
ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟ ಸಂಚಾರಿ ವಿಜಯ್ ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿತ್ತು, ಸುದೀರ್ಘ ಚಿಕಿತ್ಸೆ ನೀಡಿದರೂ ಪ್ರತಿಕ್ರಿಯಿಸದ ಕಾರಣ ಅಂಗಾಂಗಗಳನ್ನು ದಾನ ಮಾಡಿ ನಿಧನರಾದರು.
ಕೊರೋನಾದಿಂದ ಕುಟುಂಬಸ್ಥರನ್ನು ಕಳೆದುಕೊಂಡ ದಿವ್ಯಾ ಉರುಡುಗ ಭಾವುಕ!
ಅಪಘಾತವಾದ ತಕ್ಷಣವೇ ಬನ್ನೇರುಘಟ್ಟದ ರಸ್ತೆಯಲ್ಲಿ ಅಫೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯಲ್ಲಿ ಬೆಡ್ ಇರಲಿಲ್ಲ ಹಾಗೂ, ಆಪರೇಷನ್ ನಡೆಯುತ್ತಿದ್ದ ಕಾರಣ ವಿಜಯ್‌ರನ್ನು ಮತ್ತೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಹೀಗಿರುಉವಾಗ ನಟ ಸುದೀಪ್ ಸಹಾಯದಿಂದ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದರು. ಈ ವಿಚಾರದ ಬಗ್ಗೆ ಬಿಗ್ ಬಾಸ್ ವೇದಿಕೆ ಮೇಲೆ ಚಕ್ರವರ್ತಿ ಮಾತನಾಡಿದ್ದಾರೆ.
'ನಿಮಗೆ ಧನ್ಯವಾದಗಳು. ನನ್ನ ಜೀವದ ಗೆಳೆಯನನ್ನು ನಾನು ಕಳೆದುಕೊಂಡೆ. 12 ವರ್ಷದ ಸುದೀರ್ಘ ಒಡನಾಡಿ ಅಪಘಾತಕ್ಕೀಡಾಗಿದ್ದಾನೆ ಎಂದು ಗೊತ್ತಾದ ಕೊಡಲೇ ಸ್ವೀಡಾಗಿ ಗೋಲ್ಡನ್ ಅವರ್‌ನಲ್ಲಿ ನೀವು ವಾಹನ ಮಾಡಿ ಕಳುಹಿಸಿದ್ರಿ. ಮನೆಯಲ್ಲಿದ್ದ ವೈದ್ಯರನ್ನು ಕರೆದುಕೊಂಡು ಹೋಗಿ ಅಪರೇಶನ್ ಮಾಡಿಸಿದ್ರಿ. ಬೆಳಗಿನ ಜಾವದವರೆಗೂ ಎಚ್ಚರವಿದ್ರಿ. ಸಂಚಾರಿ ವಿಜಯ್ ಅವರನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯತ್ನ ಪಟ್ಟಿರಿ. ಈ ಪ್ರಕೃತಿ ನಿಮಗೆ ಇನ್ನಷ್ಟು ಶಕ್ತಿ ಕೊಡಲಿ. ನಿಮಗೆ ಸಾಷ್ಟಾಂಗ ನಮಸ್ಕಾರಗಳು ಸರ್' ಎಂದು ಸುದೀಪ್ ಸಹಾಯದ ಬಗ್ಗೆ ಚಕ್ರವರ್ತಿ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.