
ಬಿಗ್‌ಬಾಸ್ ಸೀಸನ್ 8ನ ಮೊದಲ ಸೀಸನ್ ಕೊರೋನಾ ಲಾಕ್‌ಡೌನ್ ಕಾರಣಕ್ಕೆ ಅರ್ಧಕ್ಕೇ ನಿಂತಿತ್ತು. ಇದೀಗ ಸೆಕೆಂಡ್ ಇನ್ನಿಂಗ್‌ಸ್ ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಮೊದಲ ಇನ್ನಿಂಗ್‌ಸ್ ಹಾಗೂ ಸೆಕೆಂಡ್ ಇನ್ನಿಂಗ್‌ಸ್ ಅನ್ನು ಕನೆಕ್‌ಟ್ ಮಾಡುವಂತೆ ಕ್ರಿಯೇಟಿವ್ ಪ್ರೊಮೋಗಳನ್ನು ಚಾನಲ್ ಹೊರಬಿಟ್ಟಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಹರಿದು ಬಂದಿದೆ.
1. ಉಂಗುರ ಮಿಸ್ ಮಾಡದ ಅರವಿಂದ್
ಈ ಹಿಂದಿನ ಎಪಿಸೋಡ್‌ನಲ್ಲಿ ಅರವಿಂದ್ ಹಾಗೂ ದಿವ್ಯಾ ಜೋಡಿ ಸಖತ್ ಫೇಮಸ್ ಆಗಿತ್ತು. ಗಿಫ್‌ಟ್ ನೀಡೋ ಟಾಸ್‌ಕ್ನಲ್ಲಿ ದಿವ್ಯಾ ತನ್ನ ಕೈಯಲ್ಲಿದ್ದ ಅಪ್ಪ ಕೊಟ್ಟ ಉಂಗುರವನ್ನೇ ಅರವಿಂದ್ ಬೆರಳಿಗೆ ತೊಡಿಸಿದ್ರು. ಆದರೆ ಅದನ್ನು ಕಳೆದುಕೊಂಡು ಅರವಿಂದ್ ಸಾಕಷ್ಟು ಪೇಚಾಡಿದರು. ಕೊನೆಗೂ ಅದು ಅವರ ಜೇಬಿನಲ್ಲೇ ಸಿಕ್ಕಿತು. ಹೊಸ ಪೊ್ರೀಮೋದಲ್ಲಿ ಅವರು ಮತ್ತೆ ಉಂಗುರ ಕಳೆದುಕೊಂಡಿದ್ದಾರೆ. ಊರೆಲ್ಲ ಹುಡುಕಿದ್ದಾರೆ. ಕೊನೆಗೂ ಅದು ಸಿಗೋದು ಅವರ ಕೈ ಬೆರಳಲ್ಲೇ. ಈ ಬಾರಿ ಉಂಗುರ ಕಳೆಯೋ ಚಾನ್ಸೇ ಇಲ್ಲ ಅನ್ನೋ ಪ್ರತಿಜ್ಞೆಯೊಂದಿಗೆ ಅವರು ಸೂಟ್‌ಕೇಸ್ ಪ್ಯಾಕ್ ಮಾಡಿಕೊಳ್ತಿದ್ದಾರೆ.
2. ಪ್ರೇಮಿಯೋ, ಬಿಗ್‌ಬಾಸೋ.. ಶುಭಾ ಕನ್‌ಫ್ಯೂಶನ್
ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ಶುಭಾ ತನ್ನ ಮಗುವಿನಂಥಾ ಹುಡುಗಾಟಿಕೆಗಳಿಂದ ಗಮನ ಸೆಳೆದಿದ್ರು. ಈ ಬಾರಿ ಅವರು ರೀ ಎಂಟ್ರಿಯಲ್ಲಿ ಗೊಂದಲಕ್ಕೆ ಬಿದ್ದಿದ್ದಾರೆ. ತನ್ನ ಪ್ರೇಮಿಯನ್ನು ಬಿಟ್ಟು ಬಿಗ್‌ಬಾಸ್‌ಗೆ ಹೋಗಲ್ಲ ಅಂತ ಒಂದು ಕ್ಷಣ ಅತ್ತು ಕರೆದರೆ, ಮತ್ತೊಮ್ಮೆ ಕುಣಿ ಕುಣಿಯುತ್ತಾ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಡೋದಕ್ಕೆ ಎಕ್ಸೈಟ್‌ಮೆಂಟ್ ತೋರಿಸುತ್ತಿದ್ದಾರೆ. ಏನಿದರ ಮರ್ಮ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಜೂ.21ರಂದು ಮತ್ತೆ ಶುರು ಬಿಗ್‌ಬಾಸ್!
