ಇಬ್ಬರ ಬಿಟ್ಟು ಎಲ್ಲರೂ ನಾಮಿನೇಟ್, 'ಅವನ' ಜೀವನ ಚೆನ್ನಾಗಿರ್ಬೇಕು ಎಂದ ವೈಷ್ಣವಿ

Published : Jul 05, 2021, 11:48 PM ISTUpdated : Jul 05, 2021, 11:51 PM IST
ಇಬ್ಬರ ಬಿಟ್ಟು ಎಲ್ಲರೂ ನಾಮಿನೇಟ್, 'ಅವನ' ಜೀವನ ಚೆನ್ನಾಗಿರ್ಬೇಕು ಎಂದ ವೈಷ್ಣವಿ

ಸಾರಾಂಶ

* ಬಿಗ್ ಬಾಸ್ ಮನೆಯಲ್ಲಿ ನಾಮಿನೇಶನ್ ಪರ್ವ * ಮನೆ ಮಂದಿಗೆಲ್ಲ ನಾಮಿನೇಶನ್ ಬಿಸಿ * ಶುಭಾ  ಮತ್ತು ದಿವ್ಯಾ ಯು ಮಾತ್ರ ಸೇಫ್ * ಚಕ್ರವರ್ತಿ ಮತ್ತು ವೈಷ್ಣವಿ ನಡುವೆ ಮದುವೆ ಮಾತುಕತೆ!

ಬೆಂಗಳೂರು(ಜು.  05)  ಬಿಗ್ ಬಾಸ್ ಮನೆಯಲ್ಲಿ ಮನೆ ಮಂದಿಯೆಲ್ಲ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ದಿವ್ಯಾ ಯು ಮತ್ತು ಶುಭಾ ಪುಂಜಾ ನಾಮಿನೇಶನ್ ನಿಂದ ಬಚಾವಾಗಿದ್ದಾರೆ. ಅರವಿಂದ್, ಮಂಜು, ಶಮಂತ್, ಸಂಬರಗಿ, ಚಕ್ರವರ್ತಿ, ರಘು, ವೈಷ್ಣವಿ, ದಿವ್ಯಾ ಸುರೇಶ್, ಪ್ರಿಯಾಂಕಾ ನಾಮಿನೇಟ್ ಆಗಿದ್ದಾರೆ.

ಅರವಿಂದ್ ಗೆ ಮುಳುವಾದ ನಿಧಿ ಸುಬ್ಬಯ್ಯ; ನಿಧಿ ಸುಬ್ಬಯ್ಯ ಮನೆಯಿಂದ ಹೊರ ಹೋಗುವಾಘ ಅರವಿಂದ್ ಅವರನ್ನು ನೇರವಾಗಿ  ನಾಮಿನೇಟ್ ಮಾಡಿದ್ದರು. ಅರವಿಂದ್ ಜತೆ ಚೆನ್ನಾಗಿರುವ ದಿವ್ಯಾ ಯು ಮನೆಯ ನಾಯಕರಾಗಿದ್ದರೂ ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿದವರನ್ನು ಹೊರತುಪಡಿಸಿ ಯಾರೊಬ್ಬರನ್ನು ಉಳಿಸಬೇಕು ಎಂದು ಆದೇಶ ಇತ್ತರು. ದಿವ್ಯಾ ಯು ಶುಭಾ ಅವರನ್ನು ಸೇವ್ ಮಾಡಿಕೊಂಡರು.

ಪ್ರಿಯಾಂಕಾ ಕೋಪಕ್ಕೆ ಬೆಚ್ಚಿದ ಮನೆಮಂದಿ

ಬಿಗ್ ಬಾಸ್ ಎರಡನೇ ಇನಿಂಗ್ಸ್ ಸಿಕ್ಕಾಪಟ್ಟೆ ಕಾವು ಏರಿದ್ದು ತಿಕ್ಕಾಟ ನಡೆಯುತ್ತಲೇ ಇದೆ. ಸಿಕ್ರೆಟ್ ಟಾಸ್ಕ್ ಕೊಟ್ಟ ಬಿಗ್ ಬಾಸ್ ಮನೆ ಮಂದಿಗೆ ಪಾಯಿಂಟ್ ಕೊಟ್ಟಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ನೋಡಬೇಕಿದೆ.

ಬಿಗ್ ಬಾಸ್ ಫಿನಾಲೆ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು ಟಾಸ್ಕ್ ಗಳ ಜತೆ ಬ್ಯಾಲೆನ್ಸ್ ವರ್ತನೆ  ತೋರಿಸಲು ಹೆಣಗುತ್ತಿದ್ದಾರೆ.  ಮದುವೆ ವಿಚಾರದಲ್ಲಿ ವೈಷ್ಣವಿ ಅವರನ್ನು ಚಕ್ರವರ್ತಿ ಕೆದಕಲು ಮುಂದಾದಾಗ ವೈಷ್ಣವಿ ಸ್ಪಷ್ಟ ಉತ್ತರ ನೀಡಿ ಆ ವಿಷಯ ಮಾತನಾಡಬೇಡಿ ಎಂದು ಖಡಾಖಂಡಿತವಾಗಿ ಹೇಳಿದರು.  ಒಂದು ಸಲ ಮದುವೆಯಾದ ಮೇಲೆ ಮೋಸ ಮಾಡಲ್ಲ ಎಂದು ವೈಷ್ಣವಿ ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!