ಆಸ್ಪತ್ರೆಯಿಂದ ಬಿಗ್​ಬಾಸ್​ ಮನೆಗೆ ಮರಳಿದ ಪ್ರತಾಪ್​ಗೆ ಅದ್ಧೂರಿ ಸ್ವಾಗತ: ಡ್ರೋನ್​ ಮೊಗದಲ್ಲಿ ನೋವು!

By Suvarna News  |  First Published Jan 6, 2024, 11:42 AM IST

ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಡ್ರೋನ್​ ಪ್ರತಾಪ್​ ಪುನಃ ಬಿಗ್​ಬಾಸ್ ಮನೆಗೆ ವಾಪಸಾಗಿದ್ದಾರೆ. ಅವರ ಪ್ರೊಮೋ ರಿಲೀಸ್​ ಆಗಿದೆ.
 


ಬಿಗ್​ಬಾಸ್​ ಮನೆಯಲ್ಲಿ ಇರುವ ಹಾಲಿ ಸ್ಪರ್ಧಿಗಳ ಪೈಕಿ ಪ್ರಬಲ ಸ್ಪರ್ಧಿ ಎಂದೇ ಬಿಂಬಿಸಲಾಗುತ್ತಿರುವ ಡ್ರೋನ್​ ಪ್ರತಾಪ್​ ಮೊನ್ನೆ ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದು ಆತ್ಮಹತ್ಯೆಗೆ ಪ್ರಯತ್ನ ಎಂದೂ ಭಾರಿ ಸದ್ದು ಮಾಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿನ ವೈದ್ಯರು ಅನಾರೋಗ್ಯದ ಕಾರಣ ಕೊಟ್ಟು, ಇದು ಆತ್ಮಹತ್ಯೆಗೆ ಪ್ರಯತ್ನವೇನೂ ಅಲ್ಲ, ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್​ ಪಾಯ್ಸನ್​ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟರು. ಅಷ್ಟಕ್ಕೂ  ಬಿಗ್​ಬಾಸ್​ ಮನೆಯಲ್ಲಿ ತಮ್ಮನ್ನು ಕಡೆಗೆಣಿಸಿದ್ದಕ್ಕೆ ಪ್ರತಾಪ್​ ಅಸಾಮಾಧಾನಗೊಂಡಿದ್ದರು ಎನ್ನಲಾಗಿದೆ.  ಟಾಸ್ಕ್ ವಿಚಾರದಲ್ಲಿ ಕಡೆಗಣಿಸಿದ್ದಕ್ಕೆ ಪ್ರತಾಪ್​ ಬೇಸರಗೊಂಡಿದ್ದರು. ಈ ವಿಚಾರವಾಗಿ ಬಿಗ್​ಬಾಸ್​​ ಮನೆಯಲ್ಲಿ ಅವರು ಕಣ್ಣೀರು ಕೂಡ ಆಗಿದ್ದರು.  ‘ನಿನಗೆ ಆಡಲು ಬರಲ್ಲ, ಪ್ಯಾನಿಕ್ ಆಗ್ತೀಯ’ ಎಂದು ಇತರ ಸ್ಪರ್ಧಿಗಳು ಹೀಯಾಳಿಸಿದ್ದರಿಂದ ಪ್ರತಾಪ್​ ಕುಗ್ಗಿ ಹೋಗಿದ್ದರು ಎನ್ನಲಾಗುತ್ತಿದೆ. ಅದೇ ಇನ್ನೊಂದೆಡೆ, ಬಿಗ್​ಬಾಸ್​ ಮನೆಗೆ ಬಂದಿದ್ದ ಗುರೂಜಿ ಕೂಡ,  ಪ್ರತಾಪ್‌ ಅವರು ಕುಟುಂಬದಿಂದ ದೂರವೇ ಇದ್ದರೆ ಒಳಿತಾಗುತ್ತದೆ ಎಂದು ಕೂಡ ಹೇಳಿದ್ದರು. ಅಷ್ಟಕ್ಕೂ ಇದಾಗಲೇ ಡ್ರೋನ್​ ಪ್ರತಾಪ್​ ಮೂರು ವರ್ಷಗಳಿಂದ ತಮ್ಮ ಪಾಲಕರ ಬಳಿಮಾತನಾಡಿರಲಿಲ್ಲ. ಕೊನೆಗೆ ಬಿಗ್​ಬಾಸ್​ ಅದಕ್ಕೆ ವೇದಿಕೆಯನ್ನು ಕಲ್ಪಿಸಿತ್ತು. 

ಇಷ್ಟಾಗುವಷ್ಟರಲ್ಲಿ ಪ್ರತಾಪ್​ ಅಸ್ವಸ್ಥಗೊಂಡುಬಿಟ್ಟರು. ಇದು ಆತ್ಮಹತ್ಯೆಗೆ ಪ್ರಯತ್ನ ಎನ್ನುತ್ತಿದ್ದಂತೆಯೇ,  ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ಅಧಿಕಾರಿ ಶಿವಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು.  ಪ್ರತಾಪ್‌ಗೆ(Drone Pratap) ಚಿಕಿತ್ಸೆ ಕೊಟ್ಟ ವೈದ್ಯರ ಜೊತೆ ಚರ್ಚೆ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.  ನಂತರ ಅವರು  ಬಿಗ್ ಬಾಸ್(Bigg Boss) ಮನೆಗೂ ಹೋಗಿ ಮಾಹಿತಿ ಪಡೆದಿದ್ದರು.  

Tap to resize

Latest Videos

ಡ್ರೋನ್ ಪ್ರತಾಪ್ ಆಸ್ಪತ್ರೆಯಿಂದ ಡಿಶ್ಚಾರ್ಜ್‌: ಅಸಲಿ ಸತ್ಯವನ್ನು ಬಹಿರಂಗಪಡಿಸಿದ ಕುಂಬಳಗೋಡು ಪೊಲೀಸರು!

