ಹೋಳಿ ಹಬ್ಬಕ್ಕೆ ಅಮ್ಮ-ಮಗನ ಮಿಲನ: ಮನೆಯಜಮಾನಿ ತುಳಸಿಯ ಕೀಗೊಂಚಲು ಅಭಿಯ ಕೈಯಲ್ಲಿ!

Published : Mar 31, 2024, 12:29 PM IST
ಹೋಳಿ ಹಬ್ಬಕ್ಕೆ ಅಮ್ಮ-ಮಗನ ಮಿಲನ:  ಮನೆಯಜಮಾನಿ ತುಳಸಿಯ ಕೀಗೊಂಚಲು ಅಭಿಯ ಕೈಯಲ್ಲಿ!

ಸಾರಾಂಶ

ಹೋಳಿ ಹಬ್ಬದ ಸಂದರ್ಭದಲ್ಲಿ ಮನೆಯ ಯಜಮಾನಿಕೆಯನ್ನು ಸಾರುವ ಕೀಗೊಂಚಲನ್ನು ಅಭಿಯ ಕೈಗೆ ಇತ್ತಿದ್ದಾಳೆ ತುಳಸಿ. ಅದೇ ಇನ್ನೊಂದೆಡೆ ಅಮ್ಮ-ಮಗನ ಮಿಲನವೂ ಆಗಿದೆ.  

ಶ್ರೀರಸ್ತು- ಶುಭಮಸ್ತುವಿನಲ್ಲಿ ಹೋಳಿ ಹಬ್ಬದ ಸಡಗರ ಜೋರಾಗಿ ನಡೆಯುತ್ತಿದೆ. ಅಭಿಯ ಹುಟ್ಟುಹಬ್ಬದ ಸಂಭ್ರಮದಲ್ಲಿಯೇ ಹೋಳಿ ಹಬ್ಬವೂ ಬಂದಿದೆ. ಅಭಿಯ ಹುಟ್ಟುಹಬ್ಬಕ್ಕೆ ಒಂದರ ಮೇಲೊಂದು ಭರ್ಜರಿ ಉಡುಗೊರೆಗಳು ಸಿಕ್ಕಿವೆ. ಅಣ್ಣ ಅವಿ ತಮ್ಮನಿಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ಟಿದ್ದಾನೆ. ತನಗೆ ಬಂದಿರುವ 120 ಕೋಟಿ ರೂಪಾಯಿಗಳ ಪ್ರಾಜೆಕ್ಟ್​ ಅನ್ನು ಅವಿಗೆ ಕೊಟ್ಟಿದ್ದಾನೆ. ಇದೇ ವೇಳೆ ಸಮರ್ಥ್​ ಕೈಯಲ್ಲಿ ತುಳಸಿಗೆ ಬಣ್ಣ ಹಚ್ಚಿಸುವುದಾಗಿ ಅಭಿ ಷರತ್ತು ಹಾಕಿದ್ದ. ಅದು ಕೂಡ ಈಡೇರಿಬಿಟ್ಟಿದೆ. ಅಭಿ ಪ್ಲ್ಯಾನ್​ ಮಾಡಿ ಸಮರ್ಥ್​ ಅಮ್ಮನ ಕೆನ್ನೆಗೆ ಬಣ್ಣ ಹಚ್ಚುವ ಹಾಗೆ ಮಾಡಿದ್ದಾನೆ. ಈ ಮೂಲಕ ಹೋಳಿ ಹಬ್ಬದಲ್ಲಿ ಅಮ್ಮ-ಮಗನ ಮಿಲನವಾಗಿದೆ.

