ವೇದಿಕೆ ಮೇಲೆ ವೀಕ್ಷಕರನ್ನು ನಗಿಸಿ, ಅಳಿಸುವ ಏಕೈಕಾ 'ರಾಜಾ ರಾಣಿ' ಜೋಡಿ ಪವನ್ ವೇಣುಗೋಪಾಲ್!

By Suvarna News  |  First Published Oct 11, 2021, 2:01 PM IST

ಪವನ್ ಜೋಡಿ ಟಾಸ್ಕ್‌ ಮಾಡ್ತಿದ್ದಾರೆ ಅಂದ್ರೆ ಖಂಡಿತಾ ಮನೋರಂಜನೆ ಹೆಚ್ಚಾಗುತ್ತದೆ. ಮಣಿಪುರಿ ಬೆಡಗಿಯ ಹೃದಯ ಕದ್ದ ಸ್ಟ್ಯಾಂಡಪ್‌ (Standup Comedian) ಕಾಮಿಡಿಯನ್...  
 


ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ (Raja Rani) ರಿಯಾಲಿಟಿ ಶೋನಲ್ಲಿ (Reality Show) ಒಂದು ಜೋಡಿ ಮಾತ್ರ ಸಖತ್ ಫೇಮಸ್ ಆಗಿದೆ. ವೇದಿಕೆ ಮೇಲೆ ಬಂದರೆ, ಒಂದು ಹೊಟ್ಟೆ ಹುಣ್ಣಾಗುವಷ್ಠು ನಗಿಸುತ್ತಾರೆ. ಇಲ್ಲವಾದರೆ ಎಲ್ಲರನ್ನೂ ಭಾವುಕರನಾಗಿ ಮಾತಾನಾಡುರೆ. ಭಾಷೆ ಗೊತ್ತಿಲ್ಲದಿದ್ದರೂ ಕಷ್ಟ ಪಟ್ಟು ಕನ್ನಡದಲ್ಲಿಯೇ ಮಾತನಾಡಿ ತಮ್ಮ ಭಾವನೆ ವ್ಯಕ್ತ ಪಡಿಸುತ್ತಿರುವ ಸುಮನ್ (Suman) ನಿಜಕ್ಕೂ ಅದೆಷ್ಟೋ ಕನ್ನಡಿಗರ ಪ್ರೀತಿ ಪಡೆದುಕೊಂಡಿದ್ದಾರೆ. 

ಕನ್ನಡ ಚಿತ್ರರಂಗದ ಹಿರಿಯ ದಿವಂಗತ ನಟ ವೇಣುಗೋಪಾಲ್ (Venugopal) ಅವರ ಪುತ್ರ ಪವನ್‌ ಮತ್ತು ಅವರ ಪತ್ನಿ ಸುಮನ್ ರಾಜಾ ರಾಣಿ ವೇದಿಕೆಯಲ್ಲಿರುವ ಸೂಪರ್ ಜೋಡಿ. ಇವರಿಬ್ಬರ ಕಥೆ ಕೇಳಿ ಕನ್ಫ್ಯೂ ಆದವರು ಒಬ್ರಾ? ಇಬ್ರಾ? ಬೆಂಗಳೂರಿನಲ್ಲಿ ಹೊರ ಹೊಲಯದಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆರ್ಟ್‌ ಆಫ್‌ ಲೀವಿಂಗ್‌ನಲ್ಲಿ (Art of Living) ಯೋಗ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಣಿಪುರ (Manipura) ಮೂಲದ ಸುಮನ್ ಮತ್ತು ಬೆಂಗಳೂರು ಐಟಿ ಹುಡುಗ ಪವನ್ (Pavan Venugopal) ಇಬ್ಬರೂ ಪ್ರೀತಿಸುತ್ತಾರೆ. ಸುಮನ್ ಪೋಷಕರು ಇದಕ್ಕೆ ಒಪ್ಪದ ಕಾರಣ ಇಬ್ಬರೂ ರವಿಶಂಕರ್‌ ಅವರ ಆಶ್ರಮದಲ್ಲಿಯೇ ಮದುವೆ ಆಗಬೇಕು ಎಂದು ನಿರ್ಧರಿಸುತ್ತಾರೆ. 

ವೈಯಕ್ತಿಕ ಕಾರಣದಿಂದ 'ರಾಜಾ ರಾಣಿ' ಶೋನಿಂದ ಹೊರ ನಡೆದ ಸೆಲೆಬ್ರಿಟಿ ಕಪಲ್ಸ್!

