ಅನು ಸೂರ್ಯ ಮದುವೆ ಮುರಿದು ಬಿತ್ತು ಎಂದು ದುಖಃ ಪಡಬೇಕಾ ಅಥವಾ ಅನು ಆರ್ಯ ಮತ್ತೆ ಮದುವೆಯಾಗುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಖುಷಿ ಪಡೆಬೇಕಾ ಎಂದು ನೆಟ್ಟಿಗರು ಚಿಂತಿಸುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ದಿನೇ ದಿನೆ ಪಡೆಯುತ್ತಿರುವ ತಿರುವಿಗೆ ವೀಕ್ಷಕರಲ್ಲಿ ದೊಡ್ಡ ಗೊಂದಲ ಸೃಷ್ಟಿಯಾಗಿದೆ. ಅನು ಮತ್ತು ಅರ್ಯವರ್ಧನ್ ಈಗ ಮದುವೆಯಾಗುತ್ತಾರೆ ಆಗ ಮದುವೆಯಾಗುತ್ತಾರೆ ಎಂದು ಕಾಯುತ್ತಿದ್ದವರಿಗೆ ಸೂರ್ಯನ ಎಂಟ್ರಿ ನೋಡಿ ಶಾಕ್ ಆದರು. ಅನು ಬಂಗಾರೆನೇ ನನ್ನ ಪ್ರಾಣ ಮಗಳು ಕೇಳಿದನ್ನು ಎಂದೂ ಇಲ್ಲ ಎನ್ನದೆ ಚಾಚು ತಪ್ಪದೆ ಪಾಲಿಸುತ್ತಿದ್ದ ಸುಬ್ಬುಗೆ ಮಗಳಿಗೆ ತಂದೆ ವಯಸ್ಸಿನ ಸಮಾನಾಗಿರುವ ಅಳಿಯನನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?
ಆಗಿಂದು ಈಗಿಂದು ಫೋಟೋ ಶೇರ್ ಮಾಡಿಕೊಂಡ ಜೊತೆ ಜೊತೆಯಲಿ ಪುಷ್ಪ!
ಸೂರ್ಯನಿಗೆ ತನ್ನ ಪ್ರೀತಿ ವಿಚಾರ ಹಂಚಿಕೊಳ್ಳಬೇಕೆಂದು ಅನು ಹಲವು ಬಾರಿ ಪ್ರಯತ್ನ ಪಟ್ಟಲು. ಮದುವೆ ಕೆಲಸ, ಆಫೀಸ್ ಕೆಲಸ ಹೀಗೆ ಒಂದೊಂದೆ ಅಡ್ಡ ಗೋಡೆ ಕಟ್ಟಿತ್ತು. ಇನ್ನೇನು ಸೂರ್ಯ ತಾಳಿ ತಟ್ಟೇ ಬಿಡುತ್ತಾನೆ ಎಂದು ಕೊಳ್ಳುವ ಹೊತ್ತಲ್ಲಿ ಆರ್ಯ ಪ್ರಪೋಸ್ ಮಾಡಿದ ವಿಡಿಯೋ ಪ್ರಸಾರ ಮಾಡಲಾಗಿತ್ತು. ಹೆಲಿಕಾಫ್ಟರ್‌ನಲ್ಲಿ ಇಬ್ಬರು ಐ ಲವ್ ಯು ಎಂದು ಕೂಗಿದ್ದು, ತಬ್ಬಿಕೊಂಡಿದ್ದು ಎಲ್ಲವೂ ಪ್ರಸಾರವಾಗಿತ್ತು. ಅನು ಹಾಗೂ ಅರ್ಯನ ವಿಡಿಯೋ ನೋಡುತ್ತಿದ್ದಂತೆ ಸುಬ್ಬು ಕುಸಿದು ಬೀಳುತ್ತಾರೆ. ಸೂರ್ಯನ ತಾಯಿ, ಆರ್ಯನ ತಾಯಿ, ಜೇಂಡೆ ಯಾರು ಏನೇ ಹೇಳಿದರೂ ಸುಬ್ಬು ಮದುವೆ ಮುಂದುವರಿಸಲು ಮನಸ್ಸು ಮಾಡುವುದಿಲ್ಲ. ಬದಲಿಗೆ ಆಗಮಿಸಿದ ಪ್ರತಿಯೊಬ್ಬ ಅತಿಥಿಗೂ ತಪ್ಪದೆ ಊಟ ಮಾಡಲು ಹೇಳಿ ಮದುವೆ ಮನೆಯಿಂದ ಹೊರಡುತ್ತಾರೆ.
ಅನು-ಅರ್ಯ ಮಧ್ಯೆ ಬಂದ ಸೂರ್ಯ; ಅರ್ಯವರ್ಧನ್ ಪರಿಸ್ಥಿತಿ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು!
ಅರ್ಯವರ್ಧನ್ ಮನೆಯಲ್ಲಿ ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಎಲ್ಲರೂ ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅನು ಮನೆಯಲ್ಲಿ? ಸುಬ್ಬು ಕೋಪದಲ್ಲಿ ಕುಟುಂಬದವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಮನಸ್ತಾಪಗಳ ಬಗ್ಗೆ ಮಾತನಾಡಿಕೊಂಡು ಎಲ್ಲವೂ ಸರಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ ಆರ್ಯನಿಗೆ ಪುಷ್ಪ ಸಾಥ್ ನೀಡುತ್ತಿದ್ದಾರೆ. ಅಪ್ಪನ ನಂಬಿಸಿ ಗಳಿಸಬೇಕಾ ಅಥವಾ ಅರ್ಯನ ಪ್ರೀತಿ ತಲೆಭಾಗಬೇಕಾ ಎಂದು ತಿಳಿಯದೆ ಅನು ಗೊಂದಲದಲ್ಲಿದ್ದಾಳೆ. ಅರ್ಯ ಪ್ರಪೋಸ್ ಮಾಡಲಿ ಎಂದು ತಮ್ಮ-ಅತ್ತಿಗೆ ಹೂ ಗುಚ್ಚು ಹಾಗೂ ಸೂಟ್ ಗಿಫ್ಟ್ ಮಾಡಿದ್ದಾರೆ. ಇಲ್ಲಿದೆ ಯಾರು ಮೊದಲು ಮೌನ ಮುರಿಯುತ್ತಾರೆ ಎಂದು ಕಾದು ನೋಡಬೇಕಿದೆ.