ಇದರ ನಡುವೆಯೇ ಇದೀಗ ಡ್ರೋನ್​ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಬಂದಿದೆ. ಅದೇನೆಂದರೆ, ಪ್ರತಾಪ್​ ಮತ್ತೆ ಬಿಗ್​ಬಾಸ್​ ಮನೆಗೆ ವಾಪಸಾಗಿದ್ದಾರೆ. ಇತರ ಸ್ಪರ್ಧಿಗಳು ಅವರನ್ನು ಖುಷಿಯಿಂದ ಬರಮಾಡಿಕೊಂಡರು. ಮನೆಗೆ ಬರುತ್ತಿದ್ದಂತೆಯೇ ಅವರ ಆರೋಗ್ಯದ ಬಗ್ಗೆ ಹಲವು ರೀತಿಯಲ್ಲಿ ಸ್ಪರ್ಧಿಗಳು ಪ್ರಶ್ನೆ ಕೇಳಿದ್ದಾರೆ. ಮೊದಲಿಗೆ ಗಣಪತಿ ಪೂಜೆಯನ್ನು ನೆರವೇರಿಸಿದ ಡ್ರೋನ್​ ಪ್ರತಾಪ್​ ಮುಖದಲ್ಲಿ ಗೆಲುವು ಇರಲಿಲ್ಲ, ಮುಖ ಬಾಡಿಹೋದ ಹಾಗಿದ್ದು, ಯಾಕೋ ಇನ್ನೂ ಬೇಸರದಲ್ಲಿ ಇರುವಂತೆ ಈಗ ರಿಲೀಸ್​​ ಆಗಿರುವ ಪ್ರೊಮೋದಲ್ಲಿ ನೋಡಬಹುದು. ನೀನು ಚೆನ್ನಾಗಿದ್ದರಷ್ಟೇ ಸಾಕಪ್ಪ ಎಂದು ಇತರ ಸ್ಪರ್ಧಿಗಳು ಹೇಳಿದ್ದಾರೆ. ನಿನ್ನ ಆರೋಗ್ಯ ಹೇಗಿದೆ ಎಂದು ಸಂತೋಷ್​ ಅವರು ಕೇಳಿದಾಗಲೂ ಡ್ರೋನ್​ ಪ್ರತಾಪ್​ ಮುಖದಲ್ಲಿ ವಿಷಾದದ ನಗುವಿರುವುದನ್ನು ನೋಡಬಹುದು. 

ವೈದ್ಯರು ಹೇಳಿದ್ದೇನು?  ಜನವರಿ 2ರ  ಮಧ್ಯರಾತ್ರಿ 2.30ಕ್ಕೆ ಡ್ರೋನ್‌ ಪ್ರತಾಪ್ ಅವರನ್ನು ಬಿಗ್‌ಬಾಸ್‌ ಸಿಬ್ಬಂದಿ ಕರೆದುಕೊಂಡು ಬಂದಾಗ ಡ್ರೋನ್‌ ಪ್ರತಾಪ್‌ ಅವರೇ ತಮಗೆ ಏನಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡಿದ್ದರು. ಅವರ  ಬಿಪಿ ಕಡಿಮೆಯಿತ್ತು, ಅವರಿಗೆ ಏಳೆಂಟುಬಾರಿ ಲೂಸ್‌ ಮೋಷನ್ ಆಗಿತ್ತು. ಒಂದೆರಡು ಬಾರಿ ವಾಂತಿ ಆಗಿತ್ತು. ಒಂದು ದಿನ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಇಂದು (ಜ.3) ಮಧ್ಯಾಹ್ನ 1 ಗಂಟೆಗೆ ಅವರನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದೆ. ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಯಾವುದೇ ಸುಳಿವಿಲ್ಲ. ಅವರು ವಾಂತಿ ಮಾಡಿದಾಗ ಯಾವುದೇ ರೀತಿಯ ಮೆಡಿಸಿನ್ ತೆಗೆದುಕೊಂಡಿದ್ದ ಬಗ್ಗೆ ಲಕ್ಷಣಗಳು ಇರಲಿಲ್ಲ. ಆತ್ಮಹತ್ಯೆಗೆ ಯತ್ನ, ಟ್ಯಾಬ್ಲೆಟ್ ನುಂಗಿರುವ ಬಗ್ಗೆ ಯಾವುದೇ ಪ್ರಯತ್ನವೂ ಆಗಿಲ್ಲ, ಅವರಿಗೆ ಗ್ಯಾಸ್ಟ್ರರೈಟಿಸ್‌ ಹಾಗೂ ಡಿಹೈಡ್ರೇಷನ್‌ನಿಂದ ಈ ರೀತಿ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಸಂಜೀವಿನಿ ಆಸ್ಪತ್ರೆ ವೈದ್ಯ ಪ್ರತಾಪ್ ಹಾಗೂ ಡಾ.ಪೂರ್ವಜ್‌ ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದರು. ಒಟ್ಟಿನಲ್ಲಿ ಡ್ರೋನ್​ ಮತ್ತೆ ಆರೋಗ್ಯವಂತರಾಗಿ ವಾಪಸಾಗಿದ್ದಾರೆ. 

ಪ್ಲೀಸ್‌ ಬಾಗಿಲು ತೆಗೆಯಿರಿ... ಅಪ್ಪ-ಅವ್ವನ್ನ ನೋಡ್ಬೇಕು... ಬಿಕ್ಕಿ ಬಿಕ್ಕಿ ಅತ್ತ ಡ್ರೋನ್‌ ಪ್ರತಾಪ್‌!

click me!