Bigg Boss ಮನೆಗೆ ಸ್ಪರ್ಧಿಯಾಗಿ ಚಾರ್ಲಿ! ಖುಷಿಯಿಂದ ಕುಣಿದ ನಾಯಿಗಳು ಏನ್​ ಹೇಳಿದ್ವು ಕೇಳಿ...

Published : Sep 24, 2023, 05:48 PM IST
Bigg Boss ಮನೆಗೆ ಸ್ಪರ್ಧಿಯಾಗಿ ಚಾರ್ಲಿ! ಖುಷಿಯಿಂದ ಕುಣಿದ ನಾಯಿಗಳು ಏನ್​ ಹೇಳಿದ್ವು ಕೇಳಿ...

ಸಾರಾಂಶ

 ಚಾರ್ಲಿ 777 ಮೂಲಕ ಹವಾ ಸೃಷ್ಟಿಸಿದ್ದ ಚಾರ್ಲಿ ನಾಯಿ ಈಗ ಬಿಗ್​ಬಾಸ್​ 10 ಮನೆಯ ಪ್ರಥಮ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದೆ. ಉಳಿದ ನಾಯಿಗಳು ಹೇಳಿದ್ದೇನು ಕೇಳಿ  

ಅಕ್ಟೋಬರ್ 8ರಿಂದ 'ಬಿಗ್ ಬಾಸ್ ಕನ್ನಡ ಸೀಸನ್ 10' ಷೋ  ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರೋ ಸುದ್ದಿ ಅನೌನ್ಸ್​ ಆಗಿದೆ. ಈ ಕಾರ್ಯಕ್ರಮ ಯಾವಾಗ, ಯಾವ ಚಾನೆಲ್​ನಲ್ಲಿ ಶುರುವಾಗುತ್ತೆ ಎಂಬ ಬಗ್ಗೆ ಫ್ಯಾನ್ಸ್​ಗಳಲ್ಲಿ ಇದ್ದ ಕುತೂಹಲ ಕೊನೆಗೂ ತಣಿದಿದೆ. ಈಗ ಏನಿದ್ದರೂ ಮುಂದಿನ ಹಂತದ ಕುತೂಹಲ, ಅದೇನೆಂದರೆ,  ಯಾರು ಯಾರು ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬುದು.   ಯಾವ ಸಿನಿಮಾ ನಟ ನಟಿಯರು, ಯಾವ ಕಿರುತೆರೆ ಸ್ಟಾರ್ ಮನೆಯೊಳಗೆ ಬರಬಹುದು ಎಂಬ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗಿದೆ.  ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬರುತ್ತಿದ್ದು, ಕನ್ನಡದಲ್ಲಿ 9 ಸೀಸನ್‌ಗಳು ಬಂದಿವೆ. ಹತ್ತನೆ ಸೀಸನ್‌ಗೆ ಭರ್ಜರಿ ತಯಾರಿ ನಡೆದಿದೆ. 
 
ಅನುಬಂಧ ಅವಾರ್ಡ್ಸ್​ ಸಂದರ್ಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10 ಬಗ್ಗೆ ಘೋಷಿಸಲಾಗಿದೆ. ಅಕ್ಟೋಬರ್ 8 ರಿಂದ ಅದ್ಧೂರಿಯಾಗಿ ಆರಂಭ ಆಗುತ್ತಿರುವುದು  ಪ್ರೋಮೊ ನೋಡಿದರೆ ತಿಳಿಯುತ್ತದೆ.  ಅಸಲಿ ಆಟ  10ರಿಂದ ಆರಂಭ ಆಗಲಿದೆ.  ಕಳೆದ 9 ಸೀಸನ್‌ಗಳಿಗಿಂತ ಈ ಸೀಸನ್ ಹೆಚ್ಚು ವಿಭಿನ್ನವಾಗಿರುತ್ತದೆ ಎಂದು ಹೇಳಲಾಗಿತ್ತು. ಎರಡು ದಿನಗಳ ಸ್ಪರ್ಧಿಗಳ ಪರಿಚಯ ಮತ್ತು ಅವರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗುತ್ತೆ. ಈ ಬಾರಿ   17 ಸ್ಪರ್ಧಿಗಳು ಬಿಗ್​ಬಾಸ್​ನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಆದರೆ ಇದರಲ್ಲಿ ತುಂಬಾ ಡಿಫರೆಂಟ್​ ಆಗಿರೋದು ಮೊದಲ ಸ್ಪರ್ಧಿ, ಅದುವೇ ಚಾರ್ಲಿ!