3. ನನ್ ಹೆಂಡ್ತಿ ಹೆಸ್ರು ವಿದ್ಯಾ ಅಂದ್ರು ರಘು
ಮೊದಲ ಇನ್ನಿಂಗ್‌ಸ್ನಲ್ಲಿ ಶುರು ಶುರುವಲ್ಲಿ ಹೆಂಡತಿ, ಮಗು ನೆನೆಸಿಕೊಂಡು ಅಳ್ತಾ ಇದ್ದ ರಘು ಆಮೇಲಾಮೇಲೆ ಯಾವ ಪರಿ ಬದಲಾಗಿ ಹೋದರು ಅಂದರೆ ಹೆಂಡತಿ ಹೆಸರೇ ಮರೆತು ಹೋಗುವಷ್ಟು. ಇದರಿಂದ ಬಿಗ್‌ಬಾಸ್ ಮನೆಯಲ್ಲಿ ನಗೆ ಬುಗ್ಗೆ ಚಿಮ್ಮಿತ್ತು. ಅವರು ಬಿಗ್‌ಬಾಸ್ ಮನೆಯಿಂದ ಆಚೆ ಹೋದ ಮೇಲೆ ಹೆಂಡತಿ ಕೈಯಿಂದ ಲಟ್ಟಿಣಿಕೆ ಏಟು ತಿನ್ನೋದು ಗ್ಯಾರೆಂಟಿ ಅಂತ ಎಲ್ಲರೂ ಅವರ ಕಾಲೆಳೆಯುತ್ತಿದ್ದರು. ಅದರಂತೆ ಹೊಸ ಪೊ್ರೀಮೋದಲ್ಲಿ ರಘು ಪತ್ನಿ ಸೌಟು ಹಿಡಿದು ನಿಂತಿದ್ರೆ, ರಘು ಬಸ್ಕಿ ಹೊಡೆಯುತ್ತಾ, ‘ಹೆಂಡ್ತಿ ಹೆಸರು ವಿದ್ಯಾ, ನಿಂದೇ ಪರ್ಮನೆಂಟ್ ಪದ್ಯ, ಪ್ಲೀಸ್ ಹೋಗ್ಬರ್ತೀನಿ’ ಅಂತ ಗೋಗರೆಯುತ್ತಿದ್ದಾರೆ.
ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ 3 ಕೆಜಿ ತೂಕ ಇಳಿಸಿದೆ: ಪ್ರಿಯಾಂಕಾ ತಿಮ್ಮೇಶ್
ಇದೇ ಥರ ಕಳೆದ ಸಲ ಅಡುಗೆ ಮನೆಯ ಕಾರಣಕ್ಕೇ ಸಿಕ್ಕಿ ಬೀಳ್ತಿದ್ದ ಪ್ರಶಾಂತ ಸಂಬರಗಿ, ಅತಿ ಮಾತಿನ ಕಾರಣಕ್ಕೆ ಚರ್ಚೆಗೊಳಗಾಗಿದ್ದ ಚಂದಚೂಡ, ಕಳೆದ ಸಲದಂತೆ ಈ ಬಾರಿಯೂ ಲಕ್ ಕೊಡಪ್ಪಾ ಅನ್ನುವ ಬ್ರೊ ಗೌಡ ಶಮಂತ್ ಪೊ್ರೀಮೋಗಳೂ ಭರ್ಜರಿ ರೆಸ್ಪಾನ್‌ಸ್ ಪಡೆಯುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.