
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' (Lakshana) ಧಾರಾವಾಹಿ ಬಿಳಿ ಹುಡುಗಿ (Fair Girl), ಕಪ್ಪು ಹುಡುಗಿ (Dark Girl) ಜೀವನ ಕಥೆ ಹೇಳುತ್ತದೆ. ಬಣ್ಣ ಎಷ್ಟು ಮುಖ್ಯ, ಮನುಷ್ಯ ಹೇಗೆ ಬೇದಭಾವ (Discrimination) ಮಾಡುತ್ತಾನೆ. ಹಣದ ದರ್ಪ ಏನೆಲ್ಲಾ ಮಾಡಿಸುತ್ತದೆ ಎಂದು ಈ ಧಾರಾವಾಹಿಯಲ್ಲಿ ತೋರಿಸಲಾಗಿದೆ.
ಆಸ್ಪತ್ರೆಯಲ್ಲಿ ಶ್ವೇತಾ (Swetha) ಹಾಗೂ ನಕ್ಷತ್ರಾ (Nakshathra) ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದವರು. ತ್ವಚೆಯ ಬಣ್ಣದ ಕಾರಣದಿಂದ ಸಂಬಂಧಿಗಳು ಅದಲು ಬದಲು ಮಾಡುತ್ತಾರೆ. ಸಿರಿವಂತರ ಮಗಳಾಗಿ ಹುಟ್ಟಿದರೂ, ಮಿಡಲ್ ಕ್ಲಾಸ್ ಕುಟುಂಬ ಸೇರುವ ನಕ್ಷತ್ರಾ, ತನ್ನ ತ್ವಚೆಯ ಬಣ್ಣದಿಂದಾಗಿಯೇ ದಿನವೂ ಅವಮಾನ, ನಿಂದನೆಗೆ ಒಳಗಾಗುತ್ತಾಳೆ. ಸಿರಿವಂತ ಕುಟುಂಬ ಸೇರಿದ ಶ್ವೇತಾ ಎಲ್ಲವನ್ನೂ ತಮ್ಮ ಕಾಲಿನ ಕೆಳಗೆ ನಡೆಯುವಂತೆ ನೋಡಿಕೊಳ್ಳುತ್ತಾಳೆ. ಆದರೆ ಸತ್ಯವೇ ಬೇರೆ. ಇವರ ಮಗಳು ಇವಳೇನಾ ಎಂದು ತಿಳಿದುಕೊಳ್ಳಲು ಡಿಎನ್‌ಎ (DNA) ಟೆಸ್ಟ್ ಮಾಡಿಸುತ್ತಾರೆ. ಗಣೇಶ ಹಬ್ಬದ (Ganesha Festival) ದಿನ ರಿಪೋರ್ಟ್ ನಕ್ಷತ್ರಾ ಕೈ ಸೇರುತ್ತದೆ. ನಾನು ಅವರ ಮಗಳೇ, ನಾನೇ ರಿಪೋರ್ಟ್ ಕೊಡುತ್ತೇನೆಂದು ಅಪ್ಪನಿಗೆ ತೋರಿಸಲು ಹೋಗುತ್ತಾಳೆ. ಆದರೆ ಅಪ್ಪ ಮನೆಯಲ್ಲಿ ಇಲ್ಲದ ಕಾರಣ ನಕ್ಷತ್ರಾಳೇ ರಿಪೋರ್ಟ್ ತೆರೆದು ನೋಡುತ್ತಾಳೆ. ನಾನು ಇವರ ಮಗಳಲ್ಲ, ಎಂದು ತಿಳಿದ ತಕ್ಷಣವೇ ಶಾಕ್ ಆಗುತ್ತಾಳೆ. ಮುಂದೇನು ಮಾಡಬೇಕು ಎಂದು ತಿಳಿಯದೇ ನಿಂತಲ್ಲೇ ಕುಸಿದು ಬೀಳುತ್ತಾಳೆ.
ಗಣೇಶ ವಿಸರ್ಜನೆ ಸಮಯದಲ್ಲಿ ತಮಟೆ ಸೌಂಡ್ ನಿಂತರೂ ಅಳುತ್ತಾ ನಕ್ಷತ್ರಾ ಕುಣಿಯುತ್ತಿರುತ್ತಾಳೆ. ಇದನ್ನು ನೋಡಿ ಶಾಕ್ ಆದ ಭೂಪತಿ (Bhoopathi) ಆಕೆಯನ್ನು ಪ್ರಶ್ನೆ ಮಾಡುತ್ತಾನೆ. 'ಇಲ್ಲ ನಾನು ನನ್ನ ಅಪ್ಪನ ಮಗಳಲ್ಲ ಎಂದು ಜನರಿಗೆ ತಿಳಿದರೆ, ಅಮ್ಮನನ್ನು ತಪ್ಪಾಗಿ ನೋಡುತ್ತಾರೆ. ನಾನು ಇದನ್ನು ಯಾರಿಗೂ ಹೇಳುವುದಿಲ್ಲ,' ಎಂದು ನಕ್ಷತ್ರಾ ತನ್ನ ನೋವನ್ನು ಮಚ್ಚಿಡುತ್ತಾಳೆ. ಅಲ್ಲೇ ಭೂಪತಿಗೆ ಸಣ್ಣ ಅನುಮಾನವೂ ಶುರುವಾಗುತ್ತದೆ. ಹೇಗಾದರೂ ಮಾಡಿ ಸತ್ಯವನ್ನು ಪತ್ತೆ ಮಾಡಬೇಕು ಎಂದು ಪ್ಲಾನ್ ಮಾಡುತ್ತಾನೆ.
