ಕನ್ನಡದ ಜನಪ್ರಿಯ ಸೀರಿಯಲ್‌ ತರಾತುರಿಯಲ್ಲಿ ಮುಕ್ತಾಯ, ಯಾವುದದು?

By Suvarna News  |  First Published Sep 8, 2021, 5:35 PM IST

ಕನ್ನಡದ ಜನಪ್ರಿಯ ಸೀರಿಯಲ್ಲೊಂದರ ಮುಕ್ತಾಯಕ್ಕೆ ಇದೀಗ ಕೌಂಟ್ ಡೌನ್ ಶುರುವಾಗಿದೆ. ಕಲರ್ಸ್ ಕನ್ನಡ ಚಾನೆಲ್‌ ತರಾತುರಿಯಲ್ಲಿ ನಿಲ್ಲಿಸ್ತಿರೋ ಆ ಸೀರಿಯಲ್ ಯಾವುದು? ಯಾಕೆ ನಿಲ್ಲಿಸ್ತಿದ್ದಾರೆ, ಸೀರಿಯಲ್ ಮುಕ್ತಾಯದ ಹಿಂದಿನ ಕತೆ ಏನು?


ಸದ್ಯ ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಸೇರಿದಂತೆ ಇರುವ ನಾಲ್ಕೈದು ಮನರಂಜನಾ ಚಾನೆಲ್‌ಗಳಲ್ಲಿ ಸೀರಿಯಲ್‌ಗಳದೇ ಮೇಲುಗೈ. ಇವಕ್ಕೆ ಪರ್ಮನೆಂಟ್ ಆಡಿಯನ್ಸ್ ಇರುವ ಕಾರಣ, ಜಾಹೀರಾತೂ ತಕ್ಕಮಟ್ಟಿಗೆ ಇರುವ ಕಾರಣ ಇದನ್ನು ವರ್ಷಗಟ್ಟಲೆ ಎಳೆಯೋದು ರೂಢಿ. ಕಥೆಗೆ ಅಡಿಕ್ಟ್ ಆಗೋ ಜನ ಇದನ್ನು ನೋಡಿಯೇ ನೋಡ್ತಾರೆ ಅನ್ನೋ ವಿಶ್ವಾಸ ಚಾನೆಲ್‌ಗಳದ್ದು. ಇಷ್ಟೆಲ್ಲ ಲೆಕ್ಕಾಚಾರದ ನಡುವೆಯೂ ಕೆಲವೊಮ್ಮೆ ಚಾನೆಲ್‌ಗಳ ಊಹೆ ತಲೆಕೆಳಗಾಗೋದಿದೆ. ಜನ ಬಹಳ ಇಷ್ಟ ಪಡಬಹುದು ಅಂದುಕೊಂಡ ಸೀರಿಯಲ್‌ ಅನ್ನು ಜನ ಇಷ್ಟವೇ ಪಡೋದಿಲ್ಲ. ಕೆಲವೊಮ್ಮೆ ಸಡನ್ನಾಗಿ ಸೀರಿಯಲ್‌ನ ಟಿಆರ್‌ಪಿ ಏರೋದುಂಟು.

ಆದರೆ ಇದೀಗ ಕಲರ್ಸ್ ಕನ್ನಡದ ಸೀರಿಯಲ್ಲೊಂದು ಮುಕ್ತಾಯದ ಹಂತ ತಲುಪುತ್ತಿದೆ. ಕತೆ ತುಸು ಇಂಟೆರೆಸ್ಟಿಂಗ್‌ ಆಗಿಯೇ ಸಾಗುತ್ತಿರುವಾಗ ಏಕಾಏಕಿ ಯಾಕೆ ಈ ಧಾರಾವಾಹಿಯನ್ನು ನಿಲ್ಲಿಸುತ್ತಿದ್ದಾರೆ? ಸೀರಿಯಲ್ ಮುಕ್ತಾಯದ ಹಿಂದೆಯೂ ಒಂದು ಕತೆ ಇದೆಯಾ ಅನ್ನೋದು ಸದ್ಯದ ಪ್ರಶ್ನೆ. 

