ಲಕ್ಷಣ ಸೀರಿಯಲ್ ಶೂಟಿಂಗ್ ಮುಗಿದು ಪ್ರಸಾರ ಕೂಡ ಮುಕ್ತಾಯದ ಹಂತ ತಲುಪಿದೆ. ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಸೆಟ್‌ನ ಸಂಭ್ರಮವನ್ನು, ಲಕ್ಷಣ ಟೀಮ್ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದೆ. ಚಿತ್ರವಿಚಿತ್ರ ಫೋಸ್, ತಮಾಷೆಯ ಮಾತುಕತೆಗಳು, ಊಟತಿಂಡಿಗಳನ್ನು ಸವಿಯುತ್ತಿರುವ ಬೊಂಬಾಟ್ ಕ್ಷಣಗಳನ್ನು ನೋಡಿ ಆನಂದಿಸಿ...
ಕಲರ್ಸ್ ಕನ್ನಡದಲ್ಲಿ 'ಲಕ್ಷಣ' ಧಾರಾವಾಹಿಯನ್ನು ಬಹಳಷ್ಟು ವೀಕ್ಷಕರು ನೋಡಿದ್ದಾರೆ. ಈ ಧಾರಾವಾಹಿ ಹಲವು ತಿಂಗಳುಗಳ ಕಾಲ ಟಿಆರ್‌ಪಿ ರೇಸ್‌ನಲ್ಲಿ ಕೂಡ ಟಾಪ್ ಸ್ಥಾನಗಳಲ್ಲಿ ಕುಳಿತಿತ್ತು. ಈ ಧಾರಾವಾಹಿಯು ಗ್ರಾಮೀಣ ಭಾಗದಲ್ಲೂ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಈ ಸೀರಿಯಲ್‌ನ ಲಕ್ಷಣ, ಶ್ವೇತಾ ಹಾಗೂ ಭೂಪತಿ ಪಾತ್ರಗಳಂತೂ ಹಲವರ ಅಚ್ಚುಮೆಚ್ಚಿನ ಪಾತ್ರಗಳೇ ಆಗಿದ್ದವು. ಶಕುಂತಲಾ ದೇವಿಯ ವರಸೆಯನ್ನೂ ಮೆಚ್ಚಿದವರು ಸಾಕಷ್ಟಿದ್ದಾರೆ.
ಇದೀಗ ಲಕ್ಷಣ ಧಾರಾವಾಹಿ ಶೂಟಿಂಗ್ ಮುಗಿದಿದೆ. ಇನ್ನೇನು ಎರಡು ದಿನಗಳು ಧಾರಾವಾಹಿ ಎಂದಿನಂತೆ ಪ್ರಸಾರ ಕಾಣಲಿದೆ. ಆ ಬಳಿಕ ಅದೇ ವೇಳೆಯಲ್ಲಿ ಬಿಗ್ ಬಾಸ್ ಪ್ರಸಾರವಾಗಲಿದ್ದು, ಲಕ್ಷಣ ಧಾರಾವಾಹಿ ಪ್ರಿಯರು ಇದನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಈ ಧಾರಾವಾಹಿ ಹಲವು ಪ್ರೇಕ್ಷಕರ ಮೆಚ್ಚಿನ ಧಾರಾವಾಹಿ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆದರೂ ಅದಕ್ಕೊಂದು ಅಂತ್ಯ ಆಗಲೇಬೇಕಲ್ಲ!
ಕಣ್ಣು ಮುಚ್ಚಿ 'ಬಾರಮ್ಮ' ಎಂದು ಕರೆದ ವೈಷ್ಣವ್ 'ಲಕ್ಷ್ಮೀ'ಗೆ ತೋರಿಸಿದ್ದೇನು ನೋಡಿ!
ಇದೀಗ ಲಕ್ಷಣ ಸೀರಿಯಲ್ ಶೂಟಿಂಗ್ ಮುಗಿದು ಪ್ರಸಾರ ಕೂಡ ಮುಕ್ತಾಯದ ಹಂತ ತಲುಪಿದೆ. ಈ ಧಾರಾವಾಹಿಯ ಕೊನೆಯ ದಿನದ ಶೂಟಿಂಗ್ ಸೆಟ್‌ನ ಸಂಭ್ರಮವನ್ನು ಲಕ್ಷಣ ಟೀಮ್ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದೆ. ಚಿತ್ರವಿಚಿತ್ರ ಫೋಸ್, ತಮಾಷೆಯ ಮಾತುಕತೆಗಳು, ಊಟತಿಂಡಿಗಳನ್ನು ಸವಿಯುತ್ತಿರುವ ಬೊಂಬಾಟ್ ಕ್ಷಣಗಳು, ಶಕುಂತಲಾ ದೇವಿಯ ತಮಾಷೆಯ ನಿದ್ದೆ, ಇಡೀ ಟೀಮ್ ರಸನಿಮಿಷಗಳು ಎಲ್ಲವೂ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿ ಸೋಷಿಯಲ್ ಮೀಡಿಯಾ ಮೂಲಕ ವೀಕ್ಷಕರಿಗೆ ತಲುಪತೊಡಗಿವೆ.
ಇದೇನಿದು ಈ ವಯಸ್ಸಿನಲ್ಲಿ 'ಮುಗಿಲು ಮುಟ್ಟಿದ' ತ್ರಿಶಾ ಕೃಷ್ಣನ್ ಸಂಭಾವನೆ!
ಒಟ್ಟಿನಲ್ಲಿ ಕಲರ್ಸ್ ಕನ್ನಡದ ಮತ್ತೊಂದು ಸೀರಿಯಲ್ ಅಂತ್ಯ ಕಂಡಿದೆ. ಮುಂದಿನ ವಾರದಿಂದ ಬಿಗ್ ಬಾಸ್ ಶುರುವಾಗಲಿದೆ. ಲಕ್ಷಣ ಸೀರಿಯಲ್ ಇತಿಹಾಸದ ಪುಟಕ್ಕೆ ಸೇರುವ ಟೈಮ್ ಸನ್ನಿಹಿತವಾಗಿದೆ. ಅದೇನೇ ಇರಲಿ, ವೀಕ್ಷಕರು ಇನ್ನೊಂದು ಸೀರಿಯಲ್‌ಗೆ, ಇನ್ನೊಂದು ರಿಯಾಲಿಟಿ ಶೋಗೆ ಶಿಪ್ಟ್ ಆಗುತ್ತ ಮನರಂಜನೆ ಪಡೆಯುವ ತಮ್ಮ ಹವ್ಯಾಸವನ್ನು ನಿರಂತರ ಪೋಷಿಸಿಕೊಂಡು ಹೋಗುತ್ತಾರೆ ಎಂಬುದಂತೂ ಸತ್ಯ!