ಅದೇ ಇನ್ನೊಂದೆಡೆ, ತುಳಸಿ ಕೂಡ ಅಭಿಗೆ ಭರ್ಜರಿ ಗಿಫ್ಟ್​ ಕೊಟ್ಟಿದ್ದಾಳೆ. ಅದೇನೆಂದರೆ ಮನೆಯ ಕೀ ಗೊಂಚಲನ್ನು ಅಭಿಯ ಕೈಗೆ ಇತ್ತು, ಇದು ನನಗೆ ಬೇಡ, ನೀನೇ ಇಟ್ಟುಕೋ. ನಾನು ನಿನ್ನ ಅಮ್ಮ ಎಂದು ಒಪ್ಪಿಕೊಂಡ ದಿನ ಇದನ್ನು ನನಗೆ ವಾಪಸ್​ ಕೊಡು ಎಂದಿದ್ದಾಳೆ. ಅಷ್ಟಕ್ಕೂ ತುಳಸಿಯಿಂದ ಮನೆ ಯಜಮಾನಿಕೆ ಪಟ್ಟ ಕಸಿದುಕೊಳ್ಳಲು  ಶಾರ್ವರಿ ಮತ್ತು ದೀಪಿಕಾ ಹೊಂಚು ಹಾಕುತ್ತಲೇ ಇದ್ದಾರೆ. ಅಭಿಯ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ತುಳಸಿಗೆ ಇನ್​ಸಲ್ಟ್​ ಮಾಡುವುದನ್ನು ಬಿಟ್ಟಿಲ್ಲ. ಆ ಮನೆಯ ಯಜಮಾನಿಕೆ ಪಟ್ಟದಿಂದ ಕೆಳಕ್ಕೆ ಇಳಿಯುವಂತೆ ಶಾರ್ವರಿ ತುಳಸಿಗೆ ಪರೋಕ್ಷವಾಗಿ ಹೇಳಿದ್ದಾಳೆ. ಹೋಳಿ ಮುಗಿದ ಮೇಲೆ ಇದಕ್ಕೆ ಉತ್ತರ ಕೊಡುವುದಾಗಿ ತುಳಸಿ ನಗುಮೊಗದಿಂದ ಹೇಳಿ ಹೋಗಿದ್ದಳು. ಇದೀಗ ಕೀಯನ್ನು ವಾಪಸು ಮಾಡಿದ್ದಾಳೆ. ಇದನ್ನು ನೋಡಿ ಶಾರ್ವರಿ ಮತ್ತು ದೀಪಿಕಾ ಒಳಗೊಳಗೇ ಕುಣಿದು ಕುಪ್ಪಳಿಸುತ್ತಿದ್ದಾರೆ.

ಮಲೈಕಾ ಅರೋರಾ ತಾಯಿ- ಮಾಜಿ ಪತಿಯ ಅಪ್ಪ ಒಂದೇ ಕಾರಲ್ಲಿ: ಎಲ್ಲೋ ಮಿಸ್​ ಹೊಡಿತಿದೆ ಎಂದ ನೆಟ್ಟಿಗರು!

ಇದಕ್ಕೂ ಮೊದಲು, ಹೋಳಿ ಹಬ್ಬದ ಸಂದರ್ಭದಲ್ಲಿ ಬೇರೆಯವರ ಮನೆಯಿಂದ ಸೌದೆ ಕದ್ದು ತರುವ ಕುತೂಹಲದ ಸಂಪ್ರದಾಯವನ್ನು ಸೀರಿಯಲ್​ನಲ್ಲಿ ತೋರಿಸಲಾಗಿದೆ.  ಮನೆಯವರಿಗೆ ಗೊತ್ತಾಗದಂತೆ ಸೌದೆಯನ್ನು ಕದ್ದು ತರಬೇಕು. ಮನೆಯವರ ಕೈಗೆ ಸಿಕ್ಕಿಬೀಳಬಾರದು.  ಸದಾ ಸಿಡುಕನಂತೆ ಇರುವ ಅಭಿ ಮತ್ತು ಅವಿಗೆ ಅವರ ಚಿಕ್ಕಪ್ಪ ಸೌದೆ ತರುವ ಬಗ್ಗೆ ವಿವರಿಸಿದ್ದ. ಸೌದೆ ಎಲ್ಲಿಂದ ತರುವುದು ಎಂದು ಕೇಳಿದಾಗ ತುಳಸಿ ತನ್ನ ಮಾವ ಅಂದರೆ ದತ್ತನ ಮನೆಯಲ್ಲಿ ಸೌದೆ ಇದೆ ಎಂದಿದ್ದಳು. ಆದರೆ ದತ್ತನ ಕಣ್ಣು ತಪ್ಪಿಸಿ ಸೌದೆ ತರುವುದು ಬಲು ಕಷ್ಟವೇ ಎನ್ನುವುದು ಅವಿ-ಅಭಿ ಇಬ್ಬರಿಗೂ ಗೊತ್ತು. ಆದರೂ ಧೈರ್ಯ ಮಾಡಿ ಹೋಗಿದ್ದರು. ಇಬ್ಬರೂ ಸಿಕ್ಕಿಬಿದ್ದರೂ ದತ್ತ ಇಬ್ಬರನ್ನೂ ಕಾಪಾಡಿದ್ದಾನೆ.

ಗುಲಾಬಿ ನೀಡಲು ಅಲ್ಲಿ ಗೌತಮ್​ ಪ್ರಾಕ್ಟೀಸ್​ ಮಾಡ್ತಿದ್ರೆ ಇಲ್ಲಿ ಇವರೊಟ್ಟಿಗೆ ರೊಮ್ಯಾನ್ಸ್​ ಮಾಡೋದಾ? ನಟಿಯ ಕಾಲೆಳೆದ ಫ್ಯಾನ್ಸ್​


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?