
ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟ ಅಭಿಷೇಕ್ ರಾಮ್‌ದಾಸ್ (Abhishek Ramdas) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಶೂಟ್, ಪರ್ಸನಲ್ ಲೈಫ್ ಮತ್ತು ಶೂಟಿಂಗ್ ಶೆಡ್ಯೂಲ್‌ಗಳ ಬಗ್ಗೆ ತಮ್ಮ ಫಾಲೋವರ್ಸ್ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ಈ ಸಲ ಒಬ್ಬ ಕಲಾವಿದನ ಬದುಕು ಹೇಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.
'ಆರಂಭದಲ್ಲಿ ಒಬ್ಬ ಆರ್ಟಿಸ್ಟ್ (Artist) ಕಷ್ಟ ಪಡುತ್ತಿರುವಾಗ ಆತನ ಜೀವನ ತುಂಬಾನೇ ಹೆಕ್ಟಿಕ್ (Hectic) ಆಗಿರುತ್ತದೆ. ಕುಟುಂಬ ಮತ್ತು ಸ್ನೇಹಿತರ ಜೊತೆ ಅದೆಷ್ಟೋ ಅಮೂಲ್ಯವಾದ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ವೈಯಕ್ತಿಕ ಜೀವನದಲ್ಲಿ ಏನೇ ಇರಬಹುದು ಮೇಕಪ್ ಧರಿಸಿದ ತಕ್ಷಣ ಆ ಖಿನ್ನತೆ, ಆತಂಕ, ಒತ್ತಡ ಎಲ್ಲವೂ ಮರೆತು ಆ ಪಾತ್ರಕ್ಕೆ ಪ್ರವೇಶಿಸಿ ನಿಮ್ಮನ್ನು ಮನೋರಂಜಿಸುತ್ತೇವೆ. ಕೆಲವೊಮ್ಮೆ ನಾವು ತುಂಬಾನೇ ಬ್ಯುಸಿಯಾಗಿದ್ದೀವಿ ಎಂದು ಹೇಳಿಕೊಳ್ಳುವುದಕ್ಕೆ, ಕೇಳಿಸಿಕೊಳ್ಳುವುದಕ್ಕೆ ಸೂಪರ್ ಆಗಿರುತ್ತದೆ ಆದರೆ ಈ ಬ್ಯುಸಿ ಜೀವನದಲ್ಲಿ ನಮ್ಮನ್ನ ನಾವು ಕಳೆದುಕೊಳ್ಳುತ್ತೇವೆ. ನಮ್ಮ ವೈಯಕ್ತಿಕ ಕೆಲಸ (Personal Life), ಹವ್ಯಾಸ ಮತ್ತು ಕೆಲವೊಂದು ಪ್ರಾಮುಖ್ಯತೆ ಪಡೆದುಕೊಂಡಿರುವ ವಿಚಾರಗಳ ಕಡೆ ಗಮನ ಹರಿಸಲು ಆಗುವುದಿಲ್ಲ.' ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ.
'ಕೆಲವೊಮ್ಮೆ ನಾವು 18 ಗಂಟೆಗಳ ಕಾಲ ಕೆಲಸ ಮಾಡುತ್ತೇವೆ. ನಮಗೆ ಗ್ರೂಮ್(Groom) ಅಥವಾ ಪ್ಯಾಂಪರ್ ಮಾಡಿಕೊಳ್ಳುವುದಕ್ಕೂ ಸಮಯ ಸಿಗುವುದಿಲ್ಲ. ಮಲಗುವುದಕ್ಕೆ ಸಮಯವೇ ಸಿಗುವುದಿಲ್ಲ. ಹೀಗಿದ್ದ ಮೇಲೆ ಹೇಗೆ ಫಿಟ್ನೆಸ್ ಮತ್ತು ಡಯಟ್ (Diet) ಫಾಲೋ ಮಾಡುವುದು? ಆದರೆ ಒಂದು ಮಾತು ನಿಜ ಏನೆಂದರೆ ಆ ದೇವರು ನಮ್ಮನ್ನು ನೋಡುತ್ತಿದ್ದಾನೆ ನಮ್ಮ ಪರಿಶ್ರಮಕ್ಕೆ ಖಂಡಿತ ಒಂದು ದಿನ ನಮಗೆ ರಿವಾರ್ಡ್ (Reward) ನೀಡುತ್ತಾನೆ' ಎಂದು ಬರೆದುಕೊಂಡಿದ್ದಾರೆ.
ಅಭಿಷೇಕ್ ಬರೆದುಕೊಂಡಿರುವ ಸಾಲುಗಳಿಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 'ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ. ಪ್ರತಿಯೊಬ್ಬ ಕಲಾವಿದರಿಗೂ ದೊಡ್ಡ ಸಲಾಮ್ ನಿಮ್ಮ ಪರಿಶ್ರಮ ನಾವು ಮೆಚ್ಚಬೇಕು' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿರುವ ಅಭಿಷೇಕ್ ಅವರು ಕೆಲವು ದಿನಗಳ ಹಿಂದೆ ನಟ ತಿಲಕ್ (Thilak) ಮತ್ತು ಶಿವಣ್ಣ ಗಿರೀಶ್ (Shivanna Girish) ಜೊತೆ ಸೆಲ್ಫಿ ಹಂಚಿಕೊಂಡು ಹೊಸ ಪ್ರಾಜೆಕ್ಟ್ ತಯಾರಿ ಶುರುವಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.