
'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನೆ ಮಗಳು ಹಾಗೂ ಕನಸಿನ ಮಡಿದಿಯಾಗಿದ್ದ ವೈಷ್ಣವಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಕಾಲಿಟ್ಟಿದ್ದೇ ಇಟ್ಟಿದು ಸಣ್ಣ ವಯಸ್ಸಿನ ಹುಡುಗರಿಂದ ವಯಸ್ಕರವರೆಗೂ ಇಷ್ಟ ಆಗಿದ್ದಾರೆ. ಎಷ್ಟೇ ಕೋಪ ಬಂದರೂ ತಾಳ್ಮೆಯಿಂದ ಉತ್ತರಿಸಿ ಸೈಲೆಂಟ್ ಆಗಿ ಉಲ್ಟಾ ಹೊಡೆಯುತ್ತಾರೆ. ವೈಷ್ಣವಿ ಅವರ ಈ ಗುಣದ ಬಗ್ಗೆ ವೀಕೆಂಡ್ ಮಾತುಕತೆಯಲ್ಲಿ ಸುದೀಪ್ ಹೇಳಿದ್ದಾರೆ.
ಚಕ್ರವರ್ತಿ ಚಂದ್ರಚೂಡ್‌ರನ್ನು ತರಾಟೆಗೆ ತೆಗೆದುಕೊಂಡ ವೈಷ್ಣವಿ ಗೌಡ!
ಅಗ್ನಿಸಾಕ್ಷಿ ಧಾರಾವಾಹಿ ಚಿತ್ರೀಕರಣದ ವೇಳೆ ವೈಷ್ಣವಿ ಸೀರೆ ಧರಿಸುತ್ತಿದ್ದರು. ಎರಡು ಸೀರೆ ಯಾಕೆ ನಾವು ಹೇಳಿದ್ದು ಒಂದೇ ಸೀರೆ ಅಲ್ವಾ? ಎಂದು ನಿರ್ದೇಶಕರು ಪ್ರಶ್ನೆ ಮಾಡಿದರಂತೆ. ಆಗ ವೈಷ್ಣವಿ ಹೌದು ಮತ್ತೊಂದು ಸೀರೆ ಕೈಯಲ್ಲಿ ಇರುವುದು ಹೊಡೆಯೋಕೆ ಎಂದು ಉತ್ತರಿಸಿದ್ದಾರೆ. ವೈಷ್ಣವಿ ಯಾವಾಗಲೂ ರೇಷ್ಮೆ ಸೀರೆ ಇಟ್ಕೊಂಡು ಇರ್ತಾರೆ ಅವರು ಬಯ್ಯಲ್ಲ ಆದರೆ ರೇಶ್ಮೆ ಶಾಲಿನಲ್ಲಿ ಹಾಕಿ ಹಾಕಿ ಕೊಡ್ತಾ ಇರ್ತಾರೆ. ಸೈಲೆಂಟ್ ಆಗಿ ಬಯ್ಯುವ ವಿಷಯದಲ್ಲಿ ನಿಮಗೆ ಮೆಡಲ್ ಕೊಡಬೇಕು ಎಂದು ಸುದೀಪ್ ಹೇಳಿದ್ದಾರೆ.
ಧ್ಯಾನ, ಆಧ್ಯಾತ್ಮ, ಜೀವನ ಶೂನ್ಯ ಎಂದು ಮಾತನಾಡುವ ವೈಷ್ಣವಿ ಕೋಪ ಮಾಡಿಕೊಳ್ಳುವುದು ಕಡಿಮೆ. ಆದರೆ ಪದೇ ಪದೇ ಒಬ್ಬರಿಂದ ಕಿರಿಕಿರಿ ಆಗುತ್ತಿದ್ದರೆ ಸೈಲೆಂಟ್ ಅಗಿ ಉತ್ತರ ನೀಡುತ್ತಾರೆ. ಹೇಗೆ ಅಂದ್ರೆ ಬೈಯ್ದಂಗೂ ಆಗಬೇಕು, ಹೇಳಿದಂಗೂ ಆಗಬೇಕು ಆ ರೀತಿಯಲ್ಲಿ. ಬಹಳ ಕಡಿಮೆ ಮಂದಿ ಈ ಗುಣವನ್ನು ಗಮನಿಸಿರುವ ಕಾರಣ ಸುದೀಪ್ ವೀಕೆಂಡ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇನ್ಮೇಲೆ ವೈಷ್ಣವಿ ರೇಷ್ಮೆ ಸೀರೆ ಟ್ರಿಕ್ ಟ್ರೈ ಮಾಡೋದನ್ನು ಗಮನಿಸೋದು ಮರೆಯಬೇಡಿ....
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.