Tap to resize

Latest Videos

ಆಭರಣದ ಜಾಹೀರಾತಿನಲ್ಲಿ ನಾಯಕಿಯಾದ ತೃತೀಯ ಲಿಂಗಿ! ಜನರ ಪ್ರತಿಕ್ರಿಯೆ ಹೇಗಿತ್ತು?

ಕಲರ್ಸ್ ಕನ್ನಡ ಚಾನೆಲ್‌ನಲ್ಲಿ ಸದ್ಯ ಸಾಕಷ್ಟು ಮನರಂಜನೆ ನೀಡುತ್ತಿರೋದು ಕನ್ನಡತಿ, ನನ್ನರಸಿ ರಾಧೆ, ಮಂಗಳಗೌರಿ ಮದುವೆ, ಹೂಮಳೆ ಇತ್ಯಾದಿ ಸೀರಿಯಲ್‌ಗಳು. ಇವುಗಳಲ್ಲೇ ಒಂದು ಸೀರಿಯಲ್‌ ಮುಕ್ತಾಯಕ್ಕೆ ಕೌಂಟ್‌ಡೌನ್‌ ಶುರುವಾಗಿದೆಯಂತೆ. ಆ ಸೀರಿಯಲ್‌ ಯಾವುದು ಅಂತ ಹೇಳೋ ಮುಂಚೆ ಆ ಸೀರಿಯಲ್‌ ಕತೆ ಎತ್ತ ಸಾಗ್ತಾ ಇತ್ತು ಅಂತ ನೋಡೋಣ.

ಈ ಸೀರಿಯಲ್‌ನ ನಾಯಕಿ ಬಹಳ ಶ್ರೀಮಂತೆ. ಕಾರ್ಪೊರೇಟರ್‌ ಮಗಳು. ಈಕೆಗೆ ಒಬ್ಬ ಬಡ ಹುಡುಗನ ಮೇಲೆ ಪ್ರೀತಿ ಹುಟ್ಟುತ್ತೆ. ಇಬ್ಬರೂ ಗಾಢವಾಗಿ ಪ್ರೀತಿಸುತ್ತಾರೆ. ಇದು ಕಾರ್ಪೊರೇಟರ್ ತಾಯಿಗೆ ಗೊತ್ತಾಗಿ ದೊಡ್ಡ ಗಲಾಟೆ ಆಗುತ್ತೆ. ಅಷ್ಟೊತ್ತಿಗೆ ತಾಯಿ ಕಣ್ತಪ್ಪಿಸಿ ಮಗಳು ತಾನಿಷ್ಟಪಟ್ಟ ಹುಡುಗನ ಜೊತೆ ಮದುವೆ ಆಗ್ತಾಳೆ. ಆತನ ಜೊತೆಗೆ ಸಂಸಾರ ಶುರು ಮಾಡ್ತಾಳೆ. ಇದನ್ನು ಸಹಿಸದ ಆ ತಾಯಿ ತನ್ನ ಮಗಳ ಗಂಡನನ್ನೇ ಕೊಲೆ ಮಾಡಿಸ್ತಾಳೆ. ಅಷ್ಟೊತ್ತಿಗೆ ನಾಯಕಿ ಗರ್ಭಿಣಿ. ಅತ್ತ ಪತಿಯ ಕೊಲೆ, ಇತ್ತ ಹೊಟ್ಟೆಯಲ್ಲಿರುವ ಮಗುವಿನ ಕೊಲೆಗೆ ಸಂಚು ಹಾಕು ಅಮ್ಮನ ನಡುವೆ ನಾಯಕಿಯ ಒದ್ದಾಟ. ಮಗಳನ್ನು ಅಷ್ಟಕ್ಕೇ ಬಿಡದ ಅಮ್ಮ, ಅವಳಿಗೆ ಶ್ರೀಮಂತ, ಒಂದು ಮಗುವಿರುವ ಹೆಂಡತಿ ಕಳೆದುಕೊಂಡ ವ್ಯಕ್ತಿಯ ಜೊತೆ ಮದುವೆ ಮಾಡಿಸ್ತಾಳೆ. ಆತನ ಜೊತೆಗೆ ಈಕೆಯ ಸಂಸಾರ ಹೇಗೆ ಸಾಗುತ್ತೆ ಅನ್ನುವ ಕತೆ ಈ ಸೀರಿಯಲ್‌ನದು. 

