ಚೈತ್ರಾ ಲಕ್ ಬದಲಾಯಿಸ್ತು ಆ್ಯಪಲ್; BB7 ಮನೆಯಲ್ಲಿ ಎಲ್ಲವೂ ತಲೆಕೆಳಗಾಯ್ತು!

Published : Oct 26, 2019, 12:25 PM IST
ಚೈತ್ರಾ ಲಕ್ ಬದಲಾಯಿಸ್ತು ಆ್ಯಪಲ್;  BB7 ಮನೆಯಲ್ಲಿ ಎಲ್ಲವೂ ತಲೆಕೆಳಗಾಯ್ತು!

ಸಾರಾಂಶ

  ಒಂದು ಸಣ್ಣ ಆ್ಯಪಲ್ ಇಡೀ ಮನೆಯಲ್ಲಿ ಜಗಳಕ್ಕೆ ಕಾರಣವಾಯ್ತು. ಆ್ಯಪಲ್ ತಿಂದ ಒಂದೇ ಕಾರಣಕ್ಕೆ ಚೈತ್ರಾ ಕೊಟ್ಟೂರ್‌ರನ್ನು ಮೇಲೆ ಮನೆಯ ಸದಸ್ಯರೆಲ್ಲರೂ ಮುಗು ಬೀಳುತ್ತಾರೆ. ಆಕೆ ಮೇಲೆ ದೋಷಾರೋಪಣೆ ಮಾಡುತ್ತಾರೆ. ಇದನ್ನು ನೋಡಿದ ಪ್ರೇಕ್ಷಕರಿಗೆ ಕಿರಿಕಿರಿ ಎನಿಸಿದ್ದು ಸುಳ್ಳಲ್ಲ.

 

ಬಿಗ್ ಬಾಸ್ ಮನೆಯಲ್ಲಿ ಯಾವ ವಿಚಾರಕ್ಕೆ ಜಗಳ ಆಗುತ್ತೋ ಇಲ್ವೋ ಅಡುಗೆ ಮನೆಯ ವಿಷ್ಯದಲ್ಲಿ ಮಾತ್ರ ತಪ್ಪದೇ ಆಗುತ್ತದೆ. ಅದಿಲ್ಲ ಇದಿಲ್ಲ, ನಮಗೇಕೆ ಸಿಗುತ್ತಿಲ್ಲ ಅಂತೆಲ್ಲಾ ವಾರ್ ಶುರುವಾಗುತ್ತದೆ. ತೀರಾ ಬಾಲಿಶ ಎನಿಸಿದ್ದು ಆ್ಯಪಲ್ ಗಾಗಿ ಚೈತ್ರಾ ಕೊಟ್ಟೂರ್ ಮೇಲೆ ಮನೆ ಮಂದಿಯೆಲ್ಲಾ ಮುಗಿ ಬಿದ್ದದ್ದು!

 

ಹಸಿವು ಎಂದು ಅಡುಗೆ ಮನೆಯಿಂದ ಆ್ಯಪಲ್ ತೆಗೆದುಕೊಂಡು ಚೈತ್ರ ಕೊಟ್ಟೂರ್‌ ತಿನ್ನುತ್ತಾರೆ. ಅಷ್ಟಕ್ಕೇ ಮನೆಮಂದಿಯೆಲ್ಲಾ ಏನೋ ತಪ್ಪು ಮಾಡಿದರು ಅನ್ನೋ ಹಾಗೆ ಜಗಳಕ್ಕೆ ನಿಲ್ಲುತ್ತಾರೆ. ಕಟುವಾಗಿ ಮಾತನಾಡುತ್ತಾರೆ. ಸಿತಾರಾ ಅಲಿಯಾಸ್ ಸುಜಾತಾ ನಡೆದುಕೊಂಡ ರೀತಿಯನ್ನು ಇಡೀ ಕರ್ನಾಟಕ ನೋಡಿದೆ. ಹಿರಿಯ ಕಲಾವಿದೆಯಾಗಿ ತೀರಾ ಬಾಲಿಶವಾಗಿ ನಡೆದುಕೊಂಡು ತಮ್ಮೊಳಗಿನ ಸಣ್ಣತನವನ್ನು ತೋರಿಸಿಯೇ ಬಿಟ್ಟರು.

