ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ರಾಜ ರಾಣಿ' ನಟ!

By Suvarna News  |  First Published Jan 28, 2020, 9:58 AM IST

 'ರಾಜ ರಾಣಿ' ಧಾರಾವಾಹಿಯ ನಟ ಓಂಕಾರ್‌ ಅಲಿಯಾಸ್‌ ತಾರಕ್‌ ಪೊನ್ನಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಡಗಿ ಯಾರೆಂದು ಇಲ್ಲಿದೆ ನೋಡಿ....
 


ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ರಾಜ ರಾಣಿ' ಖ್ಯಾತಿಯ ನಟ ತಾರಕ್‌ ಪೊನ್ನಪ್ಪ ಮತ್ತು ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

Tap to resize

Latest Videos

ಮೂಲತಃ ಕೊಡಗಿನವರಾದ ತಾರಕ್‌ ಗುರು-ಹಿರಿಯರ ಸಮ್ಮುಖದಲ್ಲಿ ಕೊಡಗು ಸಾಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ನವ ಜೋಡಿಗಳು ಕೆಂಪು-ಬಿಳಿ ಡಿಸೈನರ್‌ ವಸ್ತ್ರದಲ್ಲಿ ಕಂಗೊಳಿಸುತ್ತಿದ್ದಾರೆ. ರಾಧಿಕಾ ಅವರು ಹಿನ್ನೆಲೆ  ಮಾಹಿತಿ ತಿಳಿದು ಬಂದಿಲ್ಲ. 

ಬಿಗ್‌ ಬಾಸ್‌‌ನಿಂದ ಹೊರ ಬಂದ ಚಂದನಾ ತೆಗೆದುಕೊಂಡ ದೊಡ್ಡ ನಿರ್ಧಾರವಿದು!

ತಾರಕ್‌ ಕಿರುತೆರೆಯಲ್ಲಿ ಮಾತ್ರವಲ್ಲದೆ ಬೆಳ್ಳೆತೆರೆಯಲ್ಲೂ  ಮಿಂಚಿದ್ದಾರೆ. ಶರಣ್‌ ಅಭಿನಯದ 'ಅಧ್ಯಕ್ಷ ಇನ್‌ ಅಮೇರಿಕ' ಚಿತ್ರದಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ  'ಕೆಜಿಎಫ್‌ ಚಾಪ್ಟರ್ 1'ರಲ್ಲಿಯೂ ನಟಿಸಿದ್ದಾರೆ.  ಇನ್ನು ವಿಶೇಷ ಪಾತ್ರದಲ್ಲಿ ಆರೋಹಿ ನಾರಾಯಣ್‌ಗೆ ಜೋಡಿಯಾಗಿ '6 ಟು 6' ಚಿತ್ರದಲ್ಲಿ ಮಿಂಚಿದ್ದಾರೆ. 

click me!