
ಜೋಡಿ ಟಾಸ್ಕ್ ಮೂಲಕ ಬಿಗ ಬಾಸ್ ಮನೆಯಲ್ಲಿ ಕ್ಯೂಟ್ ಕಪಲ್ ಆಗಿ ಕಾಣಿಸಿಕೊಳ್ಳುತ್ತಿರುವ ದಿವ್ಯಾ ಉರುಗುಡ ಹಾಗೂ ಅರವಿಂದ್ ಬಗ್ಗೆ ಮನೆಯಲ್ಲಿ ಚರ್ಚೆ ಶುರುವಾಗಿದೆ. ದಿವ್ಯಾ ನಿಜಕ್ಕೂ ಪೋಸೆಸಿವ್‌ನೆಸ್ ತೋರಿಸುತ್ತಿದ್ದಾರಾ? ನಿಧಿ ಸುಬ್ಬಯ್ಯ, ಗೀತಾ ಹೇಳುತ್ತಿರುವುದು ನಿಜವೇ?
ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ
ಜೋಡಿ ಟಾಸ್ಕ್ ಆರಂಭವಾಗುವ ಮುನ್ನ ದಿವ್ಯಾ ಉರುಡುಗ ಪ್ರಶಾಂತ್ ಸಂಬರಗಿ ಜೊತೆ ತುಂಬಾನೇ ಕ್ಲೋಸ್ ಆಗಿದ್ದರು. ಯಾವುದೇ ವಿಚಾರವಿದ್ದರೂ ಮುಚ್ಚು ಮರೆ ಮಾಡದೆ ಹಂಚಿಕೊಳ್ಳುತ್ತಿದ್ದರು, ಚರ್ಚಿಸುತ್ತಿದ್ದರು. ಆದರೆ ಜೋಡಿ ಟಾಸ್ಕ್ ಆರಂಭವಾಗಿದ್ದೇ ಆಗಿದ್ದು ದಿವ್ಯಾ ದಿನೇ ದಿನೇ ಅರವಿಂದ್ ಜೊತೆ ವರ್ತಿಸುತ್ತಿರುವ ರೀತಿ ಬದಲಾಗಿದೆ ಎಂದು ಮನೆಯಲ್ಲಿರುವ ಸದಸ್ಯರೇ ಮಾತನಾಡಿಕೊಳ್ಳುತ್ತಿದ್ದಾರೆ.
ಅರವಿಂದ್ ವಿಚಾರದಲ್ಲಿ ದಿವ್ಯಾ ಉರುಗುಡ ಪೋಸೆಸಿವ್‌ನೆಸ್ ತೋರಿಸುತ್ತಿದ್ದಾರೆ ಎಂದು ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಬಗ್ಗೆ ಹೇಳಿದ್ದರು. ಪ್ರಶಾಂತ್ ಜೊತೆ ಕ್ಲೋಸ್ ಆಗಿದ್ದ ದಿವ್ಯಾ ಉರುಡುಗ ಅರವಿಂದ್‌ಗೆ ಜೋಡಿ ಆದ ಮೇಲೆ ವರ್ತನೆಯೇ ಬದಲಾಗಿದೆ ಎಂದು ನಿಧಿ ಸುಬ್ಬಯ್ಯ ರಾತ್ರಿ ಮಲಗುವ ವೇಳೆ ಶುಭ ಪೂಂಜಾಗೆ ಹೇಳಿದ್ದರು.
ಬೆದರು ಬೊಂಬೆ ದಿವ್ಯಾ ಸುರೇಶ್; ಲ್ಯಾಗ್ ಮಂಜು ಕಾಮಿಡಿ ಅತಿಯಾಗಿ ಕಣ್ಣೀರಿಟ್ಟ ಸ್ನೇಹಿತೆ!
ಅಲ್ಲದೆ ಅರವಿಂದ್ ವಿಚಾರದಲ್ಲಿ ದಿವ್ಯಾ ಪೋಸೆಸಿವ್‌ನೆಸ್ ಮಾಡುತ್ತಿದ್ದಾರೆ ಎಂದು ಮಂಜು ಪಾವಗಡ ಬಳಿ ದಿವ್ಯಾ ಸುರೇಶ್ ಹೇಳಿಕೊಂಡಿದ್ದಾರೆ. ಗೀತಾ ಪ್ರಶಾಂತ್ ಕೂಡ ಈ ಜೋಡಿ ಬಗ್ಗೆ ಮಾತನಾಡಿದ್ದಾರೆ. ಇವರಿಬ್ಬರು ಲವ್ ಮಾಡುತ್ತಿದ್ದಾರೋ ಹೇಗೆ ಎಂದು ಗೀತಾ ಪ್ರಶ್ನೆ ಮಾಡಿದ್ದಾರೆ ಇದಕ್ಕೆ ದಿವ್ಯಾ ಉರುಡುಗ ನಾವು ಜೋಡಿ ಟಾಸ್ಕ್ ಅಂತ ಒಟ್ಟಾಗಿ ಇದ್ದೇವೆ ಎಂದು ಹೇಳಿ ಸುಮ್ಮನಾಗಿದ್ದಾರೆ. ಶುಭಾ ಪೂಂಜಾ ನಂತರ ನಮ್ಮೆಲ್ಲರಿಗೂ ಇನ್ನೊಂದು ಮದುವೆ ಊಟ ಸಿಗಬಹುದು ಎಂದು ಗೀತಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.