ಭಾಗ್ಯಲಕ್ಷ್ಮೀ ಸೀರಿಯಲ್: ಕುಸುಮಾ ಸೀರೆ ಕಾಣೆಯಾಗಿದೆ, ತಾಂಡವ್‌ ಎದೆ ತಾಳ ತಪ್ಪಿದೆ

Published : Oct 15, 2023, 07:34 PM ISTUpdated : Oct 15, 2023, 07:50 PM IST
ಭಾಗ್ಯಲಕ್ಷ್ಮೀ ಸೀರಿಯಲ್: ಕುಸುಮಾ ಸೀರೆ ಕಾಣೆಯಾಗಿದೆ, ತಾಂಡವ್‌ ಎದೆ ತಾಳ ತಪ್ಪಿದೆ

ಸಾರಾಂಶ

ಮನೆಯವರ ಚರ್ಚೆಯಲ್ಲಿ ಆ ಸೀರೆ ಎಲ್ಲಿ ಹೋಗಿದೆ, ಯಾರ ಬಳಿ ಎಂಬ ನಿಖರ ಉತ್ತರವಿಲ್ಲ. ಅವರೆಲ್ಲ ತಾಂಡವ್‌ ಮೇಲೆ ಅನುಮಾನ ಪಡುತ್ತಾರೆ. ಆದರೆ, ತಾಂಡವ್‌ ಅಪರಾಧಿ ಎಂದು ಹೇಳಲು ಅವರ ಬಳಿ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ತಾಂಡವ್‌ ಸದ್ಯಕ್ಕೆ ಬಚಾವ್ ಆಗಿದ್ದಾನಷ್ಟೇ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಈಗ ಬರೋಬ್ಬರಿ ಒಂದು ವರ್ಷವಾಯ್ತು. ಅಂದರೆ ಭಾಗ್ಯಲಕ್ಷ್ಮೀ ಬರ್ತ್‌ಡೇ ಎನ್ನಬಹುದು. ಟಿಆರ್‌ಪಿ ರೇಸ್‌ನಲ್ಲಿ ಕೂಡ ಈ ಸೀರಿಯಲ್ ಟಾಪ್‌ 10 ಒಳಗೆ ಈಗಲೂ ಕಾಣಿಸಿಕೊಳ್ಳುತ್ತಿದೆ. ಸುಷ್ಮಾ ರಾವ್, ಪದ್ಮಜಾ ರಾವ್ ಮತ್ತು ಸುದರ್ಶನ್ (ತಾಂಡವ್) ಮೂವರ ಪಾತ್ರಗಳನ್ನೂ ವೀಕ್ಷಕರು ಹಾಡಿ ಹೊಗಳುತ್ತಿದ್ದಾರೆ. ಸೀರಿಯಲ್‌ನಲ್ಲಿ ಹೀರೋ ಆಗಿಯೂ ಪಾತ್ರವು ವಿಲನ್‌ ತರ ಇರುವ ತಾಂಡವ್‌ ಅಂತೂ ಟಿವಿ ವೀಕ್ಷಕರ ಅಚ್ಚುಮೆಚ್ಚಿನ ವಿಲನ್ ಎನ್ನಬಹುದೇನೋ!

ಇದೀಗ ಕುಸುಮಾ ಸೀರೆ ಕಾಣೆಯಾಗಿದೆ. "ನನ್ನ ಹಸಿರು ಸೀರೆ ಕಾಣೆಯಾಗಿದೆ. ಅದು ನಿಮ್ಮಪ್ಪ ತಮ್ಮ ಕೊನೆಯ ಸಂಬಳದಲ್ಲಿ ತಂದುಕೊಟ್ಟ ಸೀರೆಯಾಗಿತ್ತು. ಅದನ್ನು ನೀನು ಎಲ್ಲಾದ್ರೂ ನೋಡಿದ್ಯಾ? ಹುಡುಕಿ ಕೊಡ್ತೀಯಾ" ಎಂದು ಕುಸುಮಾ ತಾಂಡವ್‌ನನ್ನು ಕೇಳುವಳು. ತಾಂಡವ್ ಈ ಮಾತು ಕೇಳಿ ಕಕ್ಕಾಬಿಕ್ಕಿಯಾಗುವನು. ಏನೂ ಮಾತನಾಡದೇ ಗರಬಡಿದವನಂತೆ ನಿಲ್ಲುವನು. 

