ಸಿಕ್ರೇಟ್ ಟಾಸ್ಕ್ ಮೂಲಕ ಮನೆಯ ವಾತಾವರಣವನ್ನೇ ಬದಲಾಯಿಸಿ ಲಕ್ಷುರಿ ಬಜೆಟ್ ಗೆದ್ದ ಹರೀಶ್ ರಾಜ್‌ಗೆ ಸಿಕ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ.
ವಾರದ ಕೊನೆಯಾದ್ರೆ ಸಾಕು ಯಾರು ಮನೆಯಲ್ಲಿ ಎಲಿಮಿನೇಟ್ ಆಗುತ್ತಾರೆ, ಯಾರಿಗೆ ಸಿಗುತ್ತೆ ಕಿಚ್ಚನ ಚಪ್ಪಾಳೆ ಎಂದು ಕಾದು ನೋಡುವ ಪ್ರೇಕ್ಷಕರಿಗೆ ಬಿಗ್ ಬಾಸ್ ಎಂದೂ ನಿರಾಸೆ ಮಾಡಿಲ್ಲ.
ಕಳೆದ ವಾರ ಕಿಚ್ಚನ ಚಪ್ಪಾಳೆಯನ್ನು ರಾಯಲ್ ಶೆಟ್ಟಿ ಉರ್ಫ್ ಭೂಮಿ ಶೆಟ್ಟಿ ಗಿಟ್ಟಿಸಿಕೊಂಡರೆ ಈ ವಾರ ಅದನ್ನು ಸ್ಯಾಂಡಲ್ ವುಡ್ ಕಲಾಕಾರ್ ಹರೀಶ್ ರಾಜ್ ಗಿಟ್ಟಿಸಿಕೊಂಡಿದ್ದಾರೆ.
ಕಿಚ್ಚನ ಮೆಚ್ಚುಗೆ ಗಿಟ್ಟಿಸಿಕೊಂಡ ರಾಯಲ್ ಶೆಟ್ಟಿ!
ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರ್ಯಾಂಕ್ ಮಾಡಬೇಕು ಹಾಗೂ ಮನೆ ಸಮೀಕರಣವನ್ನು ಬದಲಾಯಿಸಬೇಕು ಎಂದು ಬಿಗ್ ಬಾಸ್ ನೀಡಿದ ಸಿಕ್ರೇಟ್ ಟಾಸ್ಕ್‌ನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಲಕ್ಷುರಿ ಪಾಯಿಂಟ್ಸ್ ಗಿಟ್ಟಿಸಿಕೊಟ್ಟರು.
BB7:ಬೇಕೆಂದೇ ಮಾಡಿದ ಜಗಳದಲ್ಲಿ ಸತ್ಯ ಬಿಚ್ಚಿಟ್ಟ ಹರೀಶ್ ರಾಜ್!
ಅಡುಗೆ ಮನೆಯನ್ನೇ ತನ್ನದು ಅನ್ನುವ ರೀತಿಯಲ್ಲಿ ಸುಜಾತ ವರ್ತಿಸುತ್ತಾರೆ ಹಾಗೂ ಮಾತನಾಡುವ ಶೈಲಿ ತಪ್ಪೆಂದು ಹರೀಶ್ ರಾಜ್ ಆ ವಿಚಾರ ಕುರಿತು ಜಗಳ ಮಾಡಿ ಇಡೀ ಮನೆಯ ವಾತಾವರಣವನ್ನು ಬದಲಾಯಿಸಿದ್ದರು ಹಾಗೂ ಕಾಬೂಲ್‌ನ ಜಾದುಗಾರನಾಗಿ ಅಭಿನಯಿಸಿದ್ದಕ್ಕೆ ವಾರದ ಕಥೆ ಕಿಚ್ಚನ ಜೊತೆಯಲ್ಲಿ 'ಕಿಚ್ಚನ ಚಪ್ಪಾಳೆ'ಯನ್ನು ಹರೀಶ್ ರಾಜ್‌ಗೆ ನೀಡಿದರು.