ಕೊರೋನಾದಿಂದ ಕುಟುಂಬಸ್ಥರನ್ನು ಕಳೆದುಕೊಂಡ ದಿವ್ಯಾ ಉರುಡುಗ ಭಾವುಕ!

Suvarna News   | Asianet News
Published : Jun 25, 2021, 12:13 PM ISTUpdated : Jun 25, 2021, 12:17 PM IST
ಕೊರೋನಾದಿಂದ ಕುಟುಂಬಸ್ಥರನ್ನು ಕಳೆದುಕೊಂಡ ದಿವ್ಯಾ ಉರುಡುಗ ಭಾವುಕ!

ಸಾರಾಂಶ

ಮನೆಗೆ ರೀ- ಎಂಟ್ರಿ ಕೊಡುತ್ತಿದ್ದಂತೆ ಹೊರಗಡೆ ನಡೆದ ಘಟನೆಗಳ ಬಗ್ಗೆ ಚರ್ಚಿಸಿದ ಸ್ಪರ್ಧಿಗಳು. ಭಾವುಕರಾದ ದಿವ್ಯಾ ಉರುಡುಗ.

72 ದಿನಗಳನ್ನು ಬಿಗ್ ಬಾಸ್‌ ಮನೆಯಲ್ಲಿ ಪೂರೈಸಿ ಆನಂತರ  42 ದಿನಗಳ ಕಾಲ ಬಿಗ್ ಬಾಸ್ ಮನೆಯಿಂದ ಹೊರಗಿದ್ದ ಸ್ಪರ್ಧಿಗಳು ಮತ್ತೆ 28 ದಿನ ದೂರದಲ್ಲಿರುವ ಫಿನಾಲೆಗೆ ಒಂದಾಗಿದ್ದಾರೆ.  ಈ ಅವಧಿಯಲ್ಲಿ ಯಾರೆಲ್ಲಾ ಏನೆಲ್ಲಾ ಮಾಡಿದರು, ದಿನ ಹೇಗೆ ಕಳೆದರು ಎಂದು ಚರ್ಚಿಸುತ್ತಿದ್ದರು. ಈ ವೇಳೆ ದಿವ್ಯಾ ಉರುಡುಗ ಭಾವುಕರಾಗಿದ್ದಾರೆ. 

ದಿವ್ಯಾ ಉರುಡುಗ ಹಿಂದೆ 5 ಲಕ್ಷ ಫ್ಯಾನ್ಸ್! ಬಿಗ್‌ಬಾಸ್‌ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಆಟದ ನಿರೀಕ್ಷೆ 

ಹೌದು! ಕೊರೋನಾ ಎರಡನೇ ಅಲೆಯಿಂದ ಅದೆಷ್ಟೋ ಮಂದಿ ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ. ದಿವ್ಯಾ ಉರುಡುಗ ಕೂಡ ಚಿಕ್ಕಪ್ಪ ಮತ್ತು ತಾತನನ್ನು ಕಳೆದುಕೊಂಡಿದ್ದಾರೆ.  ತಾಯಿಯ ಅಪ್ಪ ಮತ್ತು ಸಹೋದರಿ ಗಂಡ. ಈ ವಿಚಾರ ಹೇಳುತ್ತಿದ್ದಂತೆ ದಿವ್ಯಾ ಭಾವುಕರಾಗಿದ್ದಾರೆ. ವೈಷ್ಣವಿ ಮತ್ತು ಇನ್ನಿತರ ಸದಸ್ಯರು ಸಮಾಧಾನ ಮಾಡಿದ್ದಾರೆ. 

ಶೋ ಮುಗಿದ ನಂತರ ಮದುವೆ ಪ್ಲಾನ್ ಮಾಡುತ್ತಿದ್ದ ಶುಭಾ ಪೂಂಜಾ ಜನರ ಸೇವೆಯಲ್ಲಿ ತೊಡಗಿಸಿಕೊಂಡರು. ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ. ಅರವಿಂದ್ ಮತ್ತು ದಿವ್ಯಾ ಉರುಡುಗ ಜೋಡಿಯಾಗಿ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ರಘು ಗೌಡ ತಮ್ಮ ಪತ್ನಿ ಮತ್ತು ಸ್ನೇಹಿತರ ಜೊತೆ ಫನ್ನಿ ವಿಡಿಯೋಗಳನ್ನು ಮಾಡುವುದರಲ್ಲಿ ಬ್ಯುಸಿಯಾದರು. ಶಮಂತ್ ಕೂಡ ಏರಿಯಾ ಕಾರ್ಪೋರೇಟ್‌ಗಳ ಜೊತೆ ಸೇರಿ ಫುಟ್ ಕಿಡ್ ವಿತರಣೆ ಮಾಡಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial: ನಕಲಿ ಹೆಂಡ್ತಿ ಹಿಂದೆ ಸುತ್ತಾಡಿದ್ದು ಸಾಕು, ಆಸ್ಪತ್ರೆಗೆ ಹೋಗೋ ಕರ್ಣಾ- ನೆಟ್ಟಿಗರಿಂದ ಭಾರಿ ಟ್ರೋಲ್​
BBK 12 : ಬಿಗ್ ಬಾಸ್ ಮನೆಯಿಂದ ಹೊರಗೆ ಬರ್ತಿದ್ದಂತೆ ಬದಲಾಯ್ತು ಧ್ರುವಂತ್ ಲುಕ್