ಮದುವೆಯಾದ ಹೊಸತರಲ್ಲಿ ಎಲ್ಲರೂ ಹನಿಮೂನ್ ಮೂಡ್ನಲ್ಲಿದ್ದರೆ ಕೈಯಲ್ಲಿ ಕೆಲ್ಸ ಇಲ್ಲದೇ ಚಾಕಲೇಟ್ ಕೂಡ ತರಲು ಹಣವಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಸೀರಿಯಲ್ ನಟ ಶಶಿ ಹೆಗ್ಡೆ
ಹಲವು ಯಶಸ್ವಿ ಜನರ ಹಿನ್ನೆಲೆ ಕೆದಕಿದರೆ ಅಲ್ಲಿರುವುದು ನೋವಿನ ಕಥೆಯೇ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿದ್ದ ಎಷ್ಟೋ ಮಂದಿ ಇಂದು ಜಗತ್ತಿನ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ, ತಮ್ಮ ಸ್ವಂತ ಬಲದಿಂದ ಮೇಲಕ್ಕೇರಿ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿದವರಿದ್ದಾರೆ. ತಮ್ಮ ಹಿಂದಿನ ಕಠಿಣ, ಭಯಂಕರ ದಿನಗಳನ್ನು ನೆನಪುಗಳನ್ನು ಮೆಲುಕು ಹಾಕಿದ ಗಣ್ಯ ವ್ಯಕ್ತಿಗಳನ್ನು ನಾವು ಹಲವಾರು ವೇದಿಕೆಗಳಲ್ಲಿ ನೋಡಿದ್ದಿದೆ. ಅಂಥದ್ದೇ ಒಂದು ನೋವಿನ ದಿನಗಳನ್ನು ಈಗ ಜೋಡಿ ನಂಬರ್-1 ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ ತಾರಾ ಜೋಡಿ ಶಶಿ ಹೆಗ್ಡೆ ಮತ್ತು ಲಾವಣ್ಯ. ಪತ್ನಿಗೆ ಅವಳಿಷ್ಟದ ಚಾಕಲೇಟ್ ಕೊಡಿಸಲು ಕೂಡ ದುಡ್ಡು ಇಲ್ಲದ ಸ್ಥಿತಿಯನ್ನು ನೆನಪಿಸಿಕೊಂಡಿದ್ದಾರೆ ಶಶಿ ಹೆಗ್ಡೆ. ಕಳೆದ ವರ್ಷ ಅಂದ್ರೆ 2022ರ ಮೇ ತಿಂಗಳಿನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆಯಾದ ಹೊಸತರಲ್ಲಿ ಹಣಕ್ಕಾಗಿ ಪಟ್ಟ ತೊಂದರೆ ಕುರಿತು ಮಾತನಾಡಿದ್ದಾರೆ ರಾಜ ರಾಣಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿರೋ ನಟ ಶಶಿ ಹೆಗ್ಡೆ. ಇವರು `ದಾಸಪುರಂದರ’ ಸೀರಿಯಲ್‌ನ ಪದ್ಮಾ ಮೂಲಕ ಮನೆ ಮಾತಾಗಿರುವ ಲಾವಣ್ಯ ಜೊತೆ ಹಸೆಮಣೆಯೇರಿದ್ದಾರೆ. ಲಾವಣ್ಯ ಸದ್ಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಪತಿ ಪತ್ನಿಗೆ ಹಾಗೂ ಪತ್ನಿ ಪತಿಗೆ ಏನೇ ಉಡುಗೊರೆ ತಂದುಕೊಟ್ಟರೂ ಅದು ಇಬ್ಬರನ್ನೂ ಖುಷಿಯಲ್ಲಿ ತೇಲಿಸುವುದು ಸಹಜವೇ. ಅವರವರ ಅಂತಸ್ತು, ಅವರವರ ಶ್ರೀಮಂತಿಕೆಗೆ ತಕ್ಕಂತೆ ಉಡುಗೊರೆಯ ಬೆಲೆಯಲ್ಲಿ ಹೆಚ್ಚೂ ಕಡಿಮೆ ಆಗಬಹುದು. ಅದು ಒಂದು ರೂಪಾಯಿಯ ಉಡುಗೊರೆಯೇ ಆಗಿರಬಹುದು ಇಲ್ಲವೇ ಲಕ್ಷ-ಕೋಟಿಗಳಲ್ಲೇ ಬೆಲೆ ಬಾಳಬಹುದು. ಆದರೆ ಪ್ರೀತಿಯಿಂದ ಕೊಡುವ ಉಡುಗೊರೆ ಎಂದಿಗೂ ಅತ್ಯಮೂಲ್ಯವಾದದ್ದೇ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂ.1ನಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿರುವ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರ ಉಡುಗೊರೆಯ ಎಪಿಸೋಡ್ ಇದಾಗಿದ್ದು, ಇದರ ಹಿಂದೆ ದೊಡ್ಡ ಕಥೆಯೇ ಇದ್ದು, ಇದನ್ನು ಕೇಳಿ ಪ್ರೇಕ್ಷಕರು ಭಾವುಕರಾಗಿದ್ದಾರೆ.
