ಬಿಗ್​ಬಾಸ್​ನಲ್ಲಿ ಸುಂದರಿಯರ ಜೊತೆ ಡ್ರೋನ್​ ಪ್ರತಾಪ್​ ಭರ್ಜರಿ ರ‍್ಯಾಂಪ್​ ವಾಕ್​: ವ್ಹಾರೆವ್ಹಾ ಅಂತಿದ್ದಾರೆ ಫ್ಯಾನ್ಸ್​!

By Suvarna News  |  First Published Oct 15, 2023, 11:46 AM IST

ಬಿಗ್​ಬಾಸ್​ ಮನೆಯಲ್ಲಿ ಡ್ರೋನ್​ ಪ್ರತಾಪ್​ ಭರ್ಜರಿ ರ‍್ಯಾಂಪ್​ ವಾಕ್ ಮಾಡಿದ್ದು, ಅವರ ಫ್ಯಾನ್ಸ್​ ಫಿದಾ ಆಗಿದ್ದಾರೆ.
 


ಬಿಗ್​ಬಾಸ್​ನಲ್ಲಿ ಇರುವ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಟ್ರೋಲ್​ಗೆ ಒಳಗಾಗುತ್ತಿರುವ ಸ್ಪರ್ಧಿ ಎಂದರೆ ಡ್ರೋನ್​ ಪ್ರತಾಪ್​. ಅಸಲಿಗೆ ಇವರು ಬಿಗ್​ಬಾಸ್​ಗೆ ಆಯ್ಕೆ ಮಾಡಿರುವುದು ಇದೇ ಕಾರಣಕ್ಕೆ ಎನ್ನುವುದು ಎಲ್ಲರಿಗೂ ಗೊತ್ತಿದ್ದದ್ದೇ. ಕಾಂಟ್ರವರ್ಸಿ ಮಾಡಿಕೊಂಡವರಿಗೆ ಬಿಗ್​ಬಾಸ್​ನಲ್ಲಿ ಅವಕಾಶ ಹೆಚ್ಚಿರುವ ಆರೋಪದ ನಡುವೆಯೇ ಡ್ರೋನ್​ ಪ್ರತಾಪ್​ ಆಯ್ಕೆ ಆಗಿರುವುದು ಏಕೆ ಎನ್ನುವುದು ಸುಳ್ಳಲ್ಲ. ಅದರಂತೆಯೇ ಬಿಗ್​ಬಾಸ್​ ಮನೆಯೊಳಕ್ಕೂ ಪ್ರತಾಪ್​ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಪ್ರತಾಪ್‌ಗೆ ಮಾತನಾಡಲು ಬಿಡದೆ ನಾನ್ ಸ್ಟಾಪ್ ಟಾಂಗ್ ಮತ್ತು ಟಾಂಟ್ ಮಾಡುತ್ತಿದ್ದಾರೆ ತುಕಾಲಿ ಸಂತೋಷ್, ನಟ ಸ್ನೇಹಿತ್ ಮತ್ತು ವಿನಯ್ ಗೌಡ. ಡ್ರೋನ್​ ಮಾಡುತ್ತಿರುವುದಾಗಿ ಹೇಳಿ ಹಲವು ವರ್ಷ ವೇದಿಕೆಯ ಮೇಲೆ ಗಣ್ಯಾತಿಗಣ್ಯರನ್ನು ನಂಬಿಸಿ ಲಕ್ಷಗಟ್ಟಲೆ ಹಣ ನೀಡುವಂತೆ ಮಾಡಿದ್ದ ಪ್ರತಾಪ್​ ಅವರ ಬಗ್ಗೆ ಇನ್ನಿಲ್ಲದಷ್ಟು ಟ್ರೋಲ್​ ಮಾಡಲಾಗುತ್ತಿದೆ ಬಿಗ್​ಬಾಸ್​ ಮನೆಯಲ್ಲಿ.  ಜನರಿಗೆ ನಾನು ಯಾರು ನನ್ನ ಜೀವನ ಹೇಗಿದೆ ನನ್ನ ವ್ಯಕ್ತಿತ್ವ ಏನು ಅನ್ನೋದನ್ನು ಅರ್ಥ ಮಾಡಿಸಲು ಬಿಗ್ ಬಾಸ್‌ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಪ್ರತಾಪ್​ ಹೇಳಿಕೊಂಡಿದ್ದರೂ ಟ್ರೋಲ್​ ಮಾತ್ರ ನಿಲ್ಲುತ್ತಲೇ ಇಲ್ಲ. 

ಇದೀಗ ಡ್ರೋನ್​ ಪ್ರತಾಪ್​ ಜೊತೆಗೆ ಎಲ್ಲಾ ಸ್ಪರ್ಧಿಗಳನ್ನು  ಚಿಯರ್​ ಅಪ್ ಮಾಡಲು ಪ್ರತಾಪ್​ ಅವರಿಂದ ರ‍್ಯಾಂಪ್​ ವಾಕ್​ ಮಾಡಿಸಲಾಗಿದೆ. ಇದರ ಪ್ರೋಮೋ ಬಿಡುಗಡೆಯಾಗಿದ್ದು, ಸ್ಪರ್ಧಿಗಳ ಜೊತೆ ಪ್ರತಾಪ್​ ಅಭಿಮಾನಿಗಳು ಸೂಪರ್​ ಎನ್ನುತ್ತಿದ್ದಾರೆ. ಇದಾಗಲೇ ಡ್ರೋನ್​ ಪ್ರತಾಪ್​ ಪರವಾಗಿ ಹಲವು ಪ್ರೇಕ್ಷಕರು ಬ್ಯಾಟಿಂಗ್​ ಬೀಸುತ್ತಿದ್ದಾರೆ.  ಜೀವನದಲ್ಲಿ ನೀವು ಏನು ಸಾಧನೆ ಮಾಡಿದ್ದೀರಾ ಅಂತ ಆತನನ್ನು ಅಷ್ಟು ಪ್ರಶ್ನೆ ಮಾಡುತ್ತಿದ್ದೀರಾ ಎಂದು ಪ್ರತಾಪ್​ ಫ್ಯಾನ್ಸ್​ ಟ್ರೋಲ್​ ಮಾಡುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಪ್ಪು ಮಾಡಿದವರಿಗೆ ಆ ದೇವರೇ ಕ್ಷಮೆ ನೀಡಿ ಮತ್ತೊಮ್ಮೆ ಜೀವನ ಹೊಸದಾಗಿ ಶುರು ಮಾಡಲು ಅವಕಾಶ ನೀಡುತ್ತಾನೆ ಅಂದ ಮೇಲೆ ಯಾಕೆ ನಾವು ಅವಕಾಶ ಕೊಡಬಾರದು ಎಂದು ಸುದೀಪ್​ ಕೂಡ ಪ್ರೆಸ್​ಮೀಟ್​ನಲ್ಲಿ ಹೇಳಿದ್ದರು. ಹೀಗಿರುವಾಗ ತುಕಾಲಿ, ಸ್ನೇಹಿತ್ ಮತ್ತು ವಿನಯ್ ಯಾರು? ಯಾಕೆ ಪದೇ ಪದೇ ಕೊಂಕು ಮಾತನಾಡುತ್ತಿರುವುದು? ದೇವರ ಪಾತ್ರ ಮಾಡಿದ ಮಾತ್ರಕ್ಕೆ ವಿನಯ್ ದೊಡ್ಡ ಸಾಧಕನೇ? ಕ್ಯಾಪ್ಟನ್ ಆಗಲು ಒಂದ ಅವಕಾಶದ ಟಾಸ್ಕ್ ಮತ್ತು ಲಾರ್ಡ್ ಪ್ರಥಮ್ ಕೊಟ್ಟ ಟಾಸ್ಕ್‌ ಎರಡೂ ಮಾಡಲು ಆಗಲಿಲ್ಲ ಇನ್ನು ಸ್ಟ್ರಾಂಗ್ ವ್ಯಕ್ತಿ ಅಂತ ಯಾಕೆ ಬಿಲ್ಡಪ್ ಎಂದೆಲ್ಲಾ ಪ್ರಶ್ನಿಸಿದ್ದರು.

