
ರಾಮಾಚಾರಿ ಧಾರಾವಾಹಿಯಲ್ಲಿ ನಮ್ಮ ಮನೆಗೆ ಮಗು ಬರುತ್ತದೆ ಅಂತ ರಾಮಾಚಾರಿ, ಚಾರುಲತಾ ಕಾತರದಿಂದ ಕಾದು ಕುಳಿತಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಈ ಜೋಡಿ ಈಗ ಹುಟ್ಟದೇ ಇರೋ ಮಗುವನ್ನು ಸಾಯಿಸೋ ಯೋಚನೆ ಮಾಡಿದ್ದಾರೆ. ಹಾಗಾದರೆ ರಾಮಾಚಾರಿ ಮಗು ಪ್ರಪಂಚಕ್ಕೆ ಬರೋ ಮುನ್ನವೇ ಸತ್ತು ಹೋಗತ್ತಾ?
ಚಾರುಲತಾ-ರಾಮಾಚಾರಿ ದೂರ ಆಗ್ತಾರಾ?
ಚಾರುಲತಾ ತಾಯಿ ಮಾನ್ಯತಾ ದುಷ್ಟೆ. ತನ್ನ ಮಗಳು ತನ್ನ ಜೊತೆ ಇರಬೇಕು, ರಾಮಾಚಾರಿಯಿಂದ ದೂರ ಇರಬೇಕು ಅಂತ ಅವಳು ಏನೇನೋ ಕುತಂತ್ರ ಮಾಡಿದ್ದಳು. ತನ್ನ ಉದ್ದೇಶ ಸಾಧಿಸಲು ಅವಳು ಈಗ ತನ್ನ ಗಂಡನನ್ನು ಕೂಡ ಜೈಲಿಗೆ ಕಳಿಸಿದ್ದಾಳೆ. ತಾವಿಬ್ಬರೂ ಜೊತೆಗೆ ಇರೋದಿಕ್ಕೆ ಉಳಿದವರಿಗೆ ಸಮಸ್ಯೆ ಅಂತ ಚಾರು-ರಾಮಾಚಾರಿ ದೂರ ಆಗೋಕೆ ನಿರ್ಧಾರ ಮಾಡಿದ್ದಾಳೆ.
ಮಗು ಸತ್ತು ಹೋಗತ್ತಾ?
“ನನ್ನ ಮಗಳು ಚಾರುಲತಾ, ರಾಮಾಚಾರಿ ನನ್ನ ಅಳಿಯನಲ್ಲ. ಇವರಿಬ್ಬರು ದೂರ ಆಗ್ತಿರೋದು ನಿಜಕ್ಕೂ ಖುಷಿಯ ವಿಷಯ. ಇಷ್ಟುದಿನ ಕೆಟ್ಟ ದಾರಿ ಹಿಡಿದಿದ್ದ ನನ್ನ ಮಗಳು ಈಗ ಸರಿ ದಾರಿಗೆ ಬಂದಿದ್ದಾಳೆ. ನನ್ ಮಗಳಿಗೆ ಬೇಡದ ಮಗು ನನಗೂ ಬೇಡ. ಇದರಲ್ಲಿ ಅವಳಿಗೆ ಬುದ್ಧಿ ಹೇಳೋದೂ ಏನೂ ಇಲ್ಲ” ಎಂದು ಡಾಕ್ಟರ್ ಬಳಿ ಮಾನ್ಯತಾ ಹೇಳಿದ್ದಾಳೆ. ಡಾಕ್ಟರ್ ಕೂಡ ಮಗು ತೆಗೆಯಲು ರೆಡಿ ಆಗಿದ್ದಾರೆ. ಹಾಗಾದರೆ ಮಗು ಸತ್ತು ಹೋಗತ್ತಾ?
ಮಗು ಆರೋಗ್ಯವಾಗಿ ಬೆಳೆಯಬೇಕು!
ನಮಗೆ ಏನಾದರೂ ಓಕೆ, ನಮ್ಮ ಮಗು ಚೆನ್ನಾಗಿರಬೇಕು, ಮಗುಗೆ ದೇವರ ಹಾರೈಕೆ ಇದ್ದರೆ ಸಾಕು ಅಂತ ಈ ಜೋಡಿ ಸಾವಿರಾರು ಕನಸು ಕಂಡಿತ್ತು. ಈ ಕನಸೆಲ್ಲವೂ ಈಗ ನುಚ್ಚು ನೂರಾಗುವ ಸಮಯ ಬಂದಿದೆ. “ರಾಮಾಚಾರಿ ನನ್ನ ಜೊತೆಗೆ ಇದ್ದರೆ, ರಾಮಾಚಾರಿ ಮನೆಯವರು ನನ್ನ ಜೊತೆಗೆ ಇದ್ದರೆ ಅಷ್ಟೇ ಸಾಕು, ಅದೇ ನನಗೆ ಆಸ್ತಿ” ಎಂದು ಚಾರು ಸದಾ ಹೇಳುತ್ತಿದ್ದಳು. ತನ್ನ ಮಗು ಚೆನ್ನಾಗಿರಬೇಕು, ತನ್ನ ಮಗುಗೆ ಖುಷಿ, ಸಂತೋಷ ಇರಬೇಕು, ಒಳ್ಳೆಯ ಗುಣಗಳು ಬೆಳೆಯಬೇಕು ಎಂದು ಚಾರುಗೆ ರಾಮಾಚಾರಿ ನಿತ್ಯವೂ ರಾಮಾಯಣ, ಮಹಾಭಾರತದ ಕಥೆ ಹೇಳುತ್ತಿದ್ದನು.
