್ಟಿಸಿಕೊಂಡಿದ್ದರು. 

ಅದಾದ ಬಳಿಕ,  ರೆಸ್ಟೋರೆಂಟ್‌ ಒಂದರಲ್ಲಿ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.   ರಾಜಸ್ಥಾನದ ಜೈಪುರದ ರೆಸ್ಟೊರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು.  ವೈರಲ್​ ಆಗಿರುವ ವಿಡಿಯೋದಲ್ಲಿ ಎಲ್ವಿಶ್​ ರೆಸ್ಟೋರೆಂಟ್‌ಗೆ ಹೋಗುವುದನ್ನು ನೋಡಬಹುದು.  ಅವರು ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಹಿಂದೆ ತಿರುಗುತ್ತಾರೆ ಮತ್ತು ಬದಿಯಲ್ಲಿ ಕುಳಿತಿದ್ದ ವ್ಯಕ್ತಿಯ ಕೆನ್ನೆಗೆ ಬಲವಾಗಿ ಹೊಡೆಯುತ್ತಾರೆ. ಆ ಬಳಿಕ ಇನ್ನಷ್ಟು ಮುಂದೆ ಹೋಗಿ ಮತ್ತು ವಾಪಸ್​ ಬಂದು  ಹೊಡೆಯುತ್ತಾರೆ. ಆಗ ಅಲ್ಲಿರುವ ಜನರು ಗಾಬರಿಯಿಂದ ಇದನ್ನು ತಪ್ಪಿಸಲು ಪ್ರಯತ್ನಿಸಿದರೂ ಎಲ್ವಿಶ್​ ನಿಲ್ಲಿಸುವುದಿಲ್ಲ. ನಂತರ ಪೊಲೀಸರು ಬಂದು ಪರಿಸ್ಥಿತಿ ಕಂಟ್ರೋಲ್​ ಮಾಡುವುದನ್ನು ನೋಡಬಹುದು.
 
ಸಚಿವನೊಂದಿಗೆ ಪತ್ನಿ ಅಕ್ರಮ ಸಂಬಂಧ: ಜೋಡಿ ಕೊಲೆ ಮಾಡಿದ್ದ ಸಂಜಯ್​ ದತ್​! ನಟನಿಂದಲೇ ರಿವೀಲ್
 

click me!