Tap to resize

Latest Videos

ಬಿಗ್​ಬಾಸ್​ಗೆ ಹೋಗ್ತೀರಾ ಎಂದಾಗ ಡ್ರೋನ್​ ಪ್ರತಾಪ್ ಹಿಂದೆ​ ಹೇಳಿದ್ದೇನು? ವಿಡಿಯೋ ವೈರಲ್- ಸಕತ್​ ಟ್ರೋಲ್​​

ಇದೀಗ ತಮ್ಮ ನೆಚ್ಚಿನ ಪ್ರತಾಪನ ಹೊಸ ಅವತಾರ ನೋಡಿ ಫ್ಯಾನ್ಸ್​ ಫುಲ್​ ಖುಷ್​ ಆಗಿದ್ದಾರೆ. ಸುಂದರಿಯರ ಜೊತೆ ಪ್ರತಾಪ್​ ಭರ್ಜರಿ ಸ್ಟೆಪ್​ ಕೂಡ ಹಾಕಿದ್ದಾರೆ. ಅದಕ್ಕೆ ಸುದೀಪ್​ ಅವರು, ಓಪನ್​ ಅಪ್​ ಬೇಕು ಎಂದು ತುಕಾಲಿ ಅವ್ರೇ ನೀವು ಹೇಳ್ತಾ ಇದ್ರೀ. ಈಗ ನೋಡಿ ಪ್ರತಾಪನ ರ್ಯಾಂಪ್​ ವಾಕ್​ ಎಂದರು. ನಮ್ಮದು ವರ್ತೂರು ಟೊಮ್ಯಾಟೋ ಅಲ್ಲ ನಾಟಿ ಟೊಮ್ಯಾಟೋ ಅದು ತುಂಬಾ Naughty (ತುಂಟ) ಎಂದು ಸುದೀಪ್​ ತಮಾಷೆ ಮಾಡಿದರು. 

ಅಷ್ಟಕ್ಕೂ ಡ್ರೋನ್​ ಪ್ರತಾಪ್ ಹೆಸರು  ಕೇಳದವರೇ ಇಲ್ಲವೇನೋ. ಕೆಲ ವರ್ಷಗಳ ಹಿಂದೆ ಈ ಯುವಕನ ಹೆಸರು ಹೇಳಿಕೊಂಡು ತಮ್ಮ ಮನೆಯ ಮಕ್ಕಳನ್ನು ಬೈದವರು ಅದೆಷ್ಟೋ ಮಂದಿ. ಇವನನ್ನು ನೋಡಿ ಸ್ವಲ್ಪನಾದರೂ ಬುದ್ಧಿ ಕಲಿ ಎಂದು ಹೇಳಿಸಿಕೊಂಡ ಮಕ್ಕಳು ಇನ್ನೆಷ್ಟೋ. ಹೋದಲ್ಲಿ, ಬಂದಲ್ಲಿ ಈ ಯುವಕನ ಮಾತೇ ಮಾತು. ಪ್ರತಾಪ್​ ಅವರ ಮಾತಿನ ಪ್ರತಾಪಕ್ಕೆ ಮೋಡಿಯಾಗದವೇ ಇಲ್ಲ. ವಿಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡು ಮತ್ತೆ ಈಗ ಕಾಣಿಸಿಕೊಂಡಿದ್ದಾರೆ ಪ್ರತಾಪ್​.

ಬಿಗ್​ಬಾಸ್​ ಮನೆಯಲ್ಲೂ ಹಾರದ ಡ್ರೋನ್​: ಪ್ರತಾಪನ ಅವಸ್ಥೆ ಕಂಡು ಅಯ್ಯೋ ಅಂತಿದ್ದಾರೆ ಫ್ಯಾನ್ಸ್​!

click me!