ಪ್ರಶಾಂತ್ ಸಂಬರಗಿ ಕಿತ್ತೂರು ವಂಶಸ್ಥರಾಗಿ ಹೆಣ್ಣಿಗೆ ಗೌರವ ಕೊಡಿ: ಮಂಜು ಪಾವಗಡ

By Suvarna NewsFirst Published Jun 25, 2021, 4:00 PM IST
Highlights

ನಾಮಿನೇಷನ್‌ ವೇಳೆ ಪ್ರಶಾಂತ್ ಹಾಗೂ ಚಕ್ರವರ್ತಿ ಚಂದ್ರಚೂಡ್‌ರನ್ನು ತರಾಟೆಗೆ ತೆಗೆದುಕೊಂಡ ಮಂಜು ಪಾವಗಡ.
 

ಬಿಗ್‌ ಬಾಸ್‌ ಸೀಸನ್‌ 8ರ ಸ್ಪರ್ಧಿಗಳು ಎರಡನೇ ಇನಿಂಗ್ಸ್ ಆಡಲು ಪ್ಲಾನ್ ಮಾಡಿಕೊಂಡು ಬಂದಿರುವ ಹಾಗಿದೆ. ಯಾವುದೇ ವಿಚಾರದ ಬಗ್ಗೆ ಚರ್ಚೆ ನಡೆದರೂ ಹೊರಗೆ ಆ ವ್ಯಕ್ತಿಗಳು ಹೇಗಿದ್ದರು, ಬೆನ್ನ ಹಿಂದೆ ಏನೆಲ್ಲಾ ಮಾತನಾಡಿಕೊಂಡರು ಎಂದು ಹೇಳುತ್ತಾರೆ. ಈ ವಾರದ ನಾಮಿನೇಷನ್ ನಡೆದಿರುವುದು ಬೆನ್ನ ಹಿಂದೆ ಮಾತನಾಡಿರುವ ಮಾತುಗಳಿಂದಲೇ.

ಸಂಚಾರಿ ವಿಜಯ್‌ ಉಳಿಸಿಕೊಳ್ಳಲು ಸುದೀಪ್‌ ಪಟ್ಟ ಪ್ರಯತ್ನದ ಬಗ್ಗೆ ಹೇಳಿದ ಚಕ್ರವರ್ತಿ ಚಂದ್ರಚೂಡ್! 

ಹೌದು! ಈ ಸಲ ನಾಮಿನೇಷನ್‌ ವೇಳೆ ಮಂಜು ಪಾವಗಡ ಸಖತ್ ಸೀರಿಯಸ್ ಕಾರಣಗಳನ್ನು ನೀಡಿದ್ದಾರೆ. ಪ್ರಶಾಂತ್ ಸಂಬರಗಿಯನ್ನು ನಾಮಿನೇಟ್ ಮಾಡಿ ಕವಿ ಮಾತು ಹೇಳಿದ್ದಾರೆ. ' ಆಟ ಮುಗಿದ ನಂತರ ಅವನು ಹಳ್ಳಿ ಹುಡುಗ, ಐಡೆಂಟಿಟಿ ಆಗಿದ್ದಾನೆ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾನೆ ಅಂತ ಹೇಳಿದ್ದಾರೆ.  ಪ್ರಶಾಂತ್ ಅವರು ಕಿತ್ತೂರು ವಂಶಸ್ಥರು, ಅದಕ್ಕೆ ನಿಜಕ್ಕೂ ಖುಷಿ ಇದೆ ಆದರೆ ಅವರು ಹೆಣ್ಣಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಬೇರೆಯವರಿಗೆ ಮಾತನಾಡುವುದಕ್ಕೆ ಬರಲ್ಲ ಅಂತಲ್ಲ. ನಾನು ಹಳ್ಳಿ ಹುಡುಗನೇ, ಅದೇ ನನ್ನ ಐಡೆಂಟಿಟಿ, ನಾನು ಕಲಾವಿದನಾಗಿ 4 ವರ್ಷಗಳಿಂದ ಗುರುತಿಸಿಕೊಂಡಿರುವೆ. ನಿಮಗೆ ಏನು ಐಡೆಂಟಿಟಿ ಇದೆ?' ಎಂದು  ಪ್ರಶಾಂತ್‌ರನ್ನು ನಾಮಿನೇಟ್ ಮಾಡಿದ್ದಾರೆ. 

ಅಲ್ಲದೆ ದಿವ್ಯಾ ಮತ್ತು ಮಂಜು ಸ್ನೇಹದ ಬಗ್ಗೆ ಚಕ್ರವರ್ತಿ ಹೇಳಿರುವ ಮಾತುಗಳನ್ನು ಕೇಳಿ ಬೇಸರ ವ್ಯಕ್ತಪಡಿಸಿದ ಮಂಜು ಇದೇ ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದಾರೆ. ಮಗಳು ಅಂತ ಹೇಳುತ್ತಾರೆ ಆಮೇಲೆ ನೋಡಿದರೆ ಕಬನ್‌ಪಾರ್ಕ್‌ನಲ್ಲಿ ಇದ್ದಳು ಅಂತ ಹೇಳುತ್ತಾರೆ. ಅವಶ್ಯಕತೆ ಇಲ್ಲದೆ ಏನೇನೋ ಮಾತನಾಡಿ ವ್ಯಕ್ತಿತ್ವ ಕಳೆದುಕೊಳ್ಳುತ್ತಿದ್ದಾರೆ ಎಂದು ಚಕ್ರವರ್ತಿ ಬಗ್ಗೆ ಹೇಳಿದ್ದಾರೆ.

click me!