ಅಬ್ಬಾ! ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ ವೇಟ್‌ ಲಾಸ್ ನೋಡಿ ನೆಟ್ಟಿಗರು ಶಾಕ್

Suvarna News   | Asianet News
Published : Sep 30, 2021, 03:06 PM ISTUpdated : Sep 30, 2021, 03:18 PM IST
ಅಬ್ಬಾ! ಕಿರುತೆರೆ ನಟಿ ಐಶ್ವರ್ಯಾ ಬಸ್ಪುರೆ ವೇಟ್‌ ಲಾಸ್ ನೋಡಿ ನೆಟ್ಟಿಗರು ಶಾಕ್

ಸಾರಾಂಶ

ಫಿಟ್ನೆಸ್ ಕಡೆ ಮುಖ ಮಾಡಿದ ಕಿರುತೆರೆ ನಟಿಯರು. ಐಶ್ವರ್ಯಾ ಟ್ರಾನ್ಸ್‌ಫಾರ್ಮೇಷನ್‌ ನೋಡಿ ಯಾರ್ ಶಾಕ್‌ ಆಗಿಲ್ಲ ಹೇಳಿ?

ಲೈಮ್‌ ಲೈಟ್‌ನಲ್ಲಿರುವ ಪ್ರತಿಯೊಬ್ಬ ಸೆಲೆಬ್ರಿಟಿನೂ ತಮ್ಮ ಫಿಟ್ನೆಸ್‌ (Fitness) ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಬ್ಯೂಟಿ ಸೀಕ್ರೆಟ್ (Beauty Secret) ಹಾಗೂ ಫಿಟ್ನೆಸ್ ಸೀಕ್ರೆಟ್ ಹಂಚಿಕೊಳ್ಳುತ್ತಾರೆ. ಕೆಲವರು ಏನೂ ಹೇಳಿಕೊಳ್ಳುವುದಿಲ್ಲ ಆದರೆ  ಇದ್ದಕ್ಕಿದ್ದಂತೆ ಟ್ರಾನ್ಸ್‌ಫಾರ್ಮೇಷನ್ (Transformation) ಫೋಟೋ ರಿವೀಲ್ ಮಾಡುತ್ತಾರೆ. ಅದರಂತೆ ನಟಿ ಐಶ್ವರ್ಯಾ ಬಸ್ಪುರೆ (Aishwarya Baspure) ಕೂಡ ಫೋಟೋ ಹಂಚಿಕೊಂಡಿದ್ದಾರೆ. 

'ಸೈಲೆಂಡ್ ಆಗಿ ಹಾರ್ಡ್‌ವರ್ಕ್ (HardworK) ಮಾಡಬೇಕು. ಇದು ಫೈನಲ್ ಡೆಸ್ಟಿನೇಷನ್ (Destination) ಅಲ್ಲ ಆದರೆ ಇದೊಂದು ಪುಟ್ಟ ಹೆಜ್ಜೆ. ಇನ್ನೂ ಪಯಣವಿದೆ' ಎಂದು ಐಶ್ವರ್ಯಾ ಬರೆದುಕೊಂಡಿದ್ದಾರೆ.  ಐಶ್ವರ್ಯಾ ಬದಲಾವಣೆಗೆ ನೆಟ್ಟಿಗರು ಶಾಕ್ ಆದರೂ ಮೆಚ್ಚುಗೆ ವ್ಯಕ್ತ ಪಡಿಸಿ ಟಿಪ್ಸ್ ಕೇಳಿದ್ದಾರೆ. ಇಷ್ಟೊಂದು ಫಿಟ್ ಆಗಲು ಐಶ್ವರ್ಯಾ ಏನೆಲ್ಲಾ ಮಾಡಿದ್ದಾರೆ ಎಂದು ಎಲ್ಲಿಯೂ ರಿವೀಲ್ ಮಾಡಿಲ್ಲ. 