ಸಿಎಂ ಸಿದ್ದರಾಮಯ್ಯನವ್ರು ಹೆಂಡ್ತಿಗೆ ಹೆದರ್ತಾರಾ? ಇದಕ್ಕೆ ಖುದ್ದು ಅವ್ರೇ ಕೊಟ್ಟ ಉತ್ರ ಏನು ನೋಡಿ

ಕೆಜಿಎಫ್ ಖ್ಯಾತಿಯ ರೂಪ ರಾಯಪ್ಪ ಸೀಸನ್ 10ರಲ್ಲಿ ಕಾಣಿಸೋಕು ಪಕ್ಕಾ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಬಾರಿ ಬಿಗ್ ಮನೆಯಲ್ಲಿ ರಾಜಕಾರಣಿಯೊಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ಖ್ಯಾತ ರಾಜಕಾರಣಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ. ನಾಗಿಣಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಸೀರಿಯಲ್ ನಟಿ ನಮ್ರತಾ ಗೌಡ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಜನಪ್ರಿಯತೆ ಪಡೆದ ಭೂಮಿ ಬಸವರಾಜ್ ಹೆಸರು ಬಿಗ್ ಬಾಸ್ ರೇಸ್ ನಲ್ಲಿದೆ. ಇದರ ನಡುವೆಯೇ  ಚಾರ್ಲಿ 777 ಚಿತ್ರದ ಮೂಲಕ ಮೋಡಿ ಮಾಡಿರುವ ನಾಯಿ ಮೊದಲ ಸ್ಪರ್ಧಿಯಾಗಿದ್ದು, ಅಧಿಕೃತ ಮಾಹಿತಿ ಹೊರಬಂದಿದೆ.

ಯಾವುದೇ ಸ್ಪರ್ಧಿ ಮನೆಯೊಳಕ್ಕೆ ಹೋದರೆ ಅದರ ಬಗ್ಗೆ ಅವರ ಸ್ನೇಹಿತರು, ಕುಟುಂಬಸ್ಥರು ಮಾತನಾಡುವುದು ಸಹಜ. ಅದರಂತೆಯೇ ಚಾರ್ಲಿಯ ಕುರಿತೂ ಅದರ ನಾಯಿ ಫ್ರೆಂಡ್ಸ್​ ಒಂದಿಷ್ಟು ಮಾಹಿತಿ ನೀಡಿದ್ದಾರೆ. ಅನುಬಂಧ ಅವಾರ್ಡ್ಸ್​ ಸಂದರ್ಭದಲ್ಲಿ ಇದನ್ನು ರಿವೀಲ್​ ಮಾಡಲಾಗಿದೆ. ಚಾರ್ಲಿ ತುಂಬಾ ತುಂಟಿ. ಆ್ಯಕ್ಟಿಂಗ್​ ಅಂತ ಬಂದರೆ ತಿಂದ್ ಹಾಕಿ ಬಿಡೋಳು ಎಂದು ಒಂದು ನಾಯಿ ಹೇಳಿದ್ರೆ, ಚಾರ್ಲಿಗೆ ಚಳಿಗಾಲ ಆಗಲ್ಲ, ತುಂಬಾ ನಡುಗಿ ಬಿಡ್ತಾಳೆ, ಆದ್ರೂ ಹಿಮಾಲಯಕ್ಕೆ ಹೋಗಿ ನಟಿಸಿದ್ದು ನೋಡಿ ಕಣ್ಣೀರೇ ಬಂತು ಎಂದು ಇನ್ನೊಂದು ನಾಯಿ ಹೇಳಿದೆ. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿದ ಚಾರ್ಲಿಗೆ ನ್ಯಾಷನಲ್​ ಅವಾರ್ಡ್​ ಬಂದಿದ್ದು ನೋಡಿ ಇಡೀ ನಾಯಿ ಪರಂಪರೆಗೆ ಹೆಮ್ಮೆ ತಂದಿದೆ ಎಂದು ಇನ್ನೊಂದು ನಾಯಿ ಹೇಳಿದೆ. 

ರೈಲಲ್ಲಿ 'ನೀನ್​ ಚಂದಾನೆ' ಹಾಡಿಗೆ ಆ್ಯಂಕರ್​ ಅನುಶ್ರೀ ಸಕತ್​ ಎಂಜಾಯ್​: ಇಲ್ಲೂ ಮದ್ವೆ ವಿಷ್ಯ ಕೆದಕಿದ ಫ್ಯಾನ್ಸ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!