ಕೊರೋನಾ ವಾರಿಯರ್ಸ್ ಸೇವೆಗೆ ಸಲಾಂ; ಸುಶೀಲ್ ಸಾಗರ್ ತಂಡದಿಂದ ವಿಶೇಷ ಹಾಡು ಬಿಡುಗಡೆ!

Published : May 29, 2021, 07:25 PM ISTUpdated : May 29, 2021, 08:17 PM IST
ಕೊರೋನಾ ವಾರಿಯರ್ಸ್ ಸೇವೆಗೆ ಸಲಾಂ;  ಸುಶೀಲ್ ಸಾಗರ್ ತಂಡದಿಂದ ವಿಶೇಷ ಹಾಡು ಬಿಡುಗಡೆ!

ಸಾರಾಂಶ

ಕೊರೋನಾ ವಾರಿಯರ್ಸ್‌ಗೆ ಹಾಡಿನ ಮೂಲಕ ಸಲಾಂ ಹೇಳಿದ ಕರ್ನಾಟಕ ವಿಶೇಷ ಹಾಡು ಬಿಡುಗಡೆ ಮಾಡಿದ ಸುಶೀಲ್ ಸಾಗರ್ ತಂಡ ನಟ ವಿಶಿಷ್ಠ, ಕಿರಣ್ ಶ್ರೀನಿವಾಸ್, ಬಿಗ್‌ಬಾಸ್ ಶೈನ್ ಶೆಟ್ಟಿ ಸೇರಿದಂತೆ ಕಲಾವಿದರ  ದಂಡು ಭಾಗಿ 

ಬೆಂಗಳೂರು(ಮೇ.29):  ಕೊರೋನಾ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಸೇವೆಯನ್ನು ಅಕ್ಷರದಲ್ಲಿ ಹಿಡಿದಿಡಲು ಸಾಧ್ಯವಿಲ್ಲ.  ಕೃತಜ್ಞತೆ, ಧನ್ಯವಾದ ಮಾತುಗಳು ವಾರಿಯರ್ಸ್ ಸೇವೆಗೆ ಸಮನಲ್ಲ. ನಿಸ್ವಾರ್ಥ ಸೇವೆ, ಜೀವ ಉಳಿಸುವ ಕಾರ್ಯದಲ್ಲಿ ತೊಡಗಿರುವ ಕೊರೋನಾ ವಾರಿಯರ್ಸ್‌ಗೆ ಸಲಾಂ ಹೇಳಲು ಕನ್ನಡದಲ್ಲಿ ವಿಶೇಷ ಹಾಡೊಂದು ಬಿಡುಗಡೆಯಾಗಿದೆ. 

Youtube LIVE : ಜೀವರಕ್ಷಕರ ಹೃದಯಕ್ಕೆ ಎದೆತುಂಬಿದ ಹಾಡು

ಟಿವಿ ಲೋಕದ ಪರಿಚಿತ ಹೆಸರಾದ ಸುಶೀಲ್ ಸಾಗರ್ ನಿರ್ದೇಶನದಲ್ಲಿ ಭರವಸೆ ಬೆಳಕು ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಮೂಲಕ ಗೌರವ ಸಲ್ಲಿಸಲು ಹಲವು ಕಲಾವಿದರು ಸಾಥ್ ನೀಡಿದ್ದಾರೆ. ಕೊರೋನಾ ವಾರಿಯರ್ಸ್ ಆದ ವೈದ್ಯರು, ನರ್ಸ್, ಆರೋಗ್ಯ ಸಿಬ್ಬಂದಿ, ಪೊಲೀಸರು, ಸ್ವಯಂ ಸೇವಕರು, ಪೌರ ಕಾರ್ಮಿಕರು, ಮಾಧ್ಯಮ ಮಿತ್ರರು ಸೇರಿದಂತೆ ಕೊರೋನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಪ್ರತಿಯೊಬ್ಬರ ಸೇವೆಗೆ ಈ ಹಾಡನ್ನು ಅರ್ಪಿಸಲಾಗಿದೆ.

ಕೊರೋನಾ ವಾರಿಯರ್‌ಗಳಿಗೆ ಹಾಡಿನ ಕೃತಜ್ಞತೆ; ಸುಶೀಲ್ ಸಾಗರ್ ತಂಡದ ವಸಿಷ್ಠ ಸಿಂಹ ಸಾಥ್

ಸಿಟಿ ಸವಾರಿ ಯೂಟ್ಯೂಬ್ ಚಾನೆಲ್ ಮೂಲಕ ಹಾಡು ಬಿಡುಗಡೆಯಾಗಿದೆ.  ಸುಶೀಲ್ ಸಾಗರ್ ಪರಿಕಲ್ಪನೆ ಹಾಗೂ ನಿರ್ದೇಶದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ನಟ ವಶಿಷ್ಠ, ಕಿರಣ್ ಶ್ರೀನಿವಾಸ್, ಬಿಗ್‌ಬಾಸ್ ಶೈನ್ ಶೆಟ್ಟಿ, ನಟಿ ಅನುಪಮ, ಬಿಗ್‌ಬಾಸ್ ಸ್ಪರ್ಧಿ ರಘು, ನಟಿ ಹಿತಾ ಚಂದ್ರಶೇಖರ್, ನಿರೂಪಕಿ ಚೈತ್ರಾ ವಾಸುದೇವನ್ ಕಾಣಿಸಿಕೊಂಡಿದ್ದಾರೆ. ಇನ್ನು ಯುವ ಗಾಯಕರಾದ ಅಶ್ವಿನ್ ಶರ್ಮಾ, ಆಶಾಭಟ್, ರಂಗರಾಜನ್ ದನಿಗೂಡಿಸಿದ್ದಾರೆ. ಭರವಸೆಯ ಬೆಳಕು ಹಾಡಿಗೆ ಸಾಹಿತ್ಯವನ್ನು ರಂಜನಿ ಎಸ್ ನೀಡಿದ್ದಾರೆ.  ಆಕಾಶ್ ಪರ್ವ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹಾಡಿನ ಹೆಸರು . "ಭರವಸೆಯ ಬೆಳಕು". 
ಸಾಹಿತ್ಯ - ರಂಜನಿ ಎಸ್
ಸಂಗೀತ: ಆಕಾಶ್ ಪರ್ವ
ಹಿನ್ನಲೆ ಗಾಯನ: ಅಶ್ವಿನ್ ಶರ್ಮಾ, ಆಶಾಭಟ್, ರಂಗರಾಜನ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!