ಬಾಣಂತಿಯರಿಗೆ ನುಗ್ಗೆ ಸೊಪ್ಪಿನ ಚಟ್ನಿ ಪೌಡರ್​ ಮಾಡುವುದು ಹೇಗೆ? ನಟಿ ಅದಿತಿ ಪ್ರಭುದೇವ ಟಿಪ್ಸ್​ ಕೇಳಿ...

By Suchethana D  |  First Published Jun 25, 2024, 6:38 PM IST

ಬಾಣಂತಿಯರಿಗೆ ನುಗ್ಗೆ ಸೊಪ್ಪಿನ ಚಟ್ನಿ ಮಾಡುವುದು ಹೇಗೆ? ನಟಿ ಅದಿತಿ ಪ್ರಭುದೇವ ಟಿಪ್ಸ್​ ಕೇಳಿ...
 


 ಇದೇ ಏಪ್ರಿಲ್​ 4ರಂದು ಸ್ಯಾಂಡಲ್​ವುಡ್​ ಬ್ಯೂಟಿ ಅದಿತಿ ಪ್ರಭುದೇವ ಹೆಣ್ಣುಮಗುವಿನ ತಾಯಿಯಾಗಿದ್ದು, ಇದೀಗ ತಾಯ್ತನದ ಸಂಪೂರ್ಣ ಖುಷಿಯನ್ನು ಸವಿಯುತ್ತಿದ್ದಾರೆ. ಮೊದಲಿನಿಂದಲೂ ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು ಆ್ಯಕ್ಟೀವ್​ ಆಗಿರುವ ನಟಿ ವಿಭಿನ್ನ ರೀತಿಯ ಟಿಪ್ಸ್​, ಅಡುಗೆ ಕುರಿತು ವಿಡಿಯೋ ಶೇರ್​ ಮಾಡುತ್ತಿದ್ದರು.  ಗರ್ಭಿಣಿಯಾದ ಮೇಲೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿಯೇ ಇದ್ದರು. ಗರ್ಭಿಣಿಯರಿಗೆ  ಸಹಜವಾಗಿ ಕಾಡುವ ಸಮಸ್ಯೆಗಳ ಬಗ್ಗೆ ಕೆಲವು ವಿಡಿಯೋ ಮಾಡಿದದರು.  ಅದಕ್ಕೆ ಕೆಲವೊಂದು ಪರಿಹಾರ ನೀಡಿದ್ದರು. ಅದಾದ ಬಳಿಕ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳಲ್ಲೇ ಮತ್ತೆ ಕೆಲಸ ಶುರು ಮಾಡಿಕೊಂಡಿದ್ದಾರೆ. 

ಇದೀಗ ಮಗುವಿನ ಆರೈಕೆ ಜೊತೆ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ ನಟಿ. ಈ ಹಿಂದೆ ಗರ್ಭಿಣಿಯಾಗಿದ್ದಾಗ ತುಂಬು ಗರ್ಭಿಣಿಯವರೆಗೂ ಫುಲ್​ ಆ್ಯಕ್ಟೀವ್​ ಇದ್ದ ನಟಿ, ಆಗಲೂ ಹಲವಾರು ಟಿಪ್ಸ್​ ಹೇಳಿದ್ದರು. ಇದೀಗ ಬಾಣಂತಿಯರಿಗೆ ನುಗ್ಗೆಕಾಯಿ ಸೊಪ್ಪಿನ ವಿಶೇಷ ಚಟ್ನಿಪುಡಿ ಮಾಡುವುದನ್ನು ನಟಿ ಹೇಳಿಕೊಟ್ಟಿದ್ದಾರೆ. ಅನ್ನ, ಇಡ್ಲಿ, ಚಪಾತಿ, ರೋಟಿ ಹೀಗೆ ಎಲ್ಲವುಗಳ ಜೊತೆ ತಿಂದರೆ ಬಾಣಂತಿಯರಿಗೆ ವಿಶೇಷ ಎಂದು ಅವರು ಹೇಳಿದ್ದಾರೆ. ನುಗ್ಗೆ ಸೊಪ್ಪು ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲವಾಗಿದ್ದು, ಇದು ಉತ್ತಮ ಮೂಳೆಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ದೇಹದಲ್ಲಿನ ಹೆಚ್ಚು ಸ್ನಾಯು ಸೆಳೆತ, ನೋವು ಕಂಡು ಬಂದಲ್ಲಿ ನುಗ್ಗೆ ಸೊಪ್ಪಿನ ಆಹಾರ ಪದಾರ್ಥವನ್ನು ನಿಯಮಿತವಾಗಿ ಸೇವಿಸಿ ನೋಡಿ, ಬೇಗನೆ ನೋವಿನಿಂದ ಮುಕ್ತಿ ಸಿಗುತ್ತದೆ ಎಂದು ನಟಿ ಹೇಳಿದ್ದಾರೆ. 

