
ಡೈರೆಕ್ಟ್ ನಾಮಿನೇಷನ್‌ನಿಂದ ಎಸ್ಕೇಪ್ ಆಗಲು ಇಡೀ ವಾರ ವಿಭಿನ್ನವಾದ ಟಾಸ್ಕ್ ನೀಡಲಾಗಿದೆ. ನಿನ್ನೆ ನೀಡಲಾಗಿದ್ದ ಟಾಸ್ಕ್‌ನಲ್ಲಿ ಪ್ರತಿಯೊಬ್ಬ ಸದಸ್ಯನೂ 3 ವಿಚಾರಗಳನ್ನು ಹೇಳಬೇಕು. ಅದರಲ್ಲಿ ಒಂದು ಸುಳ್ಳು, ಎರಡು ಸತ್ಯ ಆಗಿರಬೇಕು. ಈ ವೇಳೆ ಚಕ್ರವರ್ತಿ ಹೇಳಿದ ಮೂರು ವಿಚಾರವೂ ಎದುರಾಳಿಗೆ ಶಾಕ್ ನೀಡಿತ್ತು.
'ಕೆಂಪೇಗೌಡ ಪ್ರಶಸ್ತಿ ಪಡೆಯಲು ನನ್ನ ತಾಯಿಯವರನ್ನು ಕರೆದುಕೊಂಡು ಹೋಗಿದ್ದೆ. ಅಂತರಾಜ್ಯ ಹಾಕಿ ಆಡುತ್ತಿದ್ದೆ. ಅದರಲ್ಲಿ ಪ್ರಶಸ್ತಿ ಪಡೆದಿದ್ದೆ, ಚಾಮರಾಜನಗರದಲ್ಲಿ ಊರಿನ ಬಸ್ಟ್ ಸ್ಟ್ಯಾಂಡ್‌ನಲ್ಲಿ ಮೂಟೆ ಹೋರುವ ಕೆಲಸ ಮಾಡಿ, ಜೀವನ ಮಾಡುತ್ತಿದ್ದೆ,' ಎಂಬ ಮೂರು ವಿಚಾರಗಳನ್ನು ಹೇಳಿದ್ದಾರೆ. ಚಕ್ರವರ್ತಿ ನಿಜಕ್ಕೂ ಹಾಕಿ ಪ್ಲೇಯರ್ ಆಗಿದ್ದರೆ, ಈಗಾಗಲೆ ನೂರು ಸಲ ಎಲ್ಲರ ಎದುರು ಹೇಳಿಕೊಂಡು ಓಡಾಡುತ್ತಿದ್ದರು ಇದು ಸುಳ್ಳು ಎಂದು ಪ್ರಿಯಾಂಕಾ ಹೇಳುತ್ತಾರೆ. ಅದನ್ನು ಎಲ್ಲರೂ ನಂಬಿ ಇದು ಸುಳ್ಳು ಎಂದೇ ಉತ್ತರಿಸುತ್ತಾರೆ. ಆ ನಂತರ ಚಕ್ರವರ್ತಿ ಸ್ಪಷ್ಟನೆ ನೀಡುತ್ತಾರೆ.
'ಕಾಲೇಜು ದಿನಗಳಿಂದ ನಾನು ಹಾಕಿ ಆಡುತ್ತಿದ್ದೇನೆ. ನಾನು ತುಂಬಾ ಒಳ್ಳೆಯ ಹಾಕಿ ಆಟಗಾರ. ನಾನು ಮೂಲತಃ ಮಲೆನಾಡಿನ ಸಕಲೇಶ್ವರಪುರದಲ್ಲಿ ಬೆಳೆದವನು. ಹಾಕಿ ನಮ್ಮ ಮನೆತನದ ಆಟ, ನಮ್ಮ ಕುಟುಂಬದ ಆಟ. ಬೆಂಗಳೂರು ಮಹಾನಗರ ಪಾಲಿಕೆ ನಾನಾ ರಾಜಕೀಯ ಕಾರಣಗಳಿಗೆ ನನಗೆ ಕೆಂಪೇಗೌಡ ಪ್ರಶಸ್ತಿ ಕೊಡಲಿಲ್ಲ.ಭಿಕ್ಷುಕರಾಗಿ ಹೋಗಿ ದೇವಸ್ಥಾನಗಳ ಮುಂದೆ ಹೋಗಿ ಭಿಕ್ಷೆ ಬೇಡಬೇಕಾಗತ್ತೆ, ಚಪ್ಪಲಿ ಹೊಲೆಯಬೇಕಾಗುತ್ತದೆ, ಮೂಟೆ ಹೊರಬೇಕಾಗತ್ತೆ, ಜಗತ್ತು ಯಾವುದನ್ನು ಕೀಳು ಅಂದುಕೊಳ್ಳುತ್ತೋ ಅದನ್ನು ಮಾರುವೇಷದಲ್ಲಿ ಹೋಗಿ ಮಾಡಬೇಕಾಗತ್ತೆ,' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.