ಮತ್ತೆ ಧಾರಾವಾಹಿ ಪ್ರಸಾರಕ್ಕೆ ವಿಘ್ನೆ. ಚಿತ್ರೀಕರಣದ ವೇಳೆ ನಟಿ ತಲೆಗೆ ಪೆಟ್ಟು.
ಕಿರುತೆರೆ ಲೋಕದಲ್ಲಿ ಇದೀಗ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದೆ. ಆರ್ಯವರ್ಧನ್ ಸಾಲಿಗೆ ದಿಲೀಪ್ ರಾಜ್ ಸೇರಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಧಾರಾವಾಹಿ ಪ್ರಸಾರಕ್ಕೆ ವಾಹಿನಿ ತಂಡ ಹಾಗೂ ವೀಕ್ಷಕರು ಕಾಯುತ್ತಿದ್ದಾರೆ. ಪ್ರಸಾರದ ದಿನಾಂಕ ಹಾಗೂ ಪ್ರೋಮೋ ಕೂಡ ರಿವೀಲ್ ಮಾಡಲಾಗಿತ್ತು ಆದರೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು! ಜುಲೈ 19ರಂದು 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಆರಂಭವಾಗಬೇಕಿತ್ತು. ಆದರೆ ಚಿತ್ರೀಕರಣದ ವೇಳೆ ನಟಿಗೆ ಅಪಘಾತವಾಗಿ ಮತ್ತೆ ಪ್ರಸಾರ ದಿನಾಂಕವನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ದೃಶ್ಯವೊಂದರ ಚಿತ್ರೀಕರಣ ವೇಳೆ ಸ್ಕೂಟಿಯಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಚಾರದ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರ ಬಂದ ಅನು ಸಿರಿಮನೆ?
ಅಲ್ಲದೇ ಧಾರಾವಾಹಿಯಲ್ಲಿ ನಾಲ್ಕು ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ನಟಿಯ ಹೆಸರು ಕೂಡ ಬಹಿರಂಗವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿಗಳು ಶೇರ್ ಆಗುತ್ತಿವೆ. ಪದೇ ಪದೇ ಪ್ರಸಾರಕ್ಕೆ ಅಡೆತಡೆ ಎದುರಾಗುತ್ತಿರುವುದರ ಬಗ್ಗೆ ವೀಕ್ಷಕರ ಆತಂಕ ವ್ಯಕ್ತ ಪಡಿಸಿದ್ದಾರೆ. ನಿರ್ದೇಶಕ ದಿಲೀಪ್ ರಾಜ್ ನಟನಾಗಿ ಕಮ್ ಬ್ಯಾಕ್ ಮಾಡುತ್ತಿರುವುದರ ಬಗ್ಗೆ ಹಾಗೂ ಲುಕ್ ಬಗ್ಗೆ ಪ್ರೋಮೋ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.