ರಾಮಾಚಾರಿಗೆ ಗೀತೋಪದೇಶ ಮಾಡಿದ ಮಗು!
ಕೊನೆಗೂ ರಾಮಾಚಾರಿಗೆ ತನ್ನ ಮಗು ಬೇಕು ಅಂತ ಅನಿಸಿದೆ. ನನ್ನ ಮಗು ನಮ್ಮಿಬ್ಬರ ಪ್ರೀತಿಯ ಸಂಕೇತ, ನನ್ನ ಮಗು ಸಾಯಬಾರದು ಅಂತ ಕೊನೆಗೂ ರಾಮಾಚಾರಿ ಗರ್ಭಪಾತ ಮಾಡಿಸೋದನ್ನು ನಿಲ್ಲಿಸಿದ್ದಾನೆ. ಚಾರುಲತಾ ಕಾಲು ಹಿಡಿದು ರಾಮಾಚಾರಿ ಕ್ಷಮೆ ಕೇಳಿದ್ದಾನೆ. ನಾನೇ ದುಡುಕಿ ನಿರ್ಧಾರ ತಗೊಂಡೆ, ಕ್ಷಮಿಸಿ ಅಂತ ರಾಮಾಚಾರಿ ತನ್ನ ತಪ್ಪನ್ನು ತಿದ್ದುಕೊಂಡಿದ್ದಾನೆ. “ಶ್ರೀಕೃಷ್ಣನ ಬಳಿ ಅರ್ಜುನ ಕೂಡ ಯುದ್ಧ ಬೇಡ ಅಂತ ಹೇಳಿದ್ದಾನೆ, ನಮ್ಮ ಜೀವನದಲ್ಲಿ ನಮ್ಮ ಮಗು ಗೀತೋಪದೇಶ ಮಾಡಿದೆ. ನಾವು ನಮ್ಮ ಮಾವನನ್ನು ಬಿಡಿಸಬೇಕು, ಅವರಿಗಾದ ಅನ್ಯಾಯಕ್ಕೆ ಉತ್ತರ ಕೊಡಬೇಕು, ಅದೇ ನಮ್ಮ ಗುರಿಯಾಗಬೇಕು” ಎಂದು ರಾಮಾಚಾರಿ ಫಿಕ್ಸ್ ಆಗಿದ್ದಾನೆ.
ಕಥೆ ಏನು?
ರಾಮಾಚಾರಿ ಪೌರೋಹಿತ್ಯ ಮಾಡುತ್ತಾನೆ. ಜೊತೆಗೆ ಕಂಪೆನಿಯೊಂದರಲ್ಲಿ ಕೆಲಸ ಕೂಡ ಮಾಡುತ್ತಾನೆ. ಇವನಿಗೆ ಚಾರುಲತಾ ಎನ್ನುವ ಹಣದ ಮೋಹ ಇರೋ ದುರಹಂಕಾರಿ ಹುಡುಗಿ ಪರಿಚಯ ಆಗುವುದು. ಇವರಿಬ್ಬರು ಆರಂಭದಲ್ಲಿ ದ್ವೇಷಿಸುತ್ತಾರೆ, ಆಮೇಲೆ ಚಾರುಗೆ ರಾಮಾಚಾರಿ ಮೇಲೆ ಲವ್ ಆಗುವುದು. ಈ ಪ್ರೀತಿ ಇಟ್ಟುಕೊಂಡು ಚಾರು, ರಾಮಾಚಾರಿಯನ್ನು ಮದುವೆ ಆಗ್ತಾನೆ. ಆಮೇಲೆ ಇವರಿಬ್ಬರು ಪರಸ್ಪರ ಪ್ರೀತಿಯಲ್ಲಿ ಬೀಳ್ತಾರೆ.
ಪಾತ್ರಧಾರಿಗಳು
ರಾಮಾಚಾರಿ- ರಿತ್ವಿಕ್ ಕೃಪಾಕರ್
ಚಾರುಲತಾ-ಮೌನ ಗುಡ್ಡೇಮನೆ
ಮಾನ್ಯತಾ- ಝಾನ್ಸಿ ಕಾವೇರಪ್ಪ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.