
ಬಿಗ್ಬಾಸ್ನಲ್ಲಿ ನಿನ್ನೆ ರಾತ್ರಿ ಏಕಾಏಕಿ ಭಾರಿ ಬೆಳವಣಿಗೆ ನಡೆದಿದೆ ಎನ್ನಲಾಗುತ್ತಿದ್ದು, ಪ್ರಮುಖ ಸ್ಪರ್ಧಿಗಳು ಎನಿಸಿಕೊಂಡಿರುವ ಡ್ರೋನ್ ಪ್ರತಾಪ್ (Drone Pratap) ಮತ್ತು ಸಂಗೀತಾ ಶೃಂಗೇರಿ ಹೊರಹೋಗಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಭರಾಟೆ ಬಲು ಜೋರಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಜಗಳ, ಕಿತ್ತಾಟ, ಮಾರಾಮಾರಿಗಳು ನಡೆದಿವೆ. ಈ ಮೂಲಕವೇ ಬಿಗ್ಬಾಸ್ನ ಟಿಆರ್ಪಿ ರೇಟೂ ಹೆಚ್ಚಾಗುತ್ತಿವೆ. ಇದೀಗ ಇದೇ ಟಾಸ್ಕ್ ಸಮಯದಲ್ಲಿ ಡ್ರೋನ್ ಪ್ರತಾಪ್ ಮತ್ತು ಸಂಗೀತಾ (Sangeetha Sringeri) ಅವರಿಗೆ ಹಾನಿ ಆಗಿದೆ ಎನ್ನಲಾಗುತ್ತಿದೆ. ಸೋಪ್ ನೀರನ್ನು ಪರಸ್ಪರ ಎರೆಚಿಕೊಳ್ಳುವ ಟಾಸ್ಕ್ನಲ್ಲಿ ಇವರಿಬ್ಬರ ಮುಖಕ್ಕೆ ರಾಸಾಯನಿಕ ನೀರು ಬಿದ್ದಿದೆ ಎನ್ನಲಾಗುತ್ತಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಸುದ್ದಿ ಇದೆ. ನಿನ್ನೆ ರಾತ್ರಿಯೇ ಈ ಘಟನೆ ನಡೆದಿದೆ ಎನ್ನುವ ಸುದ್ದಿಯಾಗುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಸದ್ಯ ಈ ಗಾಳಿಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಅವರ ಕಣ್ಣು, ಮೂಗು, ಬಾಯಿಗೆ ನೀರು ಬಿದ್ದಿದ್ದರಿಂದ ಇಬ್ಬರೂ ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದ್ದು, ಬಿಗ್ಬಾಸ್ ಮನೆಯಿಂದ ಅವರನ್ನು ಹೊರಕ್ಕೆ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎನ್ನುವ ಸುದ್ದಿ ಹರಡುತ್ತಿದೆ.
ಬಿಗ್ಬಾಸ್ ಮನೆಯಲ್ಲಿ ಹೊಸಲೋಕ ಸೃಷ್ಟಿ! ಗಂಧರ್ವರಿಗೆ ರಾಕ್ಷಸರಿಂದ ಕಿರುಕುಳ: ಯಾರಿಗೆ ಸಿಕ್ತು ಜಯ?
ಅಷ್ಟಕ್ಕೂ ಆಗಿದ್ದೇನೆಂದರೆ, ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಸ್ಪರ್ಧೆ ಟಫ್ ಆಗುತ್ತಾ ಸಾಗಿದೆ. ಇದಾಗಲೇ ಹಲವಾರು ಟಾಸ್ಕ್ಗಳನ್ನು ಸ್ಪರ್ಧಿಗಳು ನಡೆಸಿಕೊಟ್ಟಿದ್ದಾರೆ. ವಿನಯ್, ತನಿಷಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಕಾರ್ತಿಕ್ ಸೇರಿದಂತೆ ಇತರ ಸ್ಪರ್ಧಿಗಳ ನಡುವೆ ಸ್ಪರ್ಧೆ ಹೆಚ್ಚಾಗಿದ್ದು, ಬಿಗ್ಬಾಸ್ ಮನೆಯ ಹೊರಗೂ ಇವರ ಫ್ಯಾನ್ಸ್ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಸರ್ಕಸ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸ್ಪರ್ಧಿಗಳಲ್ಲಿ ಕಿತ್ತಾಟವೂ ಹೆಚ್ಚಾಗುತ್ತಿದೆ.
ಇದರ ನಡುವೆಗೆ 2-3 ದಿನಗಳಿಂದ ಬಿಗ್ಬಾಸ್ ಮನೆ ಬಿಗ್ಬಾಸ್ ಲೋಕ ಆಗಿ ಪರಿವರ್ತನೆ ಆಗಿದೆ. ಇಲ್ಲಿ ಒಂದಿಷ್ಟು ಸ್ಪರ್ಧಿಗಳು ಗಂಧರ್ವರಾಗಿಯೂ, ಇನ್ನೊಂದಿಷ್ಟು ಮಂದಿ ರಾಕ್ಷಸರಾಗಿಯೂ ಪರಿವರ್ತನೆಯಾಗಿದ್ದಾರೆ. ಕಾರ್ತಿಕ್, ಸಂಗೀತಾ, ತುಕಾಲಿ ಸಂತೋಷ್, ಡ್ರೋನ್ ಪ್ರತಾಪ್, ತನಿಷಾ ರಾಕ್ಷಸ ಗಣದ ಟೀಮ್ ಹಾಗೂ ವಿನಯ್, ನಮ್ರತಾ, ವರ್ತೂರು ಸಂತೋಷ್, ಮೈಕಲ್, ಪವಿ ಗಂಧರ್ವರ ಟೀಮ್ನಲ್ಲಿದ್ದರು. ಇಬ್ಬರ ನಡುವೆ ಭಾರಿ ಪೈಪೋಟಿ ನಡೆದಿತ್ತು. ಇದಾದ ಬಳಿಕ ಒಂದು ಹಂತದಲ್ಲಿ ಸೇಡಿಗೂ ಕಾರಣವಾಗಿತ್ತು. ಈ ಟಾಸ್ಕ್ ಬಳಿಕ ಗಂಧರ್ವರು ರಾಕ್ಷಸರಾಗಿ, ರಾಕ್ಷಸರು ಗಂಧರ್ವರಾಗಿದ್ದರು. ಹಿಂದಿನ ಸೇಡು ತೀರಿಸಿಕೊಳ್ಳಲು ಕಾತರರಾಗಿದ್ದ ಸ್ಪರ್ಧಿಗಳು, ಟಾಸ್ಕ್ ಹೆಸರಲ್ಲಿ ಸೇಡು ತೀರಿಸಿಕೊಳ್ಳಲು ಶುರುವಿಟ್ಟುಕೊಂಡಿದ್ದರು. ಇದೇ ಕಾರಣಕ್ಕೆ, ಸೋಪಿನ ನೀರಿನ ಎರೆಚಾಟದ ಟಾಸ್ಕ್ನಲ್ಲಿ ಪ್ರತಾಪ್ ಮತ್ತು ಸಂಗೀತಾ ಅವರಿಗೆ ಹಾನಿಯಾಗಿದೆ ಎನ್ನಲಾಗುತ್ತಿದ್ದು, ಇದರ ಅಧಿಕೃತ ಮಾಹಿತಿ ಹೊರಬರಬೇಕಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.