
ಹೆಣವಾದ ರಾಮಾಚಾರಿ (Ramachari). ಸದ್ಯ ಕಲರ್ಸ್ ಕನ್ನಡ (Colors Kannada)ದಲ್ಲಿ ಪ್ರಸಾರ ಆಗ್ತಿರುವ ರಾಮಾಚಾರಿ ಸೀರಿಯಲ್ ನಲ್ಲಿ ಓಡ್ತಿರೋ ವಿಷ್ಯ. ಮಾನ್ಯತಾ ಹಾಗೂ ಸಕ್ಸೇನಾ ಪ್ಲಾನ್ ವರ್ಕ್ ಆಗಿದೆ. ರಾಜಿಯನ್ನು ಸಂಪೂರ್ಣವಾಗಿ ನಂಬಿ, ಆಕೆ ಗಂಡನ ಹತ್ಯೆ ಮಾಡಿದೋರಿಗೆ ಬುದ್ದಿ ಕಲಿಸಲು ಹೋದ ರಾಮಾಚಾರಿ ಹೆಣವಾಗಿ ಬೀದಿಯಲ್ಲಿ ಬಿದ್ದಿದ್ದಾನೆ. ವಿಷ್ಯ ಮನೆಯವರಿಗೆಲ್ಲ ಗೊತ್ತು. ಆದ್ರೆ ಗರ್ಭಿಣಿ ಚಾರುಗೆ ತಿಳಿದಿಲ್ಲ. ಸೀರಿಯಲ್ ನೋಡ್ತಾ ನೋಡ್ತಾ ವೀಕ್ಷಕರಿಗೆ ದೊಡ್ಡ ಅನುಮಾನ ಶುರುವಾಗಿದೆ. ಸತ್ತು ಮಲಗಿರೋದು ರಾಮಾಚಾರಿಯೇ ಅಲ್ಲ ಅಂತ ವೀಕ್ಷಕರು ಹೇಳ್ತಿದ್ದಾರೆ.
ರಾತ್ರಿ ಹತ್ತು ಗಂಟೆಗೆ ಪ್ರಸಾರ ಆಗುವ ರಾಮಾಚಾರಿ ಸೀರಿಯಲ್ ಮುಗಿಯುತ್ತೆ ಎನ್ನುವ ಸುದ್ದಿ ಇದೆ. ಇದ್ರ ಮಧ್ಯೆ ರಾಮಾಚಾರಿ ಪಾತ್ರವನ್ನೇ ಮುಗಿಸಿ ನಿರ್ದೇಶಕರು ಕಥೆಗೆ ಹೊಸ ಟ್ವಿಸ್ಟ್ ನೀಡ್ತಿದ್ದಾರೆ. ಮಗಳು ಚಾರು ತನಗೆ ಬೇಕು ಎನ್ನುವ ಹಠದಲ್ಲಿ ಮಾನ್ಯತಾ ಸರ್ವನಾಶಕ್ಕೆ ಸಿದ್ಧವಾಗಿದ್ದಾಳೆ. ಹಿಂದೆ ತನ್ನ ಶತ್ರುವಾಗಿದ್ದ ಸಕ್ಸೇನಾ ಜೊತೆ ಕೈ ಜೋಡಿಸಿ ರಾಮಾಚಾರಿ ಹತ್ಯೆಗೆ ಪ್ಲಾನ್ ಮಾಡಿದ್ದಳು. ಇದಕ್ಕೆ ಕುಮ್ಮಕ್ಕು ನೀಡಿದ್ದು, ಕೃಷ್ಣನ ಹೆಂಡ್ತಿ ರುಕ್ಮಿಣಿ.
ರಾಜಿ ಎನ್ನುವ ಮಹಿಳೆಯನ್ನು ರಾಮಾಚಾರಿ ಮನೆಗೆ ಕಳುಹಿಸಿ, ಸುಳ್ಳು ಕಥೆ ಕಟ್ಟಿ, ರಾಮಾಚಾರಿಯನ್ನು ತಾನು ಹೇಳಿದ ಜಾಗಕ್ಕೆ ಕರೆಯಿಸಿಕೊಂಡಿದ್ದ ಸಕ್ಸೇನಾ. ಆರಂಭದಿಂದಲೂ ಮಾನ್ಯತಾಗೆ ಮೋಸ ಮಾಡ್ತಾನೇ ಬಂದಿರುವ ಸಕ್ಸೇನಾ ಅಲ್ಲೂ ರಕ್ತದ ಕಲೆ ತನ್ನ ಕೈಗೆ ಅಂಟದಂತೆ ನೋಡ್ಕೊಂಡಿದ್ದಾನೆ. ನಿಮ್ಮ ಕಣ್ಣ ಮುಂದೆ ರಾಮಾಚಾರಿ ಸಾಯ್ತಾನೆ ಎನ್ನುತ್ತಲೇ ರುಕ್ಮಿಣಿಗೆ ರಾಮಾಚಾರಿ ಸಾಯ್ಸೋ ಅವಕಾಶ ನೀಡಿದ್ದ. ಸೇಡು ತೀರಿಸಿಕೊಳ್ಳುವ ಗುಂಗಿನಲ್ಲಿ ರಾಮಾಚಾರಿಗೆ ರುಕ್ಮಿಣಿ ಚಾಕು ಇರಿದಿದ್ದಾಳೆ. ರಾಮಾಚಾರಿ ಬಾಯಿಗೆ ಬಟ್ಟೆ ಕಟ್ಟಲಾಗಿತ್ತು. ರುಕ್ಮಿಣಿ, ಮಾನ್ಯತಾ ತಮ್ಮ ದ್ವೇಷ ಕಾರಿದ್ರೆ ಹೊರತೂ ರಾಮಾಚಾರಿಗೆ ಮಾತನಾಡುವ ಅವಕಾಶ ನೀಡಿರಲಿಲ್ಲ. ರಾಮಾಚಾರಿಯನ್ನು ಕೊಲೆ ಮಾಡಿ, ಆಕ್ಸಿಡೆಂಟ್ ಎನ್ನುವ ರೀತಿಯಲ್ಲಿ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ರು. ಅದನ್ನು ನೋಡಿದ ಆಪ್ತರೊಬ್ಬರು, ಮುರಾರರಿಗೆ ವಿಷ್ಯ ಮುಟ್ಟಿಸಿದ್ರು. ಮುರಾರಿ, ರಾಮಾಚಾರಿ ಹೆಣ ನೋಡಿ ಗೋಳಾಡಿದ್ದಾನೆ. ಅಮ್ಮ – ಅಜ್ಜಿ ಮನೆಯಲ್ಲಿ ಊಟ- ನೀರು ಬಿಟ್ಟು ಕುಳಿತಿದ್ದಾರೆ. ಆದ್ರೆ ಇದ್ಯಾವುದರ ಪರಿವೆಯೂ ಇಲ್ಲದೆ ತಲೆ ತುಂಬಾ ಹೂ ಮುಡಿದು, ಕೈ ತುಂಬ ಬಳೆ ಹಾಕಿ, ರಾಮಾಚಾರಿಗೆ ಇಷ್ಟವಾದ ಸೀರೆಯುಟ್ಟ ಚಾರು, ಇಡೀ ದಿನ ರಾಮಾಚಾರಿಗೆ ಕಾದಿದ್ದಾಳೆ. ರಾಮಾಚಾರಿ ಬರ್ತ್ ಡೇ ಮುಗಿದ್ರೂ ಮನೆಗೆ ಬರ್ಲಿಲ್ಲ ಎನ್ನುವ ನೋವಿನಲ್ಲೇ ನಿದ್ರೆಗೆ ಜಾರಿದ್ಲು.
ಈಗ ರಾಮಾಚಾರಿ ಹೆಣ ಮನೆಗೆ ಬಂದಿದೆ. ಮನೆಯವರೆಲ್ಲ ಕಣ್ಣೀರಿಡ್ತಿದ್ದಾರೆ. ಆರಂಭದಲ್ಲಿ ಏನೂ ಅರ್ಥವಾಗದ ಚಾರುಗೆ ರುಕ್ಮಿಣಿ ವಿಷ್ಯ ಹೇಳಿದ ಮೇಲೆ ಗೊತ್ತಾಗಿದೆ. ರಾಮಾಚಾರಿ ಹೆಣದ ಮುಂದೆ ಚಾರು ಆಕ್ರಂದನ ಮುಗಿಲು ಮುಟ್ಟಿದೆ. ಆದ್ರೆ ಈ ಪ್ರೋಮೋ ನೋಡಿದ ವೀಕ್ಷಕರು ಮಾತ್ರ ಇದು ರಾಮಾಚಾರಿ ಹೆಣ ಅನ್ನೋದನ್ನು ನಂಬಲು ಸಿದ್ದ ಇಲ್ಲ.
ಹುಟ್ಟು ಹಬ್ಬದ ದಿನ ರಾಮಾಚಾರಿ ಹತ್ಯೆ ಆಗಿದೆ. ಅದೇ ದಿನ ರಾಮಾಚಾರಿ ಸಹೋದರ ಕೃಷ್ಣ ಕೂಡ ಮನೆಗೆ ಬಂದಿದ್ದ.ಇಬ್ಬರೂ ಒಂದೇ ರೀತಿಯ ಬಟ್ಟೆ ಧರಿಸಿ ಹೊರಗೆ ಹೋಗಿದ್ರು. ಹಾಗಾಗಿ ಇಲ್ಲಿ ಸತ್ತಿದ್ದು ರಾಮಾಚಾರಿ ಅಲ್ಲ, ಅದು ಕೃಷ್ಣ ಎಂಬುದು ವೀಕ್ಷಕರ ವಾದ. ರುಕ್ಮಿಣಿಯೇ ಕೃಷ್ಣನ ಹತ್ಯೆ ಮಾಡಿದ್ದಾಳೆ. ಅಂತ ಕಮೆಂಟ್ ಮಾಡ್ತಿದ್ದಾರೆ. ಮತ್ತೆ ಕೆಲವರಿಗೆ ಈ ಧಾರಾವಾಹಿ ಮುಗಿಸಿದ್ರೆ ಸಾಕಾಗಿದೆ. ನಾಲ್ಕು ವರ್ಷದಿಂದ ಎಳೆಯುತ್ತಿರೋ ಈ ಧಾರವಾಹಿಗೆ ಸುಖಾಂತ್ಯ ನೀಡೋ ಬದಲು ಇಂಥ ಮುಕ್ತಾಯ ಬೇಕಾಗಿರಲಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.