Tap to resize

Latest Videos

undefined

ನಿರ್ಬಂಧಿತ ಪ್ರದೇಶದಲ್ಲಿ ಅದಿತಿ ಪ್ರಭುದೇವ ಫೋಟೋಶೂಟ್! ನಟಿಯ ಕಾಲೆಳೆಯುತ್ತಿರೋ ನೆಟ್ಟಿಗರು

ನಟಿ ನುಗ್ಗೆಕಾಯಿ ಚಟ್ನಿಪುಡಿ ಮಾಡುವುದು ಹೀಗೆ: ಮೊದಲಿಗೆ ನುಗ್ಗೆ ಸೊಪ್ಪನ್ನು ಬಿಡಿಸಿಕೊಂಡು ತೊಳೆದು ಆರಲು ಬಿಡಬೇಕು. ಸ್ವಲ್ಪ ತುಪ್ಪ ಹಾಕಿಕೊಂಡು ನುಗ್ಗೆಸೊಪ್ಪು ಹಾಕಿಕೊಂಡು ನಿಧಾನ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು. ಸೆಪೆರೇಟ್​ ಆಗಿ ಇಟ್ಟುಕೊಳ್ಳಬೇಕು. ಅರ್ಧ ಚಮಚ ತುಪ್ಪವನ್ನು ಶೇಂಗಾ, ಕಡಲೆ, ಉದ್ದಿನ ಬೇಳೆ, ಕಡ್ಲೆ ಬೇಳೆ ನಿಧಾರ ಉರಿಯಲ್ಲಿ ಹುರಿದುಕೊಳ್ಳಬೇಕು. ನುಗ್ಗಿನ ಸೊಪ್ಪಿನ ತಟ್ಟೆಯಲ್ಲಿ ಹಾಕಿ ಆರಲು ಬಿಡಬೇಕು.ನಂತರ ಹುಣಸೆಹಣ್ಣು, ಕರಿಬೇವು, ಮೆಣಸು ಹುರಿದುಕೊಂಡು, ಒಣ ಕೊಬ್ಬರಿ ಹಾಕಿಕೊಂಡು ಹಾಕಿಕೊಳ್ಳಬೇಕು. ಆರಿದ ಮೇಲೆ ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಚಟ್ನಿಪುಡಿ ರೆಡಿಯಾಗುತ್ತದೆ. ಬಿಸಿ ಅನ್ನದ ಜೊತೆ ತುಪ್ಪ ಮತ್ತು ಎರಡು ಸ್ಪೂನ್​ ನುಗ್ಗೆಸೊಪ್ಪಿನ ಚಟ್ನಿ ಹಾಕಿಕೊಳ್ತೇನೆ. 

ಅಂದಹಾಗೆ ನಟಿ ಈಗ  ಎರಡು ತಿಂಗಳ ಮಗುವನ್ನು ಬಿಟ್ಟು  ಕಲರ್ಸ್​ ಕನ್ನಡ ಚಾನೆಲ್​ನಲ್ಲಿ  ರಾಜಾ ರಾಣಿ ಮೂರನೇ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಇದರ ಪ್ರೊಮೋ ಬಿಡುಗಡೆ ಮಾಡಿದಾಗಲೇ ಅಭಿಮಾನಿಗಳು ಇಷ್ಟು ಚಿಕ್ಕ ವಯಸ್ಸಿನ ಪಾಪುವನ್ನು ಬಿಟ್ಟು ಬಂದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದರು. ಇದೀಗ ಅದಿತಿಯವರು ಅಭಿಮಾನಿಗಳಿಗೆ ಉತ್ತರದ ಮೂಲಕ ಸಮಾಧಾನ ಹೇಳಿದ್ದಾರೆ. ಮದುವೆಯಾದ ಮೇಲೆ ಜೀವನದ ಬದಲಾವಣೆ ಆಗಿದ್ದು ನಿಜ. ಆದ್ರೆ ಅಮ್ಮನಾದ ಮೇಲಂತೂ ಅದೊಂದು ರೀತಿಯಲ್ಲಿ ಹೇಳಿಕೊಳ್ಳಲಾಗದ ಖುಷಿ. ಎಲ್ಲರೂ ಹೇಳುತ್ತಿದ್ದಾಗ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಇದೀಗ ತುಂಬಾ ಖುಷಿಯಾಗುತ್ತಿದೆ. ಅದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ತನ್ನ ಮಗುವಿಗೆ ಈಗ ಎರಡು ತಿಂಗಳು. ಅಮ್ಮ ಮತ್ತು ಗಂಡನ ಸಹಾಯ ಇಲ್ಲದಿದ್ದರೆ ತಾವು ಹೀಗೆ ಇಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. ಅಮ್ಮ ಮಗುವನ್ನು ನೋಡಿಕೊಳ್ಳುತ್ತಿರುವ ಕಾರಣ ನಾನು ಷೋಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ.

ಅಮ್ಮನಾದ ಮೇಲೆ ಹೇಗಿದೆ ಲೈಫ್​? 2 ತಿಂಗಳ ಮಗು ಬಿಟ್ಟು ರಿಯಾಲಿಟಿ ಷೋಗೆ ಬಂದ ಅದಿತಿ ಹೇಳಿದ್ದೇನು?

 

click me!