ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ನೀವು ಎಲ್ ಎಲ್ ಬಿ ಓದುವಾಗ ಯಾರನ್ನಾದರೂ ಲವ್ ಮಾಡಿದ್ರಾ?' ಎಂದು ನಟಿ ತಾರಿಣಿ ಪ್ರಶ್ನೆ ಕೇಳಿ ಸ್ವತಃ ತಾವೂ ನಗತೊಡಗಿದರು. ಬಳಿಕ ನಗುನಗುತ್ತಲೇ ಇದ್ದ ಸಿದ್ದರಾಮಯ್ಯ ಲವ್ ಮಾಡಿದ್ದೆ ಅಂತ ಅಥವಾ ಮಾಡಿಲ್ಲ ಅಂತಲೂ ಉತ್ತರ ಕೊಡದೇ ಎಲ್ಲರ ನಗೆಯೊಡನೆ ತಮ್ಮ ನಗೆಯನ್ನು ಸೇರಿಸಿ ಅಲ್ಲೊಂದು ನಗುವಿನ ಸಾಗರ ನಿರ್ಮಿಸಿಬಿಟ್ಟರು.
ಕಿರುತೆರೆಯ ಮಿಂಚಿಂಗ್ ಬೇರೆಯದೇ ಲೋಕ! ಅಲ್ಲಿನ ರಿಯಾಲಿಟಿ ಶೋಗಳು, ಸೀರಿಯಲ್‌ಗಳು ಹಾಗೂ ಸೆಲೆಬ್ರಿಟಿಗಳು ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದ್ದಾರೆ. ಹೇಳುತ್ತಾ ಹೋದರೆ ಮುಗಿಯಲಾರದು ಎಂಬಷ್ಟು ಇವೆ ಸೀರಿಯಲ್ ಲೋಕದ ರೋಚಕ ಕಥೆಗಳು. ಇದೀಗ, ಕನ್ನಡದ ಚಾನೆಲ್‌ಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ 'ಅನುಬಂಧ' ಅವಾರ್ಡ್ಸ್ ಕಾರ್ಯಕ್ರಮ ಸದ್ಯದ ಸೆನ್ಸೇಷನ್ ಎನ್ನಬಹುದು.
ಕಲರ್ಸ್ ಕನ್ನಡದ 'ಅನುಬಂಧ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಲಾಗಿತ್ತು. ಈ ವೇಳೆ ಸಿದ್ದರಾಮಯ್ಯನವರು ಅತಿಥಿ ಜಾಗದಲ್ಲಿದ್ದು, ಸುತ್ತಲೂ ಬಹಳಷ್ಟು ಸೆಲೆಬ್ರಿಟಿಗಳು ಸುತ್ತ ಕುಳಿತಿದ್ದರು. ಅಲ್ಲಿ ಒಬ್ಬರಾದ ಬಳಿಕ ಮತ್ತೊಬ್ಬರು ಪ್ರಶ್ನೆ ಕೇಳಿದರು.
ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯ 'ನಿಮಗೆ ಅಡುಗೆ ಮಾಡಲಿಕ್ಕೆ ಬರುತ್ತಾ?' ಎಂಬ ಪ್ರಶ್ನೆ ಕೇಳಿದಾಗ 'ಅನ್ನ ಮಾತ್ರ ಮಾಡಲು ಬರುತ್ತೆ' ಎಂದರು ಸಿದ್ದರಾಮಯ್ಯ. ಬಳಿಕ 'ನೀವು ಹೆಂಡತಿ ಯಾವತ್ತಾದರೂ ನಿಮ್ಮನ್ನ ಬೈಯ್ದಿದಾರಾ?' ಎಂಬ ಪ್ರಶ್ನೆಗೆ 'ನಗು'ವಿನ ಮೂಲಕ 'ಮೌನ'ವನ್ನೇ ಉತ್ತರ ಕೊಟ್ಟರು ಸಿದ್ದರಾಮಯ್ಯ. ಆ ಬಳಿಕ ತೂರಿಬಂದ ಪ್ರಶ್ನೆ ಕೇಳಿ ಅಲ್ಲಿರುವ ಎಲ್ಲರೂ ನಗೆಗಡಲಿನಲ್ಲಿ ತೇಲಿಬಿಟ್ಟರು.
'ನನ್ನ ಖುಷಿಗೆ ಕಾರಣನೇ ಅವನು': ಸರಳವಾಗಿ ಸಪ್ತಪದಿ ತುಳಿದ ಕಿರುತೆರೆ ನಟಿ ರಮ್ಯ ಗೌಡ!
'ಒಲವಿನ ನಿಲ್ಡಾಣ' ಧಾರಾವಾಹಿಯ ನಟಿ 'ತಾರಿಣಿ' ಕೇಳಿದ ಪ್ರಶ್ನೆಗೆ ಅಲ್ಲಿದ್ದವರೆಲ್ಲ ನಗೆಗಡಲಿನಲ್ಲಿ ತೇಲಿದರು. ಸ್ವತಃ ಸಿದ್ದರಾಮಯ್ಯನವರು ಹುಬ್ಬು ಮೇಲೇರಿಸಿಕೊಂಡು ವಿಶೇಷ 'ಲುಕ್' ಕೊಟ್ಟು ನಗಲಾರಂಭಿಸಿದರು.
ಹಾಗಿದ್ದರೆ, ನಟಿ ತಾರಿಣಿ ಕೇಳಿದ ನಗೆಹುಟ್ಟಿಸುವ ಅಂತಹ ಪ್ರಶ್ನೆ ಏನು? ಉತ್ತರ ಕೇಳಿದರೆ ನೀವೂ ನಗದೇ ಇರಲಾರಿರಿ!
ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಹೊಸ ಹೆಜ್ಜೆ; 'ವನ ತೈಲಂ' ಕಮಾಲ್!
ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 'ನೀವು ಎಲ್‌ಎಲ್‌ಬಿ ಓದುವಾಗ ಯಾರನ್ನಾದರೂ ಲವ್ ಮಾಡಿದ್ರಾ?' ಎಂದು ನಟಿ ತಾರಿಣಿ ಪ್ರಶ್ನೆ ಕೇಳಿದಾಗ ಸ್ವತಃ ತಾವೂ ನಗತೊಡಗಿದರು. ಬಳಿಕ ನಗುನಗುತ್ತಲೇ ಇದ್ದ ಸಿದ್ದರಾಮಯ್ಯ ಲವ್ ಮಾಡಿದ್ದೆ ಅಂತ ಅಥವಾ ಮಾಡಿಲ್ಲ ಅಂತಲೂ ಉತ್ತರ ಕೊಡದೇ ಎಲ್ಲರ ನಗೆಯೊಡನೆ ತಮ್ಮ ನಗೆಯನ್ನು ಸೇರಿಸಿ ಅಲ್ಲೊಂದು ನಗುವಿನ ಸಾಗರವನ್ನೇ ನಿರ್ಮಿಸಿಬಿಟ್ಟರು.