ಜೋಡಿ ನಂ.1: ಫಸ್ಟ್ ನೈಟ್ ಅನುಭವ ಹಂಚಿಕೊಂಡ ನಟ ಶಶಿ, ಲಾವಣ್ಯ ಭಾವುಕ!
ಜೋಡಿ ನಂ.1 ರಿಯಾಲಿಟಿ ಷೋನಲ್ಲಿ ಶಶಿ ಅವರು ತಾವಿಬ್ಬರು ಮೊದಲು ತೆಗೆದುಕೊಂಡಿದ್ದ ಸೆಲ್ಫಿಯ ಫೋಟೋ ಫ್ರೇಮ್ ಕೊಟ್ಟು ಲಾವಣ್ಯರನ್ನು ಭಾವುಕಗೊಳಿಸಿದ್ದಾರೆ. ಆದರೆ ಪ್ರೇಕ್ಷಕರು ಭಾವುಕರಾಗಿದ್ದು, ಇವರು ಪತ್ನಿಗೆ ಚಾಕಲೇಟ್ ನೀಡಿ ಹಳೆಯದ್ದನ್ನು ನೆನಪಿಸಿಕೊಂಡಾಗ. ನೀನು ನನ್ನನ್ನು ವೀಕ್ ಅಂತ ಹೇಳ್ತಿದ್ದಿಯಲ್ಲ, ಸ್ಟ್ರಾಂಗ್ ಅಂತ ಪ್ರೋವ್ ಮಾಡುತ್ತೇನೆ ಎಂದು ಪತ್ನಿಗೆ ಆಕೆಯ ಇಷ್ಟದ ಚಾಕಲೇಟ್ ನೀಡಿದ್ದಾರೆ ಶಶಿ. ನಂತರ ಮದುವೆಯಾದ ಹೊಸತರಲ್ಲಿ ತಾವು ಅನುಭವಿಸಿದ ಕೆಟ್ಟ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಮದುವೆಯಾದಾಗ ಎಲ್ಲರೂ ಹನಿಮೂನ್ ಮೂಡ್ನಲ್ಲಿದ್ದರೆ ನಾವಿಬ್ಬರೂ ಕೈಯಲ್ಲಿ ಕೆಲಸ ಇಲ್ಲದೇ ಪರದಾಡುತ್ತಿದ್ದೆವು ಎಂದು ಶಶಿ ಹೇಳಿದರು. ಆಗ ಲಾವಣ್ಯ ನನ್ನನ್ನು ಮದುವೆಯಾದುದಕ್ಕೇ ನಿಮಗೆ ಈ ಸ್ಥಿತಿ ಬಂತು ಎಂದು ನನಗೆ ನೋವಾಗಿತ್ತು ಎಂದರು. ಆಗ ಶಶಿ ಅವರು, ನೀನು ನಿನ್ನಿಷ್ಟದ ಚಾಕಲೇಟ್ ನೀಡುವಂತೆ ಕೇಳಿದೆ. ಆದರೆ ಅದನ್ನು ತಂದುಕೊಡಲು ಕೂಡ ನನ್ನ ಬಳಿ ಹಣವಿರಲಿಲ್ಲ. ನಿನ್ನ ಇಷ್ಟವನ್ನು ನೆರವೇರಿಸುವುದಕ್ಕಾಗಿ ಅಲ್ಲಿ ಇಲ್ಲಿ ಕೆಲಸ ಮಾಡಿದೆ, ಡೆಲವರಿ ಬಾಯ್ ಆಗಿಯೂ ಕೆಲಸ ಮಾಡಿದೆ ಎಂದು ನೆನಪಿಸಿಕೊಂಡರು.
ಅದಾದ ಬಳಿಕ ನಿನ್ನಲ್ಲಿ ನನ್ನ ಅಮ್ಮನ ಗುಣಗಳು ತುಂಬಾ ಇವೆ ಎಂದು ಪತ್ನಿಗೆ ಹೇಳಿದ ಶಶಿ ಅವರು, ಅಮ್ಮ ಹೋದ ಮೇಲೆ ಅಪ್ಪ ಜತನದಿಂದ ಕಾಪಾಡಿದ್ದ ಅಮ್ಮನ ಸೀರೆಯನ್ನು ಪತ್ನಿ ಲಾವಣ್ಯ ಅವರಿಗೆ ನೀಡಿದರು. ಜೊತೆಗೆ ಲಿಯೋ ಗಾಡಿಯನ್ನೂ ಗಿಫ್ಟ್ ಆಗಿ ನೀಡಿದರು.
ಮರುಜನ್ಮ ಪಡೆದ ಪತ್ನಿಗೆ ಜೋಡಿ ನಂ.1 ವೇದಿಕೆಯಲ್ಲಿ ಸೀರೆ ಕೊಟ್ಟು ಕಣ್ಣೀರು ತರಿಸಿದ 'ಅಮೃತಧಾರೆ' ಆನಂದ್