ಕುಸುಮಾಗೆ ಕೋಪ ಉಕ್ಕೇರುವುದು. "ನಿನ್ನತ್ರ ಸಾಧ್ಯ ಇಲ್ಲ ಅಂತ ಗೊತ್ತು. ನೀನು ನನ್ನ ಮುಂದೆ ನಿಲ್ಲಬೇಡ. ನಂಗೆ ನೀನು ಎದುರಿಗೆ ಇದ್ರೆ ಎಲ್ಲಾ ನೆನಪಾಗುತ್ತೆ. ಹೋಗು ಹೋಗು" ಎಂದು ತಾಂಡವ್‌ಗೆ ಗದರುತ್ತಾಳೆ. ಅದನ್ನು ಕೇಳಿಸಿಕೊಂಡ ತಾಂಡವ್‌ಗೆ ತಾನು ಆ ಸೀರೆಯನ್ನು ಸುಂದರಿಗೆ ಕೊಟ್ಟಿದ್ದು ನೆನಪಾಗುತ್ತದೆ. ಆದರೆ ಏನು ಮಾಡುವುದೀಗ ಎಂಬುದು ತಾಂಡವ್‌ಗೆ ಹೊಳೆಯುವುದಿಲ್ಲ. 

ಸುಂದರಿಗೆ ಸೀರೆ ಕೊಟ್ಟಿದ್ದು ನನ್ನ ಜೀವನಾನೇ ಹಾಳು ಮಾಡಿ ಬಿಡುತ್ತಾ? ಎಲ್ಲಾ ಸಂಗತಿ ಹೊರಗಡೆ ಬಂದು ನನ್ನ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಆಗುತ್ತಾ? ಇದಕ್ಕೆಲ್ಲಾ ಪರಿಹಾರ ಏನು? ಈ ಎಲ್ಲ ಚಿಂತೆಗಳು ತಾಂಡವ್ ಮನಸ್ಸಿನಲ್ಲಿ ಹರಿದಾಡತೊಡಗಿವೆ. ಅದೇ ಸಮಯಕ್ಕೆ ಸರಿಯಾಗಿ ಮನೆಯವರೆಲ್ಲಾ ಸೇರಿ ಆ ಸೀರೆಯ ಬಗ್ಗೆಯೇ ಮಾತನಾಡತೊಡಗುತ್ತಾರೆ. 

ಆದರೆ, ಮನೆಯವರ ಚರ್ಚೆಯಲ್ಲಿ ಆ ಸೀರೆ ಎಲ್ಲಿ ಹೋಗಿದೆ, ಯಾರ ಬಳಿ ಎಂಬ ನಿಖರ ಉತ್ತರವಿಲ್ಲ. ಅವರೆಲ್ಲ ತಾಂಡವ್‌ ಮೇಲೆ ಅನುಮಾನ ಪಡುತ್ತಾರೆ. ಆದರೆ, ತಾಂಡವ್‌ ಅಪರಾಧಿ ಎಂದು ಹೇಳಲು ಅವರ ಬಳಿ ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ತಾಂಡವ್‌ ಸದ್ಯಕ್ಕೆ ಬಚಾವ್ ಆಗಿದ್ದಾನಷ್ಟೇ!
 
ಆದರೆ ಭಾಗ್ಯಾಗೆ ಆ ಸೀರೆಯನ್ನು ತಾನು ಪೊಲೀಸ್‌ ಸ್ಟೇಷನ್ನಿನಲ್ಲಿ ನೋಡಿದ್ದು ನೆನಪಾಗುತ್ತದೆ. 'ನಾನು ಆ ಸೀರೆಯನ್ನು ಪೊಲೀಸ್ ಸ್ಟೇಷನ್ನಿನಲ್ಲಿ ನೋಡಿದ್ದೇನೆ. ಆ ಕಳ್ಳಿಯೇ ಅದನ್ನೂ ಕದ್ದಿದ್ದಾಳೆ. ಕೈಗೆ ಸಿಕ್ಕ ಯಾವುದನ್ನೂ ಬಿಡಲಿಲ್ಲ ಕಳ್ಳಿ" ಎಂದು ತಾಂಡವ್‌ ಎದುರಲ್ಲೇ ಕಳ್ಳಿಯನ್ನು ಬಾಯಿಗೆ ಬಂದಂತೆ ಬಯ್ಯುತ್ತಾಳೆ. ಅವಳಮ್ಮ ಕೂಡ ತಾನೂ ಆ ಸೀರೆಯನ್ನು ಪೊಲೀಸ್ ಸ್ಟೇಷನ್ನಿನಲ್ಲಿ ನೋಡಿದ್ದಾಗಿ ಹೇಳುತ್ತಾಳೆ. ತಾಂಡವ್ ಎದೆಬಡಿತ ತಾಳತಪ್ಪುತ್ತಿದೆ. ತಾಂಡವ್ ಗಾಬರಿ ನೋಡಿ ಮನೆಯವರೆಲ್ಲರಿಗೆ ಅವನ ಮೇಲಿನ ಅನುಮಾನ ಹೆಚ್ಚಾಗುತ್ತಿದೆ. 

ಅಂದಹಾಗೆ, ಭಾಗ್ಯಲಕ್ಷ್ಮೀ ಸೀರಿಯಲ್ ಕಲರ್ಸ್‌ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ ಪ್ರಸಾರ ಕಾಣುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?