ನೀಡಲಾಗಿರುವ ಸೌಲಭ್ಯಗಳ ಮಹತ್ವ ತಿಳಿದುಕೊಳ್ಳಲು ಬಿಗ್ ಬಾಸ್ ಈ ವಾರದ ಟಾಸ್ಕ್ ನೀಡಿದ್ದಾರೆ. ಏನೇ ಬೇಕಿದ್ದರೂ ಟಾಸ್ಕ್ ಮಾಡಿಯೇ ಪಡೆಯಬೇಕು. ಆದರೆ ಯಾರೂ ಟೂಥ್‌ಬ್ರಷ್ ಆಯ್ಕೆ ಮಾಡಿಕೊಳ್ಳುತ್ತಿಲ್ಲ....
ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗಳು 8ನೇ ವಾರಕ್ಕೆ ಕಾಲಿಡುತ್ತಿದ್ದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಖಾಲಿ ಮಾಡಲಾಗಿದೆ. ಅಗತ್ಯ ವಸ್ತುಗಳು ಬೇಕೆಂದರೆ ಟಾಸ್ಕ್ ಮಾಡಿ, ಗಿಟ್ಟಿಸಿಕೊಳ್ಳಬೇಕು ಸೋತರೆ ವಾರ ಪೂರ್ತಿ ಸೌಲಭ್ಯವಿಲ್ಲದೇ ಇರಬೇಕಿದೆ. ದಿನಸಿ, ಅಡುಗೆ ಪಾತ್ರೆ ಹೀಗೆ ಒಂದೊಂದೇ ಆಯ್ಕೆ ಮಾಡಿಕೊಳ್ಳುತ್ತಿರುವ ಸ್ಪರ್ಧಿಗಳು ಬಾತ್‌ರೂಮ್‌ನ ಮಾತ್ರ ಲಿಸ್ಟ್‌ನಿಂದ ದೂರವಿಡುತ್ತಿದ್ದಾರೆ.
ಮಗು ಮನಸ್ಸಿನ ಶುಭಾ ಪೂಂಜಾ; ಫುಲ್ ಮನೋರಂಜನೆ, ಫಿನಾಲೇ ಮುಟ್ಟಲೇಬೇಕು!
undefined
ಎಲ್ಲರಿಗೂ ಒಂದು ಚಿಂತೆಯಾದರೆ, ನಟಿ ಶುಭಾ ಪೂಂಜಾಗೆ ಒಂದು ಚಿಂತೆ. ಮಲಗುವುದಕ್ಕೆ ಬೆಡ್ ಇಲ್ಲ, ಬೆಡ್‌ಶೀಟ್ ಇಲ್ಲ, ಬಟ್ಟೆ ಇಲ್ಲ. ಇದೆಲ್ಲಾ ಇಲ್ಲ ಅಂದ್ರು ಓಕೆ. ಆದರೆ ಬಾಯಿ ತೊಳೆದುಕೊಳ್ಳಲು ಟೂಥ್‌ಬ್ರಷ್ ಇಲ್ಲ ಅಂದ್ರೆ ಹೇಗೆ? ಬಾಯಿ ವಾಸನೆ ಬರಲ್ವಾ? ಎಂದು ಮನೆಯಲ್ಲಿರುವ ಎಲ್ಲಾ ಕ್ಯಾಮೆರಾಗಳಿಗೆ ಪ್ರಶ್ನೆ ಮಾಡಿದ್ದಾರೆ. ಬ್ರೋ ಗೌಡ ಅಲಿಯಾಸ್ ಶಮಂತ್ ಒಂದು ಉಪಾಯ ಕಂಡುಕೊಂಡಿದ್ದಾರೆ.
ದಿಂಬು, ಫೀಡಿಂಗ್ ಬಾಟಲ್ಲು.. ಶುಭಾ ಪೂಂಜಾಗೆ ಇದೆಲ್ಲ ಬೇಕಿತ್ತಾ!
ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯಲು ಬಳಸುವ ಬ್ರಷ್‌ನ ಸಣ್ಣ ನಾರನ್ನು ಕೈ ಬೆರಳಿಗೆ ಸಿಲುಸಿಕಿಕೊಂಡು ಪೇಸ್ಟ್ ಬಳಸಿ ಬ್ರಷ್ ಮಾಡುವುದು. ದಿನ ಹೀಗೆ ಮಾಡುತ್ತಿರುವುದರಿಂದ ಶುಭಾ ಹಲ್ಲುಗಳು ಹಾಳಾಗುತ್ತಿವೆ. 'ಪ್ಲೀಸ್ ಬಿಗ್ ಬಾಸ್ ನನ್ನ ಟೂಥ್‌ಬ್ರಷ್ ಕಳುಹಿಸಿಕೊಡಿ. ನೋಡಿ ನನ್ನ ಹಲ್ಲೆಲ್ಲಾ ಉದುರಿಹೋಗ್ತಿದೆ,' ಎಂದು ಕ್ಯಾಮೆರಾಗೆ ಹೇಳಿದ್ದಾರೆ. ಮನೆಯಲ್ಲಿ ಒಂದೊಂದೇ ಸೌಲಭ್ಯ ಕಸಿದುಕೊಳ್ಳುತ್ತಿರುವುದಕ್ಕೆ ಬಿಗ್ ಬಾಸ್ ವಿರುದ್ಧ ಶುಭಾ ಪೂಂಜಾ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಿಮ್ಮ ಜೊತೆ ಮಾತನಾಡುವುದಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹಠ ಮಾಡಿದ್ದಾರೆ.