ಬಿಗ್ ಬಾಸ್‌ ನಿರ್ಧಾರ ಒಪ್ಪಿದೆ, ಆದರೆ ಈ ರೀತಿ ಅಂತ್ಯವಾಗಿದ್ದಕ್ಕೆ ಬೇಸರವಿದೆ: ಗೀತಾ ಭಾರತಿ ಭಟ್

By Suvarna NewsFirst Published May 11, 2021, 11:29 AM IST
Highlights

ಕೊರೋನಾ ಲಾಕ್‌ಡೌನ್‌ನಿಂದ ಬಿಗ್ ಬಾಸ್‌ ರಿಯಾಲಿಟಿ ಶೋ ಅರ್ಧಕ್ಕೆ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಎಲಿಮಿನೇಟ್ ಆಗಿ ಹೊರ ಬಂದ ಗೀತಾ ಭಾರತಿ ಭಟ್‌ ಮಾತನಾಡಿದ್ದಾರೆ. 
 

ಕನ್ನಡ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಅನ್ನು ಅರ್ಧಕ್ಕೇ ಮುಕ್ತಾಯ ಮಾಡುವ ಪರಿಸ್ಥಿತಿ ಎದುರಾಗಿದೆ. ಕೊರೋನಾ ಎರಡನೇ ಅಲೆ ಭೀಕರ ಪರಿಣಾಮ ಬೀರುತ್ತಿರುವ ಕಾರಣ ಕರ್ನಾಟಕ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಕನ್ನಡ ಚಿತ್ರರಂಗ ಸ್ವಯಂ ಲಾಕ್‌ಡೌನ್‌ ಮಾಡಿಕೊಂಡರೂ, ಕಿರುತೆರೆ ಧಾರಾವಾಯಿ ಹಾಗೂ ಇತರೆ ಕೆಲಸಗಳು ಮುಂದುವರೆಯುತ್ತಿದ್ದವು. ಇದೀಗ ಟೆಲಿವಿಷನ್‌ ಅಸೋಸಿಯೇಷನ್‌ ಕೂಡ ಚಿತ್ರೀಕರಣ ರದ್ದುಗೊಳಿಸಲು ನಿರ್ಧರಿಸಿದೆ.

ಈ ನಿರ್ಧಾರದಿಂದ 65 ಧಾರಾವಾಹಿಗಳು ಹಾಗೂ 3 ರಿಯಾಲಿಟಿ ಶೋಗೆ ಹೊಡೆತ ಬಿದ್ದಿದೆ. ಅದರಲ್ಲೂ ಹೆಚ್ಚಿನ ತಂತ್ರಜ್ಞರು ಕೈ ಜೋಡಿಸಿ ನಡೆಸುತ್ತಿದ್ದ ಬಿಗ್ ಬಾಸ್‌ ರಿಯಾಲಿಟಿ ಶೋ ಸಂಕಷ್ಟದಲ್ಲಿದೆ. ನೂರಾರು ತಂತ್ರಜ್ಞರಿಗೆ ಕೆಲಸ ಇಲ್ಲದಂತಾಗಿದೆ. ಸುಮಾರು 71 ದಿನಗಳನ್ನು ಪೂರೈಸಿದ ನಂತರ ಬ್ರೇಕ್ ಹಾಕುವುದು ಅನಿವಾರ್ಯವಾಗಿದೆ. ಈ ವಿಚಾರದ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಗೀತಾ ಭಾರತಿ ಭಟ್ ಮಾತನಾಡಿದ್ದಾರೆ. 

BBK8: 3ನೇ ವಾರ ಮನೆಯಿಂದ ಗೀತಾ ಭಾರತಿ ಭಟ್ ಔಟ್; ಕಣ್ಣೀರು ನಿಜವೇ? 
 

'ಇದು ಬೇಸರವಾಗುವ ಸುದ್ದಿ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಈ ನಿರ್ಧಾರ ಸರಿ ಅನಿಸುತ್ತದೆ. ತೆರೆ ಹಿಂದೆ ಸಾವಿರಾರು ಮಂದಿ ಕೆಲಸ ಮಾಡುತ್ತಿರುತ್ತಾರೆ. ಪ್ರತಿಯೊಬ್ಬರ ಜೀವವೂ ಮುಖ್ಯ. ಬಿಗ್ ಬಾಸ್‌ ತೆಗೆದುಕೊಂಡಿರುವ ನಿರ್ಧಾರ  ಒಪ್ಪಿಕೊಳ್ಳುವೆ. ಆದರೆ ಸರಿಯಾದ ರೀತಿಯಲ್ಲಿ ಅಂತ್ಯವಾಗಬೇಕಿತ್ತು. ಈ ಸೀಸನ್‌ನ ತುಂಬಾ ಜಾಗೃತೆಯಿಂದಲೇ ನಡೆಸುತ್ತಿದ್ದರು. ಕೊರೋನಾದಿಂದ ಮೂರು ತಿಂಗಳು ತಡವಾಗಿ ಆರಂಭವಾಗಿದ್ದು. ಹೊರಗಿನ ಪರಿಸ್ಥಿತಿ ನೋಡಿದರೆ  ನಾವು ಒಂದು ಮನೆಯಲ್ಲಿ ಎಷ್ಟು ಜಾಗೃತೆಯಿಂದ ಇದ್ದರೂ ತೊಂದರೆ ಆಗುತ್ತದೆ. ಕಳೆದ ವರ್ಷ ಮಲಯಾಳಂ ಬಿಗ್ ಬಾಸ್‌ ಕೂಡ ರದ್ದು ಮಾಡಲಾಗಿತ್ತು. ಎಲ್ಲರೂ ಹೊರ ಬಂದು ಫ್ಯಾಮಿಲಿ ಜೊತೆ ಸಮಯ ಕಳೆದು, ಸೆಟಲ್ ಆದ ನಂತರ ನಾನು ಸಂಪರ್ಕಿಸುತ್ತೇನೆ,' ಎಂದು ಗೀತಾ ಮಾತನಾಡಿದ್ದಾರೆ.

click me!