
ಅಂತು ಇಂತೂ ಆಟ ಶುರುವಾಯ್ತು ಎನ್ನುಷ್ಟರಲ್ಲಿ ಗೀತಾ ಭಾರತಿ ಭಟ್ ಮನೆಯಿಂದ ಹೊರ ಬಂದಿದ್ದಾರೆ. ಇಡೀ ಮನೆ ಬ್ರೊ ಗೌಡ ಹೊರ ಹೋಗಬೇಕು ಎನ್ನುತ್ತಿದ್ದವರು, ಕೊನೇ ಕ್ಷಣದಲ್ಲಿ ಗೀತಾ ಹೋಗಬೇಕು ಎಂದು ಹೇಳಿದ್ದೇಕೆ? ಗೀತಾ ಗೇಮ್ ಪ್ಲಾನ್ ಸರಿ ಇಲ್ವಾ?
ದಿವ್ಯಾ , ಅರವಿಂದ್ ಬೆನ್ನ ಹಿಂದೆ ಮಾತನಾಡಿಕೊಂಡ ಸದಸ್ಯರು; ಶುಭಾ ಪೂಂಜಾ ನಂತರ ಊಟ ಫಿಕ್ಸ್?
ಕಾರ್ಕಳದ ಚೆಲುವೆ ಗೀತಾ ಭಾರತಿ ಭಟ್ ನಟಿ ಮಾತ್ರವಲ್ಲ, ಗಾಯಕಿ ಕೂಡ ಹೌದು. ಮೂರು ವಾರಗಳ ಕಾಲ ಮನೆಯಲ್ಲಿದ್ದು, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಗೀತಾ ನಾಮಿನೇಟ್ ಆದ ವಾರವೇ ಎಲಿಮನೇಟ್ ಆಗಿದ್ದಾರೆ. ಹಾಗಾಗಿ ಬ್ರೊ ಗೌಡ, ರಘು ಗೌಡ, ವಿಶ್ವನಾಥ್, ದಿವ್ಯಾ ಉರುಡುಗ ಸೇಫ್ ಆಗಿದ್ದಾರೆ. ಅಡುಗೆ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಗೀತಾ ನಾಮಿನೇಟ್ ಆಗಲು ಕಾರಣವೇನು? ವೀಕ್ಷಕರು ವೋಟ್ ಮಿಸ್ ಆಗಿದ್ಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.
ಗೀತಾ ಭಾವನಾತ್ಮಕ ವ್ಯಕ್ತಿ, ಎಷ್ಟೇ ಎಮೋಷನಲ್ ಆದರೂ ಅಳುವುದು ಅಭ್ಯಾಸ. ಬೇಜಾರಾದರೂ ಅಳುತ್ತಾರೆ, ಸಂತೋಷವಾದರೂ ಅಳುತ್ತಾರೆ, ಎಲ್ಲರನ್ನೂ ಮೋಸಗೊಳಿಸಲು ಪ್ರಯತ್ನಿಸುತ್ತಾರೆ, ಎಂಬ ಅಭಿಪ್ರಾಯವನ್ನು ಮನೆಯ ಸದಸ್ಯರು ನಾಮಿನೇಟ್ ಮಾಡುವ ವಾರದಲ್ಲಿ ಹೇಳಿದ್ದರು.
ಬೆದರು ಬೊಂಬೆ ದಿವ್ಯಾ ಸುರೇಶ್; ಲ್ಯಾಗ್ ಮಂಜು ಕಾಮಿಡಿ ಅತಿಯಾಗಿ ಕಣ್ಣೀರಿಟ್ಟ ಸ್ನೇಹಿತೆ!
ಮೊದಲ ವಾರ ಟಿಕ್‌ಟಾಕ್ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹಾಗೂ ಮೂರನೇ ವಾರ ಗೀತಾ ಎಲಿಮಿನೇಟ್ ಆಗಿದ್ದಾರೆ. ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ಅರವಿಂದ್ ಆಯ್ಕೆ ಆಗಿದ್ದಾರೆ. ನಾಲ್ಕನೇ ವಾರದ ಮೊದಲ ಟಾಸ್ಕ್ ಆಗಿ ಚದುರಂಗದಾಟ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.