ಎಲ್ಲರಿಗೂ ಸೀಕ್ರೆಟ್ ಟಾಸ್ಕ್; ಬೇಕಂತಲೇ ವೈಷ್ಣವಿ ಮೇಲೆ ಟೀ ಚೆಲ್ಲಿದ ರಘು ಗೌಡ!

Suvarna News   | Asianet News
Published : Jul 06, 2021, 12:54 PM IST
ಎಲ್ಲರಿಗೂ ಸೀಕ್ರೆಟ್ ಟಾಸ್ಕ್; ಬೇಕಂತಲೇ ವೈಷ್ಣವಿ ಮೇಲೆ ಟೀ ಚೆಲ್ಲಿದ ರಘು ಗೌಡ!

ಸಾರಾಂಶ

2000 ಪಾಯಿಂಟ್ಸ್ ಪಡೆಯುವುದಕ್ಕೆ ಏನೆಲ್ಲಾ ಮಾಡಬೇಕು ನೋಡಿ? ಒಬ್ಬೊಬ್ಬರ ಪಚೀತಿ ಕೇಳೋಕೇ ಆಗೋಲ್ಲ.... 

ಎರಡನೇ ಇನಿಂಗ್ಸ್, ಎರಡನೇ ವಾರದ ಎಲಿಮಿನೇಷನ್‌ ನಂತರ ಮನೆ ವಾತಾವರಣ ಬದಲಾಗಿದೆ. ಮುಂದಿನ ವಾರ ಕ್ಯಾಪ್ಟನ್ ಆಗಲು ಬಿಗ್‌ಬಾಸ್ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಇಬ್ಬರಿಗೆ ಮತ್ತೊಬ್ಬರ ಟಾಸ್ಕ್ ಏನೆಂದು ಗೊತ್ತಿಲ್ಲ. ಆದರೂ ಸಾಧಿಸಿ ಪ್ರತಿಯೊಬ್ಬರೂ 2000 ಪಾಯಿಂಟ್ಸ್ ಗಳಿಸಿದ್ದಾರೆ. 

ಯಾರಿಗೆ ಯಾವ ಸೀಕ್ರೆಟ್ ಟಾಸ್ಕ್ ಇತ್ತು?
ದಿವ್ಯಾ ಸುರೇಶ್: ಯಾವುದೇ ಬಬ್ಬ ಸದಸ್ಯನ ಬಟ್ಟೆಯನ್ನು ಪಡೆದುಕೊಂಡು, ನೀವು ಅದನ್ನು ಧರಿಸಬೇಕು. (ಅವರು ಧರಿಸಿರುವ ಬಟ್ಟೆಯನ್ನು ಹೊರತುಪಡಿಸಿ).

ಚಕ್ರವರ್ತಿ:  ಯಾವುದೇ ಒಬ್ಬ ಸದಸ್ಯ ಕುಳಿತಿರುವ ಸ್ಥಳದಿಂದ ಅವರ ಮನ ಒಲಿಸಿ, ಎಬ್ಬಿಸಿ, ಆ ಸ್ಥಳದಲ್ಲಿ ಕೂರಬೇಕು. ಮತ್ತು ಅವರನ್ನು ನಿಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳಬೇಕು.

ಪ್ರಿಯಾಂಕಾ: ಯಾವುದೇ ಸದಸ್ಯರು ಧರಿಸಿರುವ ಎರಡೂ ಚಪ್ಪಲಿ ಅಥವಾ ಶೂ ಅನ್ನು ಕೇಳಿ ನೀವು ಒಮ್ಮೆ ಧರಿಸಬೇಕು.

ಇಬ್ಬರ ಬಿಟ್ಟು ಎಲ್ಲರೂ ನಾಮಿನೇಟ್, 'ಅವನ' ಜೀವನ ಚೆನ್ನಾಗಿರ್ಬೇಕು ಎಂದ ವೈಷ್ಣವಿ 

ಮಂಜು ಪಾವಗಡ: 4 ಜನ ಇತರೆ ಸದಸ್ಯರ ನೀರಿನ ಬಾಟಲಿಯಿಂದ ನೀರು ಕುಡಿಯಬೇಕು. ಇದು ಆ ಸದಸ್ಯನ  ಮುಂದೆಯೇ ನಡೆಯಬೇಕು.

ಪ್ರಶಾಂತ್: ಯಾವುದೇ ಒಬ್ಬ ಸದಸ್ಯನನ್ನು ನಿಮ್ಮ ತೊಡೆ ಮೇಲೆ ಒಮ್ಮೆ ಮಲಗಿಸಿಕೊಳ್ಳಬೇಕು.

ರಘು ಗೌಡ: ಯಾವುದೇ ಒಬ್ಬ ಸದಸ್ಯ ಧರಿಸಿರುವ ಅಂಗಿ/ಟಾಪ್/ಪ್ಯಾಂಟ್ ಹೀಗೆ ಯಾವುದೇ ಒಂದು ಒಟ್ಟೆಯನ್ನು ಬದಲಾಯಿಸುವಂತೆ ಮಾಡಬೇಕು.

ಶಮಂತ್:  ಯಾವುದೇ ಸದಸ್ಯನನ್ನು ಕೈ ತೊಳೆಯುವಂತೆ ಮಾಡಬೇಕು. ನೆನಪಿರಲಿ ಇದು ಊಟ/ತಿಂಡಿ ಆದ ಬಳಿಕ ಸಹಜವಾಗಿ ತೊಳೆಯುವುದು ಆಗಿರಬಾರದು.

ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ಪ್ರಿಯಾಂಕಾ ಕೋಪಕ್ಕೆ ಬೆಚ್ಚಿಬಿದ್ದ ಸದಸ್ಯರು! 

ಅರವಿಂದ್: ಯಾವುದೇ ಒಬ್ಬ ಸದಸ್ಯನಿಗೆ ನಿಮ್ಮ ಕೈಲಿರುವ ಕಪ್‌ನಿಂದ ನೀರು/ ಕಾಫಿ/ ಟೀಯನ್ನು 2 ಸಿಪ್ ಕುಡಿಸಬೇಕು.

ಶುಭಾ ಪೂಂಜಾ: ಯಾವುದೇ ಸದಸ್ಯ ನಿಮ್ಮ ಪರವಾಗಿ ಬಿಗ್ ಬಾಸ್‌ಗೆ ಕ್ಯಾಮೆರಾ ಮುಂದೆ ನಿಂತು ಮನವಿಯೊಂದನ್ನು ಮಾಡುವಂತೆ ಮಾಡಬೇಕು.

ವೈಷ್ಣವಿ: ನಿಮ್ಮ ತಟ್ಟೆಯಿಂದ ಯಾವುದೇ ಇನ್ನೊಬ್ಬ ಸದಸ್ಯನ ತಟ್ಟೆಗೆ 3 ತುತ್ತು ಹಾಕಬೇಕು. (3 ಬಾರಿ ಯಾವುದೇ ಪದಾರ್ಥವನ್ನು ಬೇಕಾದರೂ ವರ್ಗಾಯಿಸಬಹುದು)

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?