'ರಾಜ ರಾಣಿ' ರಿಯಾಲಿಟಿ ಶೋನಲ್ಲಿ ನಿವೇದಿತಾ-ಚಂದನ್, ನೇಹಾ-ಚಂದು

By Suvarna News  |  First Published Jun 16, 2021, 12:08 PM IST

ಹೊಸ ರಿಯಾಲಿಟಿ ಶೋನಲ್ಲಿ ರಿಯಲ್ ಕಪಲ್ಸ್. ಚಂದನ್ ಶೆಟ್ಟಿ ವಿತ್ ನಿವಿ, ನೇಹಾ ವಿತ್ ಚಂದು....


ವೀಕೆಂಡ್‌ನಲ್ಲಿ ವೀಕ್ಷಕರಿಗೆ ಫುಲ್ ಮಸ್ತಿ ನೀಡಲು ಕರ್ಲಸ್ ಕನ್ನಡ ಹೊಸ ರಿಯಾಲಿಟಿ ಶೋ ಆರಂಭಿಸುತ್ತಿದೆ. ಡ್ಯಾನ್ಸ್, ಮ್ಯೂಸಿಕ್  ಎಲ್ಲಾ ಒಂದೇ ಕಾನ್ಸೆಪ್ಟ್ ಆಗುತ್ತಿದೆ ಎಂದು ರಿಯಲ್ ಸೆಲೆಬ್ರಿಟಿ ಕಪಲ್‌ಗಳನ್ನು ಆನ್‌ಸ್ಕ್ರೀನ್ ತರುವ ಪ್ರಯತ್ನ ಮಾಡಿದ್ದಾರೆ. ಅದುವೇ 'ರಾಜಾ ರಾಣಿ'...

ಹುಟ್ಟೂರಿನಲ್ಲಿ ರೈತನಾಗುತ್ತಿರುವ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಲಾಗಲಿ! 

Tap to resize

Latest Videos

ಹೌದು! ಈಗಾಗಲೇ ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾ ಗೌಡ ಮತ್ತು ಪತಿ ಚಂದು ಪ್ರೋಮೋ ಬಿಡುಗಡೆ ಮಾಡಿದ್ದಾರೆ. ಜೊತೆಗೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ  ಪ್ರೋಮೋ ಕೂಡ ವೈರಲ್ ಆಗುತ್ತಿದೆ. ಪ್ರೋಮೋದಲ್ಲಿಯೇ ಗಂಡ-ಹೆಂಡತಿ ಎಷ್ಟು ಜಗಳ, ಪ್ರೀತಿ ಮಾಡುತ್ತಾರೆ ಅಂದ್ಮೇಲೆ ರಿಯಲ್ ಆಗಿ ಹೇಗೆ? ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

 

'ಪತಿ ಚಂದನ್ ಜೊತೆ ಚಿತ್ರೀಕರಣ ಮಾಡಲು ಎಕ್ಸೈಟ್ ಆಗಿರುವೆ, ಅವರು ಆ್ಯಕ್ಟಿಂಗ್ ಬ್ಯಾಕ್‌ಗ್ರೌಂಡ್‌ನಿಂದ ಬಂದವರಲ್ಲ. ಅವರಿಗೆ ಎಲ್ಲವೂ ಹೊಸದು.  ಪ್ರೋಮೋ ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ.  ನಮ್ಮಂತೆ ಅನೇಕ ಕಪಲ್ಸ್ ಇವೆ. ಚಾನೆಲ್‌ ಒಂದೊಂದಾಗಿ ಪ್ರತಿಯೊಬ್ಬರ ಕಥೆಯನ್ನೂ ರಿವೀಲ್ ಮಾಡುತ್ತದೆ. ಇದರಲ್ಲಿ ಮೆಂಟಲ್ ಹಾಗೂ ಫಿಸಿಕಲ್ ಟಾಸ್ಕ್‌ ಇರಲಿವೆ. ಕೊರೋನಾ ಪ್ಯಾಂಡಮಿಕ್ ಕಡಿಮೆ ಆದ ಮೇಲೆ  ಚಿತ್ರೀಕರಣ ಆರಂಭವಾಗುತ್ತದೆ,' ಎಂದು ನೇಹಾ ಹೇಳಿದ್ದಾರೆ.

ಎಲ್ಲೆಡೆ ಪ್ರೋಮೋ ಅಪ್ಲೋಡ್ ಆಗುತ್ತಿದ್ದಂತೆ ನಿವೇದಿತಾ-ಚಂದನ್ ತಮ್ಮ ಇನ್‌ಸ್ಟಾಗ್ರಾಮ್ ರೀಲ್ಸ್ ಶೇರ್ ಮಾಡಿಕೊಂಡು, ಹೊಸ ಶೋ ಬಗ್ಗೆ ಮಾಹಿತಿ ನೀಡಿದ್ದಾರೆ.

 

click me!