
ಬಿಗ್ ಬಾಸ್ ಸೀಸನ್ 8ರ ಸ್ಟ್ರಾಂಗ್ ಸ್ಪರ್ಧಿ ರಾಜೀವ್ ಎಲಿಮಿನೇಟ್ ಆದ ಅದೆಷ್ಟೋ ದಿನಗಳ ಕಾಲ ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿ ಇರಬಹುದು ಅಥವಾ ಮತ್ತೆ ರೀ-ಎಂಟ್ರಿ ಕೊಡಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಆದರೀಗ ಕಾರ್ಯಕ್ರಮ ರದ್ದಾಗಿರುವ ವಿಚಾರ ಕೇಳಿ ಬರುತ್ತಿದ್ದಂತೆ, ರಾಜೀವ್ ಖಾಸಗಿ ವಾಹಿನಿಯ ಸಂದರ್ಶನಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಸ್ಪರ್ಧಿಗಳು; ಕೊನೆ ಸಂಚಿಕೆ ಇಂದು, ನಾಳೆ!
ಸುಮಾರು 50 ದಿನಗಳ ಕಾಲ ಮನೆಯಲ್ಲಿದ್ದ ರಾಜೀವ್ ಬಿಬಿ ಶೋ ಬಗ್ಗೆ ಮಾತನಾಡಿದ್ದಾರೆ. 'ಇದ್ದಕ್ಕಿದ್ದಂತೆ ಶೋ ರದ್ದಾಗುತ್ತಿರುವುದನ್ನು ಕೇಳಿ ಬೇಸರವಾಗುತ್ತಿದೆ. ಜೀವನದಲ್ಲಿ ಒಳ್ಳೆಯ ಹೆಸರು ಮಾಡಲು ಸಿಕ್ಕ ವೇದಿಕೆ ಇದು. 100 ದಿನಗಳ ಕಾಲ ಕ್ಯಾಮೆರಾ ಹಿಂದೆ ಕೆಲಸ ಮಾಡುತ್ತಿದ್ದವರ ಪರಿಸ್ಥಿತಿ ಹೇಗಿರಬೇಕು? ನಾನು ಎಲಿಮಿನೇಟ್ ಆಗಿರುವುದರ ಬಗ್ಗೆ ನನಗೆ ಬೇಸರವಿದೆ. ಆದರೆ ಈಗ ಶೋನೇ ರದ್ದಾಗುತ್ತಿರುವುದು ಕೇಳಿ ಶಾಕ್ ಆಗಿದ್ದೀನಿ. ಮನೆಯಲ್ಲಿರುವ ಸ್ಪರ್ಧಿಗಳಿಗೂ ಹೀಗೇ ಫೀಲ್ ಆಗುತ್ತಿರುತ್ತೆ. ಸರಿಯಾದ ರೀತಿಯಲ್ಲಿ ಶೋ ಅಂತ್ಯವಾಗಬೇಕಿತ್ತು, ವೇದಿಕೆ ಮೇಲೆ ವಿಜೇತರನ್ನು ಘೋಷಿಸಿದರೆ, ಅಲ್ಲಿ ಆಗುತ್ತಿದ್ದ ಖುಷಿಯೇ ಬೇರೆ. ಆದರೆ ಮನೆಯಿಂದ ಹೊರ ಆಗುತ್ತಿರುವ ತೊಂದರೆ ಯಾರಿಂದಲೂ ಸರಿ ಮಾಡಲು ಆಗುವುದಿಲ್ಲ. ಸತ್ಯ ಒಪ್ಪಿಕೊಂಡು ಮುಂದೆ ನಡೆಯಬೇಕು,' ಎಂದು ರಾಜೀವ್ ಹೇಳಿದ್ದಾರೆ.
"
'ಈಗಲೂ ಶೋನಲ್ಲಿ ನಾನೇ ಬೆಸ್ಟ್ ಸ್ಪರ್ಧಿ ಎಂದು ನನಗೇ ಎನಿಸುತ್ತಿದೆ. ಟ್ರೋಫಿ ಪಡೆಯುವ ಸಾಮರ್ಥ್ಯವಿದೆ. ನಾನು ಯಾಕೆ ಎಲಿಮಿನೇಟ್ ಆದೆ ಅಂತಾನೇ ತಿಳಿಯುತ್ತಿಲ್ಲ. ಇವತ್ತಿಗೂ ಅಭಿಮಾನಿಗಳು ಮೆಸೇಜ್ ಮಾಡಿ ಕೇಳುತ್ತಾರೆ. ಅವರಿಗೆ ಉತ್ತರಿಸಲು ನನಗೇ ಉತ್ತರ ಸಿಕ್ಕಿಲ್ಲ. ನಾನು ಒಂದು ವಾರಗಳ ನಂತರ ಮತ್ತೆ ಮನೆಗೆ ರೀ-ಎಂಟ್ರಿ ಆಗುತ್ತೇನೆ ಎಂಬ ಭಾವನೆ ಇತ್ತು. ಈ ಶೋ ಅಂತ್ಯವಾಗುತ್ತಿರುವ ಕಾರಣ ನನ್ನ ಕನಸು ನನಸಾಗಲಿಲ್ಲ. ಇದೆಲ್ಲದಕ್ಕಿಂತ ನಾನು ಹೊರ ಬಂದ ನಂತರ ಸುದೀಪ್ ಸರ್ ಜೊತೆ ವೇದಿಕೆ ಮೇಲೆ ನಿಂತು ಮಾತನಾಡಿಲ್ಲ. ಸರಿಯಾದ ಎಂಡಿಂಗ್/ ಬೈ ನನಗೆ ಸಿಕ್ಕಿಲ್ಲ ಅಂತಲೂ ಬೇಸರ ಇದೆ. ಎಲ್ಲ ಒಪ್ಪಿಕೊಳ್ಳುವೆ, ಇನ್ನು ಮುಂದೆ ನನ್ನ ವೃತ್ತಿ ಜೀವನ ರೂಪಿಸಿಕೊಳ್ಳಬೇಕು. ಒಳ್ಳೆ ಸಿನಿಮಾ ಮಾಡಬೇಕು. ಈಗಾಗಲೇ ನಿರ್ದೇಶಕರ ಜೊತೆ ಮಾತುಕತೆ ಆರಂಭಿಸಿರುವೆ. ಲಾಕ್‌ಡೌನ್ ನಂತರ ಅನೌನ್ಸ್ ಮಾಡುವೆ,' ಎಂದಿದ್ದಾರೆ ರಾಜೀವ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.