ಇಷ್ಟು ಹೇಳಿದ ಮೇಲೆ ಆ ಸೀರಿಯಲ್ ಹೂಮಳೆ ಅಂತ ಧಾರಾವಾಹಿ ಪ್ರಿಯರಿಗೆ ಗೊತ್ತಾಗುತ್ತೆ. ಈಗ ಅದೇ ಸುದ್ದಿ ಇಂಟರೆಸ್ಟಿಂಗ್‌ ಕತೆ ಇದ್ದ ಈ ಸೀರಿಯಲ್ ಅನ್ನು ತರಾತುರಿಯಲ್ಲಿ ಮುಗಿಸ್ತಿದ್ದಾರೆ ಅಂತ. ಕಾರಣ ಮತ್ತೇನಲ್ಲ, TRP ಕಡಿಮೆ ಆಗಿದೆ ಅನ್ನೋದು. ಶುರುವಲ್ಲಿದ್ದ ಟಿಆರ್ ಪಿ ಈಗ ಇಲ್ಲ ಅಂತ ಈ ಧಾರಾವಾಹಿ ನಿಲ್ಲಿಸಿ, ಅದರ ಬದಲಿಗೆ ಹೊಸ ಕಾರ್ಯಕ್ರಮ ಶುರು ಮಾಡುವ ಇರಾದೆ ಇದ್ದ ಹಾಗಿದೆ.

'ರಾಧೆ ಶ್ಯಾಮ': ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಅಶ್ವಿನಿ ಗೌಡ!

ಈ ವಿಷಯ ಇನ್ನೂ ಅಫೀಷಿಯಲ್ ಆಗಿ ಅನೌನ್ಸ್ ಆಗಿಲ್ಲ. ಆದರೆ ಸೀರಿಯಲ್‌ನಲ್ಲಿ ಶುರುವಲ್ಲಿ ಅಮ್ಮನ ಕೌರ್ಯಕ್ಕೆ ತುತ್ತಾಗಿ ಹೊಟ್ಟೆಯ ಮಗುವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ನಾಯಕಿ ಕೊನೆ ಕೊನೆ ಸೂಪರ್ ವುಮೆನ್ ಆಗಿ ಬದಲಾಗ್ತಾಳೆ. ತನ್ನ ಮಲ ಮಗ ಇಶಾನ್ ನನ್ನು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗಿಂತ ಹೆಚ್ಚು ಜೋಪಾನ ಮಾಡ್ತಾಳೆ. ಇತ್ತ ನಾಯಕಿ ಲಹರಿಯ ಗಂಡ ಯದುವೀರ್‌ಗೆ ಲಹರಿ ಮೇಲೆ ಲವ್ವು ಹೆಚ್ಚಾಗ್ತಿದೆ. ಯದುವೀರ್, ಇಶಾನ್ ಇಲ್ಲದ ಬದುಕನ್ನು ಇಮ್ಯಾಜಿನ್ ಮಾಡೋಕೋ ಆಗದ ಸ್ಥಿತಿಗೆ ಲಹರಿ ಬಂದಿದ್ದಾಳೆ. ಈಗ ನಡೀತಿರೋ ಮಿಸ್ಸೆಸ್ ಬೆಂಗಳೂರು ಕಂಟೆಸ್ಟ್ ನಲ್ಲಿ ಚೆಲುವಿನ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ ನಡೆದಿದೆ. 

ಇಷ್ಟರ ನಡುವೆ ಸೀರಿಯಲ್‌ಗೆ ಕೊನೆಯ ಬಿಂದು ಇಡೋದಕ್ಕೂ ಟೈಮ್ ಹತ್ತಿರವಾಗ್ತಾ ಇದೆ. 

click me!