
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ರಾಜಾ ರಾಣಿ (Raja Rani 2) ಸೀಸನ್ 2 ರಿಯಾಲಿಟಿ ಶೋ ಆರಂಭವಾಗಿದೆ. 12 ಸ್ಪರ್ಧಿಗಳ ಪೈಕಿ ಬಿಗ್ ಬಾಸ್ ಧನರಾಜ್ ಕೂಡ ಒಬ್ಬರು. ಮ್ಯಾಚಿಂಗ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಲವ್ ಸಾಂಗ್‌ಗೆ ಹೆಜ್ಜೆ ಹಾಕಿದ ಈ ಜೋಡಿ ತಮ್ಮ ಲವ್ ಸ್ಟೋರಿ ಹೇಳೋಕೆ 2 ಎಪಿಸೋಡ್ ಬೇಕೆನ್ನುತ್ತಾರೆ. ಶಾರ್ಟ್ ಆಗಿ ಹೇಳುವುದಾದರೆ 10 ವರ್ಷ ಪ್ರೀತಿ, 10 ವರ್ಷ ಮದುವೆ...ಒಟ್ಟು 20 ವರ್ಷದ ಜರ್ನಿನ ಟೆಸ್ಟ್ ಮಾಡಿ ಎಂಜಾಯ್ ಮಾಡಲು ಶೋ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
'ನನ್ನ ಹೆಂಡತಿಗೆ ಸದ್ಯಕ್ಕೆ ನಾನೇ ಎಲ್ಲಾ. ಎರಡು ವರ್ಷಗಳ ಹಿಂದೆ ಅವರ ತಾಯಿ ತೀರಿಕೊಂಡರು. ಬಿಗ್ ಬಾಸ್ ಆದ್ಮೇಲೆ ನಾನು ಯಾಕೆ ಇಂಡಸ್ಟ್ರಿಗೆ ಬರೋಕೆ ಆಗಿಲ್ಲ ಅಂದ್ರೆ ಒಂದು ಹೆಣ್ಣಿಗೆ ಮಗು ಆದಾಗ ಅಕೆಗೆ ತವರು ಮನೆ ಎಷ್ಟು ಮುಖ್ಯ ಆಗುತ್ತೆ ಅಲ್ವಾ?. ಡೆಲಿವರಿ ಆದ್ಮೇಲೆ ಮೂರು ತಿಂಗಳು ಆದ್ಮೇಲೆ ನಾನು ಇಂಡಸ್ಟ್ರಿಗೆ ಬರಬಾರದು ಎಂದು ನಿರ್ಧಾರ ಮಾಡಿಕೊಂಡೆ. ಸಣ್ಣ ಬ್ಯುಸಿನೆಸ್ ಇದೆ ಮನೆಯಲ್ಲಿ ಸಣ್ಣ ಮಗು ಇದೆ. ಇವರಿಗೆ ತಾಯಿ ಇಲ್ಲದ ಕಾರಣ ಸ್ವಲ್ಪ ಜವಾಬ್ದಾರಿ ನಾನು ತೆಗೆದುಕೊಳ್ಳಬೇಕಿತ್ತು' ಎಂದು ಧನರಾಜ್ ಮಾತನಾಡಿದ್ದಾರೆ.
ನನ್ನನ್ನು ಯಾರು ಸಂಪರ್ಕ ಮಾಡೇ ಇಲ್ಲ; ರಾಜಾ ರಾಣಿ-2 ಬಗ್ಗೆ ನಿರೂಪಕಿ ಅನುಪಮಾ ಸ್ಪಷ್ಟನೆ
'ಆರಂಭದಲ್ಲಿ ಗಂಡಸರಿಗೆ ಮಗು ನೋಡಿಕೊಳ್ಳುವುದು ತುಂಬಾನೇ ಕಷ್ಟ. ಫಸ್ಟ್ ಮೂರು ತಿಂಗಳು ನಮಗೆ ತುಂಬಾ ಕಷ್ಟ ಆಯ್ತು. ರಾತ್ರಿ ನಿದ್ರೆ ಇಲ್ಲ ಪ್ರತಿ ಎರಡು ಗಂಟೆಗೆ ಫೀಡಿಂಗ್ ಮಾಡಬೇಕು ಆಗ ಮೆಂಟಲಿ ಧನು ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ. ಫಸ್ಟ್ ಮೂರು ತಿಂಗಳು ಡೈಪರ್ ಬದಲಾಯಿಸಿದ್ದು ಇವರೇ, 6 ತಿಂಗಳು ಬಾಣಂತನ ಮಾಡಿದ್ದು ಇವರೇ' ಎಂದು ಶಾಲಿನಿ ಹೇಳಿದ್ದಾರೆ.
