ಸಿಹಿ ಸುದ್ದಿ ಕೊಟ್ಟ 'ನಮ್ಮನೆ ಯುವರಾಣಿ' ತಂಡ; ಮೀರಾ-ಅನಿ ಲವ್‌ಗೆ ಬಿಗ್‌ ಟ್ವಿಸ್ಟ್‌?

By Suvarna News  |  First Published Nov 10, 2020, 12:02 PM IST

ರುತೆರೆ ಜನಪ್ರಿಯ ಧಾರಾವಾಹಿ ಹೊಸ ಸಾಧನೆ ಮಾಡಿದೆ. ಕಾರಣ ಕರ್ತರಾದ ಪ್ರತಿಯೊಬ್ಬ ವೀಕ್ಷಕರಿಗೂ ಧನ್ಯವಾದಗಳನ್ನು ಹೇಳಿದೆ ತಂಡ.


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ನಮ್ಮನೆ ಯುವರಾಣಿ' ಕೆಲವು ದಿನಗಳ ಹಿಂದೆ 500 ಸಂಚಿಕೆ ಪೂರೈಸಿದೆ.  ಕೊರೋನಾ ಹೊಡೆತದ ನಡುವೆಯೂ ಈ ಸಾಧನೆ ಮಾಡಿರುವುದಕ್ಕೆ ಪ್ರೇಕ್ಷಕರೇ ಕಾರಣ ಎನ್ನುತ್ತದೆ ತಂಡ.

'ನಮ್ಮನೆ ಯುವರಾಣಿ' ಮೀರಾಳ ಎಂದೂ ನೋಡಿರದ ಪೋಟೋಗಳಿವು! 

Tap to resize

Latest Videos

ಮೀರಾ-ಅನಿ ಕಿತ್ತಾಟ, ಸಾಕು- ಅನಿ ಸಂಬಂಧ, ಕೋಳಿ ಮರಿ ಜೊತೆಯ ಸ್ನೇಹ, ಅಹಲ್ಯಾ-ಅಮ್ಮು ಮಾಸ್ಟರ್ ಪ್ಲಾನ್‌ ಎಲ್ಲವೂ ಒಟ್ಟಾಗಿಸಿ ಧಾರಾವಾಹಿಯನ್ನು ಸೂಪರ್ ಹಿಟ್ ಮಾಡಿದೆ. ಕೊರೋನಾ ಸಮಯದಲ್ಲಿ ಆರ್ಥಿಕ ಸಮಸ್ಯೆಯಿಂದ ಅನೇಕ ಧಾರಾವಾಹಿಗಳು ಪ್ರಸಾರ ನಿಲ್ಲಿಸಿದವು, ಕೆಲವೊಂದು ಧಾರಾವಾಹಿ ಸಂಪೂರ್ಣವಾಗಿ ಫುಲ್‌ಸ್ಟಾಪ್ ಹಾಕಿತ್ತು.  ಎಲ್ಲಾ ಅಡತಡೆಗಳನ್ನೂ ಎದುರಿಸಿದ 'ನಮ್ಮನೆ ಯುವರಾಣಿ' ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. 

ಅತ್ತಿಗೆಯೇ ದೇವರು, ಅವರೇ ನಮಗೆ ತಾಯಿ ಸಮಾನ ಎಂದು ತಿಳಿದು ನಂಬಿ ಮೋಸ ಹೋಗುತ್ತಿದ್ದ ಅನಿಕೇತ್‌ಗೆ ವಾಸ್ತವ ಏನೆಂದು ತಿಳಿಸಿ, ಸತ್ಯದತ್ತ ಕರೆದೊಯ್ಯುತ್ತಿರುವ ಮೀರಾ ಈ ಆಟದಲ್ಲಿ ಗೆಲುತ್ತಾಳಾ? ಅಷ್ಟಕ್ಕೂ ಅಹಲ್ಯಾಗೆ ಪತಿ ಸಾಕೇತ್‌ ಕುಟುಂಬದ ಮೇಲೆ ಅಷ್ಟೊಂದು ಕೋಪವೇಕೆ? ಸತ್ಯದ ಹುಡುಕಾಟದಲ್ಲಿ ಮೀರಾ-ಅನಿಕೇತ್ ನಡುವೆ ಪ್ರೀತಿ ಹೆಚ್ಚಾಗುತ್ತಾ?

ನಮ್ಮನೆ ಯುವರಾಣಿಯಲ್ಲಿ Silli Lalli ಸೂಜಿ; ಈಗ ಹೇಗಿದ್ದಾರೆ ನೋಡಿ! 

ವಾರ ವಾರವೂ ವಿಭಿನ್ನ ಟ್ವಿಸ್ಟ್‌ಗಳಿಂದ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿರುವ ನಮ್ಮನೆ ಯುವರಾಣಿ ಇನ್ನಷ್ಟು ಜನಪ್ರಿಯತೆ ಪಡೆದು, ಸಾವಿರಾರು ಸಂಚಿಕೆ ಪೂರೈಸಲಿ.

click me!