Tap to resize

Latest Videos

ಪೋಷಕರನ್ನು ಬಿಟ್ಟು ಸುಮನ್‌ ಒಬ್ಬರೇ ಬೆಂಗಳೂರಿಗೆ ಬರುತ್ತಾರೆ. ಮದುವೆಯಲ್ಲಿ ಅವರ ಕುಟುಂಬದವರು ಅಂತ ಯಾರೂ ಇರದ ಕಾರಣ ಆಶ್ರಮಕ್ಕೆ ಆಗಮಿಸಿದ ವಿದೇಶಿಯರೇ ಗುರು ಹಿರಿಯ ಸ್ಥಾನದಲ್ಲಿ ನಿಂತು ಮದುವೆ ನಡೆಸಿಕೊಟ್ಟಿದ್ದಾರೆ. ಪವನ್ ಮದುವೆ ಮಂಟಪಕ್ಕೆ ಆನೆ (Elephant) ಮೇಲೆ ಬಂದಿದ್ದಾರೆ.  ಪವನ್ ಕುಟುಂಬದವರು ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಎಲ್ಲವೂ ಬಜೆಟ್ ಪ್ಲಾನ್ ಮಾಡುತ್ತಾರಂತೆ.

ಸುಮನ್ ಸೀಮಂತದ (Baby shower) ಸಮಯದಲ್ಲಿ ಹಣವಿಲ್ಲದ ಕಾರಣ ಸಿಂಪಲ್ ಆಗಿ ಸಣ್ಣ ಪುಟ್ಟ ಹಣ್ಣು ಹಂಪಲು ತಂದು ಸೀಮಂತ ಮಾಡಿದ್ದಾರೆ. ಆದರೆ ಅಂದು ಆಕಸ್ಮಿಕವಾಗಿ ಸುಮನ್‌ಗೆ ಮದುವೆ ದಿನ ದಾರೆ ಮಾಡಿಕೊಟ್ಟ ದಂಪತಿ ಇವರ ಮನೆಗೆ ಭೇಟಿ ನೀಡಿದ್ದಾರೆ. ಸೀಮಂತವನ್ನು ಕಂಡು ನಮ್ಮ ಮಗಳಿಗೆ ಇಷ್ಟು ಸರಳ ಬೇಡ ಎಂದು ಹೇಳಿ, ಅವರೇ ಎಲ್ಲಾ ಸಾಮಾಗ್ರಿಗಳನ್ನೂ ತಂದುಕೊಟ್ಟು ಅದ್ಧೂರಿ ಸೀಮಂತ ಮಾಡಿದರಂತೆ. 

ಮಾಲಾಶ್ರೀ ಆಯ್ತು ಈಗ ನಟಿ ಆರತಿ ಲುಕ್‌ನಲ್ಲಿ ಕಾಣಿಸಿಕೊಂಡ ನಿರೂಪಕಿ ಅನುಪಮಾ ಗೌಡ!

ಪತ್ನಿಗೆ ಸರ್ಪ್ರೈಸ್ ಗಿಫ್ಟ್ ಕೊಡಬೇಕು ಎಂದಿದ್ದ ಟಾಸ್ಕ್‌ನಲ್ಲಿ ಪವನ್ ತುಂಬಾನೇ ಯೋಚಿಸಿ ಒಂದು ಫೋಟೋ ಮಾಡಿಸಿದ್ದಾರೆ. ಗ್ರಾಫಿಕ್‌ ಡಿಸೈನರ್‌ (Graphic Designer) ಸಹಾಯದಿಂದ ಸುಮನ್ ಅವರ ಕುಟುಂಬದ ಜೊತೆಗಿರುವ ಫ್ಯಾಮಿಲಿ ಫೋಟೋ (Family Photo) ತಯಾರಿಸಿದ್ದಾರೆ. ಈ ಎಪಿಸೋಡ್ ವೀಕ್ಷಿಸಿದ ಪ್ರತಿಯೊಬ್ಬರೂ ಭಾವುಕರಾಗಿದ್ದು ಸುಳ್ಳಲ್ಲ. ಸುಮನ್ ಅವರು ಅಂಡರ್ ವೇಟ್ (Under Weight) ಇರುವ ಕಾರಣ ಪವನ್ ಅವರ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸುತ್ತಾರೆ. ಈ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸದಾ ಜೈ ಕಾರ ಕೂಗುತ್ತಾರೆ.

click me!