
ಬಿಗ್ ಬಾಸ್ ಸೀಸನ್ 8 ಫಿನಾಲೆ ವಾರ ನಡೆಯುತ್ತಿದೆ. ಈ ವಾರ ಯಾರು ಅತಿ ಹೆಚ್ಚು ವೋಟ್ ಪಡೆಯುತ್ತಾರೋ, ಅವರು ಫಿನಾಲೆ ಹಂತ ತಲುಪುತ್ತಾರೆ. ಇಲ್ಲವಾದರೆ ಮಿಡ್ ವೀಕ್ ಎಲಿಮಿನೇಷನ್‌ನಿಂದ ಹೊರ ಬರುತ್ತಾರೆ. ಫಿನಾಲೆ ವೀಕ್ ಖುಷಿ ಹಾಗೂ ಮೆನಯಿಂದ ಹೊರ ಹೋಗುವ ಭಯ ಎರಡೂ ಸಮನಾಗಿ ಎಂಜಾಯ್ ಮಾಡುತ್ತಿರುವ ಸ್ಪರ್ಧಿಗಳ ಪರ ಹೊರಗಿರುವ ಸಿನಿ ಸ್ನೇಹಿತರು ವೋಟ್‌ಗಾಗಿ ಅಪೀಲ್ ಮಾಡುತ್ತಿದ್ದಾರೆ.
ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದಿರುವ ದಿವ್ಯಾ ಉರುಡುಗ ಹಾಗೂ ಸ್ನೇಹಿತರು ಸೋಷಿಯಲ್ ಮೀಡಿಯಾದಲ್ಲಿ ವೋಟ್ ಅಪೀಲ್ ಮಾಡುತ್ತಿದ್ದಾರೆ. ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿನ್ನು ಅಲಿಯಾಸ್ ಕವಿತಾ ಗೌಡ ಕೂಡ ಪೋಸ್ಟ್ ಹಾಕುವ ಮೂಲಕ ವೋಟ್ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
'ಹಾಯ್ ಎಲ್ಲರಿಗೂ. ನನ್ನ ಆತ್ಮೀಯ ಸ್ನೇಹಿತೆ ದಿವ್ಯಾ ಉರುಡುಗ ಈಗ ಬಿಗ್ ಬಾಸ್‌ನಲ್ಲಿದ್ದಾರೆ. ಆಕೆ ತುಂಬಾ ಸ್ಟ್ರಾಂಗ್, ಔಟ್ ಸ್ಪೋಕನ್, ಚಾಲೆಂಜಿಂಗ್. ಪ್ರತಿ ಟಾಸ್ಕ್‌ನಲ್ಲಿಯೂ ಶ್ರಮ ಮೀರಿ ಸ್ಪರ್ಧಿಸುತ್ತಾಳೆ. ದಯವಿಟ್ಟು ಆಕೆಗೆ ಸಪೋರ್ಟ್ ಮಾಡಿ, ನಿಮ್ಮ ಪ್ರೀತಿ ತೋರಿಸಿ ವೋಟ್ ಮಾಡಿ. ಫಿನಾಲೆ ವೀಕ್‌ನಲ್ಲಿದ್ದಾಳೆ, ಫಿನಾಲೆ ತಲುಪಲು ಸಹಾಯ ಮಾಡಿ. ನನ್ನ ಕಡೆಯಿಂದ ಬೆಸ್ಟ್ ವಿಶ್,' ಎಂದು ಬರೆದುಕೊಂಡಿದ್ದಾರೆ.
'ತಕದಿಮಿ ತಕದಿಮಿ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕವಿತಾ ಗೌಡ ಹಾಗೂ ದಿವ್ಯಾ ಉರುಡುಗ ಒಟ್ಟಿಗೆ ಕೆಲಸ ಮಾಡಿದ್ದಾರೆ. ಇಬ್ಬರೂ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದು ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.