BB7: ಸ್ಕ್ರಿಪ್ಟೆಡ್? ಮನೆಯೊಳಗಿನ ಗುಟ್ಟು ರವಿ ಬೆಳಗೆರೆ ಬಾಯಲ್ಲಿ ರಟ್ಟು!

 

ಬಿಗ್ ಬಾಸ್ ಮನೆ ಮಂದಿಗೆ ಗೊತ್ತಿರಲಿಕ್ಕಿಲ್ಲ! ಈ ಪ್ರಹಸನಗಳನ್ನು ನೋಡಿದ ಹೊರಗಿನ ಪ್ರಪಂಚ ಎಷ್ಟರ ಮಟ್ಟಿಗೆ ಅದನ್ನು ವ್ಯಂಗ್ಯವಾಗಿ ತೆಗೆದುಕೊಂಡಿದೆ ಎಂದು. ಆದರೆ ಆ್ಯಪಲ್ ತಿಂದ ಚೈತ್ರಾಗೆ ಆಗಿದ್ದೆಲ್ಲಾ ಒಳ್ಳೆಯದೇ ಆಗಿದೆ. ಹೇಗೆ ನೋಡಿ.

 

ಎರಡು-ಮೂರು ಪೀಸ್ ಸೇಬು ತಿಂದ ಚೈತ್ರಾಳಿಗೆ ಜಗಳವಾದ ನಂತರ ಏನೂ ತಿನ್ನಲು ಮನಸ್ಸು ಬರುವುದಿಲ್ಲ, ವಾಸುಕಿ ವೈಭವ್ ತನ್ನ ಸೇಬನ್ನು ಕೊಡುತ್ತಾರೆ ಆಕೆಗೆ ಅಲ್ಲಿ ಇನ್ನೊಂದು ಫಲ ಸಿಗುತ್ತದೆ. ಆನಂತರ ಅಡುಗೆ ಮನೆಯ ಬಗ್ಗೆ ಮನಸ್ಸು ನೋವಾಗುವಂತೆ ಮಾತನಾಡಿದ ಸಿತಾರ ಟಾಸ್ಕ್‌ ಪಾಲಿಸುವುದರಲ್ಲಿ ವಿಫಲರಾಗಿ 1000 ಲಕ್ಷ್ಯೂರಿ ಪಾಯಿಂಟ್ಸ್‌ ಕಳೆದುಕೊಳ್ಳುತ್ತಾರೆ ಇದರಿಂದ ಕಳಪೆ ಪ್ರದರ್ಶನ ಬೋರ್ಡ್‌ ಪಡೆದು ಜೈಲು ಸೇರುತ್ತಾರೆ. ಆನಂತರ ರೆಫ್ರಿಜರೇಟರ್ ಚಟುವಟಿಕೆಯಲ್ಲಿ ಚಾಕೋಲೇಟ್‌ ಸಿಗುತ್ತದೆ. ಒಂದಾದ ಮೇಲೊಂದು ಲಕ್ ಚೈತ್ರಾಳನ್ನು ಹುಡುಕಿಕೊಂಡು ಬರುತ್ತಿದೆ.

ಬಿಗ್ ಬಾಸ್ ಸ್ಟೈಲ್‌ವಾಲಿ; ರಿಯಲ್ ಲೈಫ್‌ನಲ್ಲಿ ಯಾಕಿಂಗೆ?

ಈ ವಿಚಾರದ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚು ಚರ್ಚೆ ಆಗುತ್ತಿದ್ದು ಅದನ್ನು ಸಾಧ್ಯವಾದ ರೀತಿಯಲ್ಲಿ ನಿಮ್ಮ ಮುಂದೆ ಬರವಣಿಗೆ ರೂಪದಲ್ಲಿ ತೋರಿಸುವುದೇ ನಮ್ಮ ಪ್ರಯತ್ನ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