ಬಿಗ್ ಬಾಸ್‌ ಮನೆಯಲ್ಲಿ ದೆವ್ವದ ಕಾಟ: ಕಪ್ಪು ನೆರಳು ನೋಡಿ ಹೆದರಿದ ಶಮಂತ್?

Suvarna News   | Asianet News
Published : Jun 25, 2021, 09:48 AM ISTUpdated : Jun 25, 2021, 10:08 AM IST
ಬಿಗ್ ಬಾಸ್‌ ಮನೆಯಲ್ಲಿ ದೆವ್ವದ ಕಾಟ: ಕಪ್ಪು ನೆರಳು ನೋಡಿ ಹೆದರಿದ ಶಮಂತ್?

ಸಾರಾಂಶ

ಶಮಂತ್ ಹೇಳಿದ್ದು ನಿಜವೇ? ಕ್ಯಾಪ್ಟನ್‌ ರೂಮ್‌ನಲ್ಲಿ ದೆವ್ವ ಇದ್ಯಾ? ಏನಿದು ಸೆಕೆಂಡ್ ಇನಿಂಗ್ಸ್ ಟ್ವಿಸ್ಟ್....

ಬಿಗ್ ಬಾಸ್‌ ಮನೆಯ ಬೆಡ್‌ ರೂಮ್‌ನಲ್ಲಿ ಸದಸ್ಯರು ಭೂತಕೋಲದ ಬಗ್ಗೆ ಮಾತನಾಡುತ್ತಿದ್ದರು. ಪ್ರಶಾಂತ್ ಸಂಬರಗಿ ಹಾಸಿಗೆ ಮೇಲೆ ಕುಳಿತ ಶಮಂತ್ ಈ ಬಗ್ಗೆ ಆಲೋಚಿಸುತ್ತಿದ್ದರು. ಇದೇ ಸಮಯದಲ್ಲಿ ಕ್ಯಾಪ್ಟನ್‌ ರೂಮ್‌ನಲ್ಲಿ ಕಪ್ಪಗಿರೋದು ಏನೋ ಹೋಯ್ತಂತೆ. ಗಾಬರಿಗೊಂಡ ಶಮಂತ್ ಈ ವಿಚಾರವನ್ನು ಪ್ರಿಯಾಂಕಾ ಮತ್ತು ಚಕ್ರವರ್ತಿ ಬಳಿ ಹಂಚಿಕೊಳ್ಳುತ್ತಾರೆ. 

ಚಿಕ್ ಆ್ಯಂಡ್ ಚಿಕನ್ ಒಂದೇ ಎಂದೇಳಿದ ಶಮಂತ್ ತಲೆಗೆ ಹುಳ ಬಿಟ್ಟ ಪ್ರಿಯಾಂಕಾ; ಎಲಿಮಿನೇಷನ್ ಶುರು? 

ಮನೆಯ ಕ್ಯಾಪ್ಟನ್ ಆದವರು ಕ್ಯಾಪ್ಟನ್‌ ಕೋಣೆಯಲ್ಲಿ ಮಲಗಬೇಕು. ಶಮಂತ್‌ ಎರಡು ಸಲ ಕ್ಯಾಪ್ಟನ್ ಆಗಿದ್ದರು, ಎರಡು ವಾರವೂ ಸರಿಯಾಗಿ ನಿದ್ರೆ ಮಾಡಿರಲಿಲ್ಲ. ಯಾರಾದರೂ ಕ್ಯಾಪ್ಟನ್ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಅವರ ನೆರಳು ಕೂಡ ಕಂಡಿರಬಹುದು, ಇನ್ನೊಂದು ಸಲ ನಿನಗೆ ಕಂಡರೆ ನನಗೆ ಹೇಳು ಎಂದು ಚಕ್ರವರ್ತಿ ಹೇಳುತ್ತಾರೆ. 

ಶಮಂತ್ ವಾಶ್‌ರೂಮ್‌ಗೆ ಹೋದರೂ ಬೇರೆಯವರನ್ನು ಕರೆದುಕೊಂಡು ಹೋಗುವಂತೆ ಪ್ರಿಯಾಂಕಾ ಸಲಹೆ ನೀಡುತ್ತಾರೆ. ಶಮಂತ್ ಹೇಳಿದ್ದು ಎಷ್ಟು ನಿಜ, ಎಷ್ಟು ಸುಳ್ಳು ಯಾರಿಗೂ ತಿಳಿದಿಲ್ಲ ಆದರೆ ಶಮಂತ್ ವಿವರಿಸಿದ ರೀತಿಗೆ ಪ್ರಿಯಾಂಕಾರಿಗೆ ಕುತೂಹಲ ಹೆಚ್ಚಾಗಿದೆ. ನಾನು ಒಂದು ಸಲ ನೋಡಬೇಕು ಎಂದು ಶಮಂತ್‌ಗೆ ಹೇಳಿದ್ದಾರೆ. 

ನನ್ನ ಹುಡುಗಿ ಕುಳ್ಳಗಿರ್ಬೇಕು, ಚೆನ್ನಾಗಿರೋರು ಬೇಡ: ಶಮಂತ್ ಗರ್ಲ್‌ಫ್ರೆಂಡ್ ಸುಳಿವು! 

ಹಳೆ ಸೀಸನ್‌ನಲ್ಲೂ ನಟಿ ಕಾರುಣ್ಯ ರಾಮ್‌ ವಾಶ್‌ರೂಮ್‌ನಲ್ಲಿ ಮುಖ ತೊಳೆದುಕೊಳ್ಳುವಾಗ ಹೀಗೆ ಏನೋ ತಪ್ಪು ನೋಡಿದಂತೆ ಆಗಿತ್ತು ಎಂದು ಜೋರಾಗಿ ಕೂಗಿದ್ದರು. ಅದೇನಿದ್ದರೂ ವೀಕೆಂಡ್ ಮಾತುಕತೆಯಲ್ಲಿ ಸುದೀಪ್ ಇದರ ಬಗ್ಗೆ ಸ್ಪಷ್ಟನೆ ನೀಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ಶಾಲೆಗೆ ಹೋಗಿದ್ದ ಸ್ಪಂದನಾ ರಾತ್ರಿ 10 ಗಂಟೆಯಾದ್ರೂ ಪತ್ತೆಯಿಲ್ಲ! ಆ ಕರಾಳ ದಿನ ನೆನೆದ ಅಪ್ಪ
ಗಿಲ್ಲಿ ನಟನನ್ನು ಉಳಿಸೋಕೆ Bigg Boss ಪ್ಲ್ಯಾನ್‌ ಮಾಡಿದ್ದಾರೆ: ಲೈಟ್‌ ಆಫ್‌ ಆದ್ಮೇಲೆ ಸೂರಜ್‌, ರಕ್ಷಿತಾ ಗುಸು ಗುಸು