'ನನ್ನ ಪತಿ ಧನು ಅವರಿಗೆ ಧನ್ಯವಾದಗಳನ್ನು ಹೇಳಬೇಕು ಅವರಿಲ್ಲದೆ ನಾನು ಯಾವ ಸಂದರ್ಭನೂ ಎದುರಿಸುವುದಕ್ಕೆ ಆಗುತ್ತಿರಲಿಲ್ಲ. ತಾಯಿ ಮಗಳಿಗೆ ಯಾವ ಸ್ಥಾನ ತುಂಬುತ್ತಾಳೆ ಅದಕ್ಕಿಂತ ಜಾಸ್ತಿ ನೀನು ತುಂಬಿರುವೆ. ಅಮ್ಮ ಇಲ್ಲ ಅಂತ ಫೀಲ್ ಆಗುತ್ತೆ ಆದರೆ ಧನು ನನಗೆ ಮೆಂಟಲ್ ಸಪೋರ್ಟ್ ತುಂಬಾ ಕೊಟ್ಟಿದ್ದಾರೆ. ಅಮ್ಮ ತೀರಿಕೊಂಡ 10 ದಿನಕ್ಕ ನಾನು ಗರ್ಭಿಣಿ ಅಂತ ತಿಳಿಯಿತ್ತು ಕಷ್ಟ ಆಯ್ತು ನಂಬೋಕೆ. ನನಗೆ ಮಗ ಆಗಿರುವುದು ಆದರೆ ಕೊನೆ ಕ್ಷಣದವರೆಗೂ ಹೆಣ್ಣು ಮಗು ಆಗುತ್ತೆ ಅಂತ ಅಂದುಕೊಂಡಿದ್ದೆ ಆದರೆ ಈಗಲೂ ನನ್ನ ಮಗನೇ ನನ್ನ ಅಪ್ಪ ಅಂತ ಈಗಲ್ಲೂ ನಂಬಿರುವೆ' ಎಂದಿದ್ದಾರೆ ಶಾಲಿನಿ.
ಪುತ್ರನಿಗೆ ಅಗಸ್ತ್ಯ ಎಂದು ನಾಮಕರಣ ಮಾಡಿದ ಬಿಗ್ ಬಾಸ್ ಧನ್‌ರಾಜ್!
ಶೋ ವೀಕ್ಷಿಸಿ ಸ್ವಿಟ್ಜರ್ಲ್ಯಾಂಡ್‌ಗೆ ಹನಿಮೂನ್ ಟಿಕೆಟ್ ಗೆಲ್ಲಿರಿ:
ಈ ಬಾರಿಯ ರಾಜ-ರಾಣಿ ಸೀಸನ್ 2ನಲ್ಲಿ ಕಾಮನ್ ಜೋಡಿಗಳಿಗೂ ಅವಕಾಶ ದೊರೆಯಲಿದ್ದು ವೀಕ್ಷಕರಿಗಾಗಿ ಒಂದು ಕಾಂಟೆಸ್ಟ್ ಏರ್ಪಡಿಸಲಾಗಿದೆ. ಈ ಕಾಂಟೆಸ್ಟ್‌ನಲ್ಲಿ ಗೆದ್ದ ಜೋಡಿಯು ಸ್ವಿಟ್ಜರ್ಲ್ಯಾಂಡ್‌ನಲ್ಲಿ ತಮ್ಮ ಎರಡನೇ ಹನಿಮೂನ್ ಅನ್ನು ಆಚರಿಸಿಕೊಳ್ಳಬಹುದು. ಸೀಸನ್ ಕೊನೆಯಲ್ಲಿ ಒಂದು ಜೋಡಿ ವಿಜಯಶಾಲಿಯಾಗುತ್ತದೆ. ಹೆಸರಾಂತ ನಟ ನಟಿಯರಾದ ಸೃಜನ್ ಲೋಕೇಶ್ ಹಾಗೂ ತಾರಾ ಈ ಶೋನ ತೀರ್ಪುಗಾರರಾಗಿರುತ್ತಾರೆ. ಈ ಬಾರಿ ಕಾರ್ಯಕ್ರಮವನ್ನ ನಡೆಸಿಕೊಡುವ ಜವಾಬ್ದಾರಿ ಜಾಹ್ನವಿ ಅವರದು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.