
ಇಂದು ಬೆಂಗಳೂರಿನಲ್ಲಿ ಸರಳವಾಗಿ ಧಾರಾವಾಹಿ ಮುಹೂರ್ತ ನಡೆಯಲಿದ್ದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.
ಪ್ರಮುಖ ಪಾತ್ರದಲ್ಲಿ ಮಾಳವಿಕಾ ಅವಿನಾಶ್, ನಿರಂಜನ್ ದೇಶಪಾಂಡೆ, ಪ್ರಸಿದ್ಧ ಗಾಯಕ ವಿದ್ಯಾಭೂಷಣರ ಪುತ್ರಿ ಮೇಧಾ, ವೀಣಾ ಸುಂದರ್, ಮೇಘಾ ನಾಡಿಗೇರ್ ಅಭಿನಯಿಸಲಿದ್ದಾರೆ. ಎಲ್ಲಿ ಸಂಕಟ ಇರುತ್ತದೋ ಅದನ್ನು ಪರಿಹರಿಸಲು ಎಂದಿನಂತೆ ಸಿಎಸ್‌ಪಿ ಪಾತ್ರದಲ್ಲಿ ಟಿಎನ್ ಸೀತಾರಾಮ್ ಇರುತ್ತಾರೆ.
ಈಗಾಗಲೇ ಕವಿ ಎಚ್‌ಎಸ್ ವೆಂಕಟೇಶಮೂರ್ತಿ ಟೈಟಲ್ ಸಾಂಗ್ ಬರೆದಿದ್ದು, ಪ್ರವೀಣ್ ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯಪ್ರಕಾಶ್ ಹಾಡಲಿದ್ದು, ಶೀಘ್ರದಲ್ಲೇ ರೆಕಾರ್ಡಿಂಗ್ ನಡೆಯಲಿದೆ.
ಈ ಕುರಿತು ನಿರ್ದೇಶಕ ಟಿಎನ್ ಸೀತಾರಾಮ್, ‘ಈ ಸಲ ಮತ್ತೊಂದು ವಿಭಿನ್ನವಾದ ಕತೆ ಇದೆ. ಸದ್ಯ ಪೈಲೆಟ್ ಎಪಿಸೋಡ್ ಚಿತ್ರೀಕರಣ ಮಾಡುತ್ತಿದ್ದೇವೆ. ವಾಹಿನಿಯವರು ಒಪ್ಪಿಗೆ ಕೊಟ್ಟಮೇಲೆ ಒಂದೆರಡು ತಿಂಗಳ ನಂತರ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣ ಶುರು ಮಾಡಲಿದ್ದೇವೆ. ಭೂಮಿಕಾ ತಂಡ ಒಂದು ವರ್ಷ ಐದು ತಿಂಗಳ ನಂತರ ಮತ್ತೆ ಧಾರಾವಾಹಿ ಜಗತ್ತಿಗೆ ಪ್ರವೇಶ ಮಾಡುತ್ತಿದೆ’ ಎನ್ನುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.