ಕಿರುತೆರೆಯಲ್ಲಿ ನಾಯಕಿ, ಸಿನಿಮಾಗಳಲ್ಲಿ ಅಮ್ಮ: ಸ್ವಾತಿ

ಈ ವರ್ಷ ಜೂನ್‌ 20ರಂದು ಮಾಸ್ಟರ್ ಡಿಗ್ರಿ ಸರ್ಟಿಫಿಕೇಸ್‌ (Master Degree Certificate) ಪಡೆದಿರುವ ಫೋಟೋ ಹಂಚಿಕೊಂಡು, ತಂದೆ ಬಗ್ಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ. ಈ ಫೋಟೋದಲ್ಲೂ ಐಶ್ವರ್ಯಾ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ. 'ನನ್ನ ಫೋಟೋ ಮಾತ್ರ ಅಪ್ಲೋಡ್ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ಆದರೆ ನನ್ನ ತಂದೆ ಹೆಮ್ಮೆ ಪಡುವಂತೆ ಮಾಡಿರುವುದರ ಫೋಟೋ ಕೂಡ ಹಂಚಿಕೊಳ್ಳುತ್ತಿರುವೆ. ನನ್ನ ಡಿಗ್ರಿ ಸರ್ಟಿಫಿಕೇಟ್‌ ನನ್ನ ಕೈ ಸೇರಿದ ಕ್ಷಣ ನನ್ನ ತಂದೆ ಆನಂದ ನೋಡಬೇಕಿತ್ತು. ತಂದೆ ಎಂದೂ ನನಗೆ ಒತ್ತಾಯ ಹಾಕಿಲ್ಲ. ನನಗೆ ಬೇಕಾದ ಎಜುಕೇಷನ್‌ (Education) ನಾನೇ ಆಯ್ಕೆ ಮಾಡಿಕೊಂಡೆ. ನಾನು ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿದಾಗಲೂ, ಅವರು ನನ್ನ ಸಪೋರ್ಟ್ ಆಗಿ ನಿಂತು. ಕೈಯಲ್ಲಿ ಡಿಗ್ರಿ ಇರಲೇ ಬೇಕು ಎನ್ನುವುದು ಅವರ ಮಾತು. ನನ್ನ ಮಾಸ್ಟರ್ ಡಿಗ್ರಿ ನಿಮಗೆ ಸಂತೋಷ ತಂದಿದೆ ಎಂದು ಭಾವಿಸುವೆ,' ಎಂದು ಐಶ್ವರ್ಯಾ ಬರೆದುಕೊಂಡಿದ್ದಾರೆ. 

'ಯಾರೇ ನೀ ಮೋಹಿನಿ'ಯಲ್ಲಿ ಸದಾ ಅಳುವ ಬೆಳ್ಳಿ ರಿಯಲ್‌ ಲೈಫ್‌ನಲ್ಲಿ ಚಿನಕುರಳಿ!

ಮಹಾಸತಿ (Mahasati) ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಐಶ್ವರ್ಯಾ ಜನಪ್ರಿಯತೆ ಪಡೆದದ್ದು ಯಾರೇ ನೀ ಮೋಹಿನಿ (Yaare ne Mohini) ಧಾರಾವಾಹಿಯ ಮಾಯಾ ಪಾತ್ರದ ಮೂಲಕ. ಶ್ರುತಿ ನಾಯ್ಡು (Shruti Naidu) ಗರಡಿಯಲ್ಲಿ ಬೆಳೆದಿರುವ ಐಶ್ವರ್ಯಾ ಪ್ರೀಮಿಯರ್ ಪದ್ಮಿನಿ (Premier Padmini) ಸಿನಿಮಾದಲ್ಲೂ ನಟಿಸಿದ್ದಾರೆ.  ನಟನೆ ಮಾತ್ರವಲ್ಲ ಮಾಡೆಲಿಂಗ್ (Modeling) ಕ್ಷೇತ್ರದಲ್ಲೂ ಐಶ್ವರ್ಯ ತೊಡಗಿಸಿಕೊಂಡಿದ್ದಾರೆ. 2015ರಲ್ಲಿ ಮಿಸ್ ಕರ್ನಾಟಕ ವಿಜೇತೆ (Miss Karnataka)ಯೂ ಆಗಿದ್ದರು. 

'ನಾನು ಲೈಮ್‌ಲೈಟ್‌ನಲ್ಲಿರುವ ನಟಿಯರು ಏನೇ ಮಾಡಿದರೂ ಹೆಸರಾಗುತ್ತದೆ. ಕಳೆದ ವರ್ಷ ಲಾಕ್‌ಡೌನ್‌ (Lockdown) ಅನೌನ್ಸ್ ಆದಾಗ ತುಂಬಾ ಬೇಸರವಾಗಿತ್ತು. ನನ್ನ ದೊಡ್ಡ ಪ್ರಾಜೆಕ್ಟ್‌ಗಳು ಕೈ ಬಿಟ್ಟವು. ಒಂದೊಂದು ದಿನ ರಾತ್ರಿ ಅಳುತ್ತಾ ಮಲಗುತ್ತಿರುದ್ದೆ. ಆದರೀಗ ನಾನು ಮಾನಸಿಕವಾಗಿ ಗಟ್ಟಿಯಾಗಿರುವ,' ಎಂದು ಐಶ್ವರ್ಯಾ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?