ಯಾರ ಕೈಗೂ ಸಿಗದೇ ಎತ್ತಿಟ್ಟ ರಿಫೋರ್ಟ್ ಅನ್ನು ಶ್ವೇತಾ ಹಾಗೂ ಮಿಲಿ ಪತ್ತೆ ಮಾಡಿ ನಕ್ಷತ್ರಾಳನ್ನು ಸಿಲುಕಿಸುವ ಪ್ರಯತ್ನ ಮಾಡಿತ್ತಾರೆ. ನಕ್ಷತ್ರಾ ತಂದೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ? ನಕ್ಷತ್ರಾ ಮನೆ ಬಿಟ್ಟು ಹೋಗುತ್ತಾಳ? ಇಲ್ಲವೇ ಸತ್ಯ ತಿಳಿದು ಭೂಪತಿ ಏನು ಮಾಡುತ್ತಾನೆಂದು ಮುಂಬರುವ ಸಂಚಿಕೆಗಳಿಗೆ ಕಾದು ನೋಡಬೇಕಿದೆ. ನಕ್ಷತ್ರಾ ಕಪ್ಪಿದ್ದರೂ ವೀಕ್ಷಕರು ಆಕೆಯನ್ನು ಒಪ್ಪಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಕ್ಷತ್ರಾ ಪರ ಸಾಕಷ್ಟು ಕಾಮೆಂಟ್‌ಗಳು ಹರಿದಾಡುತ್ತಿವೆ. ನಾನೂ ಕಪ್ಪಿರುವೆ ನಿಮ್ಮ ಪರಿಸ್ಥಿತಿ ನನಗೆ ಅರ್ಥ ಆಗುತ್ತದೆ ಎಂದು ಕೆಲವರು ಹೇಳಿದ್ದಾರೆ.
ಶ್ವೇತಾನ ಮನೆ ಸೊಸೆ ಮಾಡಿಕೊಳ್ಳಬೇಕು ಎಂದು ಆಗಲೇ ಭೂಪತಿ ತಾಯಿ, 500 ಚೈನ್ ಹೊಟೇಲ್ ಮಾಲಕಿ ಶಕುಂತಾಲ ದೇವಿ ನಿರ್ಧಾರ ಮಾಡಿದ್ದಾರೆ. ಇನ್ನ 15 ದಿನಗಳಲ್ಲಿ ತನ್ನ ಮದುವೆ (Wedding) ಇದೆ ಎಂದು ಭೂಪತಿಗೂ ಗೊತ್ತು. ಆದರೆ ಹುಡುಗಿ ಯಾರು ಏನು ಎಂಬ ಮಾಹಿತಿ ತಾಯಿ ಬಿಟ್ಟು ಕೊಟ್ಟಿರುವುದಿಲ್ಲ. ನಕ್ಷತ್ರಾಳಿಂದ ದೂರ ಆಗುತ್ತೀನಿ ಅನ್ನೋ ನೋವು ಭೂಪತಿಗೂ ಕಾಡಲು ಶುರುವಾಗಿದೆ. ಭೂಪತಿಯಿಂದ ನೀನು ದೂರ ಇರಬೇಕು. ಅವನ ಬಳಿ ಸುಳಿಯಬಾರದು ಎಂದು ಭೂಪತಿ ತಾಯಿಯೂ ನಕ್ಷತ್ರಾಗಳಿಗೆ ವಾರ್ನಿಂಗ್ ಮಾಡಿರುತ್ತಾರೆ. ಆದರೆ ಅವರೇ ಭೂಪತಿ ತಾಯಿ ಎಂಬುವುದಾಗಲಿ, ತಮ್ಮ ಮನೆಯಲ್ಲಿ Paying Guest ಆಗಿರುವ ಭೂಪತಿ ಹಿನ್ನೆಲಯಾಗಲಿ ನಕ್ಷತ್ರಾಗಳಿಗೂ ಗೊತ್ತಿಲ್ಲ. ಎಲ್ಲವೂ ಪ್ರಶ್ನೆಯಾಗಿ ಉಳಿದಿರುವ ಪರಿಸ್ಥಿತಿ ಎದುರಾಗಿದೆ. ಭೂಪತಿ ಮದುವೆ ಎಲ್ಲಾ ಅನುಮಾನ ಹಾಗೂ ಕಾಡುತ್ತಿರುವ ಪ್ರಶ್ನೆಗೆ ಉತ್ತರವಾಗುತ್ತದೆ.
ನಕ್ಷತ್ರಾಗಳನ್ನು ಸಿಕ್ಕಿಸಲು ಒಂದಲ್ಲೊಂದು ಕುತಂತ್ರ ಹೂಡುತ್ತಿರುವ ಶ್ವೇತಾಳಿಗೆ, ತಾನು ಸಿಕ್ಕಿ ಬೀಳಬಹುದೆಂಬ ಕೊಂಚ ಕಲ್ಪನೆಯೂ ಇಲ್ಲ. ಪೋಷಕರು ಬೆಳ್ಳಗಿದ್ದು, ಮಗಳು ಕಪ್ಪಾದರೆ ಪ್ರಶ್ನಿಸುವ ಸಮಾಜ, ಪೋಷಕರು ಕಪ್ಪಗಿದ್ದು, ಮಗಳು ಬೆಳ್ಳಗಿದ್ದರೆ ಯಾವುದೇ ಅನುಮಾನವನ್ನೂ ವ್ಯಕ್ತಪಡಿಸುವುದಿಲ್ಲ. ಒಟ್ಟಿನಲ್ಲಿ ಈ ಸೀರಿಯಲ್ ಸಮಾಜದ ಅಂಕು ಡೊಂಕುಗಳನ್ನೂ ಪ್ರಶ್ನಿಸುತ್ತಿರುವುದರಿಂದ ಜನರಿಗೆ ತುಂಬಾ ಹತ್ತಿರವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.