ಲವ್ ಆಯ್ತು, ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಆರಂಭಿಸಿದ ಆರ್ಯವರ್ಧನ್!

By Suvarna News  |  First Published Jan 31, 2020, 2:42 PM IST

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ 'ಜೊತೆ ಜೊತೆಯಲಿ' ಆರ್ಯವರ್ಧನ್ ಸೀರಿಯಲ್ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ನೆಟ್ಟಿಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
 


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ತನ್ನ ವಿಭಿನ್ನ ಕಥೆಯಿಂದ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದಿನೇ ದಿನೇ ಅನು-ಆರ್ಯರ್ಧನ್ ಕೆಮಿಸ್ಟ್ರಿ ಜನರಲ್ಲಿ ತುಕೂಹಲ ಹೆಚ್ಚಸುತ್ತಿದೆ. ತನ್ನ ನೆಚ್ಚಿನ ನಟನನ್ನು ಕೇವಲ 30 ನಿಮಿಷಗಳು ನೋಡಲು ಸಾಲದು. ಇನ್ನೂ ಹೆಚ್ಚು ಹೊತ್ತು ಧಾರಾವಾಹಿ ಪ್ರಸಾರವಾಗಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

ಜೊತೆ ಜೊತೆಯಲಿ ಆರ್ಯವರ್ಧನ್ ಫಸ್ಟ್ ಕ್ರಶ್ ಯಾರು?

Latest Videos

undefined

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಅರ್ಯವರ್ಧನ್ ಅಲಿಯಾಸ್‌ ಅನಿರುದ್ಧ ಧಾರಾವಾಹಿಗೆ ಸಂಬಂಧಿಸಿದ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಡಿಫರೆಂಟ್‌ ಮ್ಯಾನ್‌ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಮಗೆ ತಿಳಿದಿರುವ ವಿಶೇಷ ವಿಚಾರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೂ ಕಾಮೆಂಟ್‌ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಇದರಿಂದ ತಮ್ಮ ನೆಚ್ಚಿನ ನಟನೊಂದಿಗೆ ನೇರವಾಗಿ ಮಾತನಾಡಿದಷ್ಟು ಖುಷಿಯಾಗುತ್ತಿದೆ ಎಂದೂ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 

ಅನು ಸಿರಿಮನೆ ಪ್ರೀತಿ ಒಪ್ಪಿಕೊಂಡ ಆರ್ಯವರ್ಧನ್!

ಕೆಲವು ದಿನಗಳ ಹಿಂದೆ 'ಒಂದಿಷ್ಟು ಸಾಮಾನ್ಯ ಜ್ಞಾನದೊಂದಿಗೆ ದಿನ ಪ್ರಾರಂಭಿಸೋಣ್ವಾ? ನನಗೆ ತಿಳಿದಂತೆ ಕರ್ನಾಟಕದಲ್ಲಿ ಒಟ್ಟು 67 RTO ಕಚೇರಿಗಳಿವೆ...Bangalore Central KA01, Bangalore West KA02, Bangalore East KA03, Bangaore North KA04, Bangalore South KA05 ನಿಮ್ಮ ಊರಿನದ್ದು ನೀವು ಕಮೆಂಟ್ ಮಾಡಿ' ಎಂದು ಬರೆದುಕೊಂಡಿದ್ದರು. ಇದಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಬಂದಿದ್ದು, 100ಕ್ಕೂ ಹೆಚ್ಚು ಬಾರಿ ಶೇರ್‌ ಆಗಿದೆ. 

ಅಷ್ಟೇ ಅಲ್ಲದೇ 'ಪೇಡಾಕ್ಕೆ ಧಾರಾವಾಡ ..ಮಲ್ಲಿಗೆಗೆ ಮೈಸೂರು.... ನಿಮ್ಮ ಊರಿನ ವಿಶೇಷಗಳನ್ನು ಕಮೆಂಟ್‌ನಲ್ಲಿ ಹಾಕಿ. ಮಾಹಿತಿ ವಿನಿಮಯವಾಗಲಿ' ಎಂದು ಹೇಳುವ ಮೂಲಕ ಅನೇಕ ವಿಶೇಷ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ರಾಜ್ಯದ ವಿವಿಧೆಡೆಯ ಜನರು ನಟರೊಂದಿಗೆ ಮಾತನಾಡುವ ನೆಪ ಹಾಗೂ ತಮ್ಮ ಊರಿನ ವಿಶೇಷತೆಗಳನ್ನು ಹಂಚಿಕೊಳ್ಳುವ ಖುಷಿಯಿಂದ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. 

click me!